ಮಿಸ್ಡ್ ಕಾಲ್ ನೀಡಿ ಬೆಂಗಳೂರಿನ ಎನ್‌ಜಿಓ ಗೆಲ್ಲಿಸಿ

ಈ ವಿಶಿಷ್ಟಬಗೆಯ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿರುವ 13 ಎನ್‌ಜಿಓಗಳ ನಡುವೆ ಏಪ್ರಿಲ್ 5, 2013ರಂದು ಅಂತಿಮ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಗೆದ್ದ ಸಂಸ್ಥೆಗೆ ಮಹೀಂದ್ರ ಸ್ಪಾರ್ಕ್ ದಿ ರೈಸ್ ವತಿಯಿಂದ 40 ಲಕ್ಷ ರು. ಭಾರೀ ಮೊತ್ತ ದೊರೆಯಲಿದೆ. ಹಾಗು ಮೊದಲ ಎರಡು ರನ್ನರ್ ಅಪ್‌ಗಳಿಗೆ ತಲಾ 20 ಲಕ್ಷ ರು. ದೊರೆಯಲಿದೆ.
ಸಾರ್ವಜನಿಕರು ಈ 13 ಎನ್‌ಜಿಓ ಸಂಸ್ಥೆಗಳಿಗೆ ನೀಡುವ ಮತಗಳು ಮತ್ತು ಏಪ್ರಿಲ್ 5ರಂದು ತಜ್ಞರ ತಂಡದ ಮುಂದೆ ಆಯಾ ಸಂಸ್ಥೆ ನೀಡುವ ಪ್ರೆಸೆಂಟೇಷನ್ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತಿದೆ. ಈಗಾಗಲೆ ವೆಬ್ ಸೈಟ್ ಮುಖಾಂತರ, ಎಸ್ಎಮ್ಎಸ್ ಮುಖಾಂತರ ಮತ್ತು ಮಿಸ್ಡ್ ಕಾಲ್ ಮುಖಾಂತರ ಜನರು ಮತ ಹಾಕುತ್ತಿದ್ದಾರೆ.
ಮಾಡಬೇಕಿರುವುದೇನು? : ಬೆಂಗಳೂರು ಮೂಲದ 'ಮೆಂಟರ್ ಟುಗೆದರ್' ಸಂಸ್ಥೆಯನ್ನು ಈ ಸ್ಪರ್ಧೆಯಲ್ಲಿ ಗೆಲ್ಲಿಸಬೇಕಿದ್ದರೆ ನೀವು ಮಾಡಬೇಕಿರುವುದು ಇಷ್ಟೆ. 02261850493 ಮೊಬೈಲ್ ನಂಬರಿಗೆ ನಿಮ್ಮ ಮೊಬೈಲಿನಿಂದ ಒಂದೇ ಒಂದು ಮಿಸ್ಡ್ ಕಾಲ್ ನೀಡಿರಿ. ಇಷ್ಟು ಮಾಡಲು ಸಾಧ್ಯವಿಲ್ಲವೆ? ಈಗಲೇ ಫೋನನ್ನು ಕೈಗೆತ್ತಿಕೊಂಡು ಒಂದು ಮಿಸ್ಡ್ ಕಾಲ್ ನೀಡಿರಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿರಿ.
ಇನ್ಫೋಸಿಸ್, ಎಚ್‌ಪಿ, ಐಬಿಎಮ್, ಎಸ್ಎಪಿ ಸಾಫ್ಟ್ ವೇರ್ ಕಂಪನಿಗಳಲ್ಲಿನ ತಜ್ಞ ಮಾರ್ಗದರ್ಶಿಗಳ ಸಹಾಯವನ್ನು ಪಡೆದು ಸಾವಿರಾರು ಬಡ ಯುವಕ, ಯುವತಿಯರಿಗೆ 'ಮೆಂಟರ್ ಟುಗೆದರ್' ಸಂಸ್ಥೆ ಬದುಕುವ ದಾರಿಯನ್ನು ತೋರಿಸಿದೆ. ಈ ಸ್ಪರ್ಧೆಯಲ್ಲಿ ವಿಜೇತರಾಗಿ ಈ ಬೃಹತ್ ಮೊತ್ತದ ಗ್ರಾಂಟ್ ಕೂಡ ಲಭಿಸಿದರೆ ಇನ್ನಷ್ಟು ದಿಟ್ಟ ಹೆಜ್ಜೆಗಳನ್ನು ಇಡಲು ಸಾಧ್ಯ 'ಮೆಂಟರ್ ಟುಗೆದರ್' ಸಂಸ್ಥೆ ಹೇಳಿದೆ.
ಮೆಗಾ ಫೈನಲ್‌ನಲ್ಲಿ ಯಾಯ್ವಾವ ಸಂಸ್ಥೆ ಕಣದಲ್ಲಿವೆ, ಮತ ಹೇಗೆ ಹಾಕಬೇಕು, ಸ್ಪರ್ಧೆಯ ವಿವರಗಳೇನು ಎಂಬುದನ್ನು ತಿಳಿಯಲು ಈ ಕೊಂಡಿ ಕ್ಲಿಕ್ಕಿಸಿ. ಹಾಗೆಯೆ, ಮಾರ್ಚ್ 20ರೊಳಗೆ 02261850493 ಮೊಬೈಲ್ ನಂಬರಿಗೆ ಮಿಸ್ಡ್ ಕರೆ ನೀಡಿ ಬೆಂಗಳೂರು ಮೂಲದ ಸಂಸ್ಥೆಯನ್ನು ಪ್ರೋತ್ಸಾಹಿಸಿ. ಮತ ಹಾಕಲು ಕೊನೆ ದಿನಾಂಕ ಮಾರ್ಚ್ 20, ತ್ವರೆ ಮಾಡಿರಿ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications