ವೆಬ್ ಲೋಕಕ್ಕೆ ಕಾಲಿಟ್ಟ ಬೆಟ್ಟದ ತಾಯಿ ಚಾಮುಂಡಿ

ಮೈಸೂರು, ಮಾ.18: ಬೆಟ್ಟದ ತಾಯಿ ಚಾಮುಂಡೇಶ್ವರಿ ತನ್ನ ಭಕ್ತರಿಗೆ ಇನ್ನಷ್ಟು ಹತ್ತಿರವಾಗಿದ್ದಾಳೆ. ಚಾಮುಂಡಿ ತಾಯಿ ಪೂಜೆಗೆ ಟಿಕೆಟ್ ಬುಕ್ಕಿಂಗ್, ಇತರೆ ಸೇವಾ ವಿವರಗಳು ಈಗ ಆನ್ ಲೈನ್ ನಲ್ಲಿ ಲಭ್ಯವಿದೆ.

ಇದರ ಜೊತೆಗೆ ನಾಡಿನ ಅಧಿದೇವವತೆ ತಾಯಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರಲಾಗದ ಭಕ್ತರು ತಾವಿರುವ ಜಾಗದಿಂದಲೇ ಆನ್ ಲೈನ್ ಮೂಲಕ ಪೂಜೆ ಸಲ್ಲಿಸುವ ಅವಕಾಶ ಕೂಡಾ ಕಲ್ಪಿಸಿಕೊಡಲಾಗಿದೆ ಎಂದು ಆನ್ ಲೈನ್ ಸೇವೆಗೆ ಚಾಲನೆ ನೀಡಿದ ಪ್ರಾದೇಶಿಕ ಆಯುಕ್ತೆ ಎಂ.ವಿ ಜಯಂತಿ ಅವರು ಹೇಳಿದರು.

ಚಾಮುಂಡೇಶ್ವರಿ ದೇಗುಲದ ಇ ಸೇವಾ ಆನ್ ಲೈನ್ ಪೂಜಾ ವ್ಯವಸ್ಥೆ ಸದ್ಯಕ್ಕೆ ಪ್ರಾಯೋಗಿಕವಾಗಿ ಜಾರಿಯಲ್ಲಿದೆ. ಭಕ್ತರ ಪ್ರತಿಕ್ರಿಯೆ ನೋಡಿಕೊಂಡು ಇತರೆ ದೇಗುಲಗಳಿಗೂ ಈ ಸೇವೆಯನ್ನು ಅಳವಡಿಸಲು ಚಿಂತಿಸಲಾಗಿದೆ ಎಂದರು.

Mysore Chamundi hills Temple goes Online

ಈ ದೇವಸ್ಥಾನದ ಸಮಗ್ರ ಮಾಹಿತಿ ಮತ್ತು ಸೇವೆಯನ್ನು ವಿಶ್ವದ ಮೂಲೆ ಮೂಲೆಗೆ ತಲುಪಿಸುವ ನಿಟ್ಟಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಇ ಸೇವಾ ಆನ್ ಲೈನ್ ಪೂಜೆ ಸೌಕರ್ಯವನ್ನು ಆರಂಭಿಸಿದೆ. ಭಕ್ತಾದಿಗಳು ಆನ್ ಲೈನ್ ಮೂಲಕ ಕಾಣಿಕೆಗಳನ್ನು ಸಲ್ಲಿಸಬಹುದಾಗಿದೆ. ಆನ್ ಲೈನ್ ಹಣ ವರ್ಗಾವಣೆ ಇತರೆ ವ್ಯವಹಾರಗಳನ್ನು ಕೆನರಾ ಬ್ಯಾಂಕ್ ನಿರ್ವಹಿಸುತ್ತಿದ್ದು,ಸಂಪೂರ್ಣ ಸುರಕ್ಷಿತವಾಗಿರುತ್ತದೆ.

ದಿನಾಂಕ, ಸಮಯ, ಪೂಜೆ ವಿವರಗಳನ್ನು ತಿಳಿಸಿ ನಿಗದಿತ ಹಣವನ್ನು ಪಾವತಿಸಿ ಆನ್ ಲೈನ್ ಪೂಜೆ ಮಾಡಲು ಅಣಿಯಾಗಬಹುದು. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಸ್ಥಾನಗಳ ಪೈಕಿ ಇದೇ ಮೊದಲ ಬಾರಿ ಈ ರೀತಿ ಸೌಲಭ್ಯ ನೀಡಲಾಗಿದೆ. ವೆಬ್ ಸೈಟ್ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಗ್ರಾಮೋಪಾದ್ಯೆ ಹೇಳಿದ್ದಾರೆ.

ಏನಿದೆ ವೆಬ್ ತಾಣದಲ್ಲಿ : ದೇಗುಲದ ದಿನ ನಿತ್ಯದ ಪೂಜೆ ಸಮಯ, ಅಭಿಷೇಕ ಸಮಯ, ಅನ್ನ ದಾಸೋಹ, ಬಸ್ ವ್ಯವಸ್ಥೆ, ಭಕ್ತಾದಿಗಳಿಗೆ ಸೂಚನೆಗಳು, ಚಾಮುಂಡಿ ಬೆಟ್ಟದ ಇತಿಹಾಸ ಇದೆ. 10 ರು ಕುಂಕುಮ ಅಷ್ಟೋತ್ತರದಿಂದ ಹಿಡಿದು 15,000 ರು ನೀಡಿ ಒಂದು ದಿನದ ಅನ್ನ ದಾಸೋಹ ಸೇವೆ ವಿವರಗಳಿದೆ.ಆದರೆ, ಬೆಟ್ಟದಲ್ಲಿ ಉಳಿಯಲು ಇಚ್ಛಿಸುವ ಭಕ್ತಾದಿಗಳಿಗೆ ಆನ್ ಲೈನ್ ಮೂಲಕ ಗೆಸ್ಟ್ ಹೌಸ್ ಕಾಯ್ದಿರಿಸುವ ಸೌಕರ್ಯ ಇನ್ನೂ ನೀಡಿಲ್ಲ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಕಾರ್ಯನಿರ್ವಾಹಕ ಅಧಿಕಾರಿ
ಇಮೇಲ್: [email protected]
ಕಚೇರಿ ಸಂಪರ್ಕ: +91 0821 259 0027/ +91 0821 259 0127

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+