ಟೆಕ್ಕಿಗಳೇ ಗಮನಿಸಿ: ಹೊಸ ನೇಮಕಾತಿ ಇಲ್ಲ ಎಂದ ಇನ್ಫೋಸಿಸ್

Setback for techies: NO hiring in IT in 2013
ಬೆಂಗಳೂರು, ಮಾ.18: ಆರ್ಥಿಕ ಸಂಕಷ್ಟದಲ್ಲೇ ಕುಂಟುತ್ತಾ ಕ್ವಾಟರ್ ನಿಂದ ಕ್ವಾಟರ್ ಗೆ ಸಾಗುತ್ತಿರುವ ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ಉದ್ಯಮ ಸಂಸ್ಥೆ ಇನ್ಪೋಸಿಸಿ ಟೆಕ್ಕಿಗಳಿಗೆ ಶಾಕ್ ನೀಡಿದೆ. 2013ರಲ್ಲಿ ಟೆಕ್ಕಿಗಳ ನೇಮಕಾತಿಗೆ ನಿರ್ಬಂಧ ಹೇರಲಾಗಿದೆ ಎಂದು ಸಂಸ್ಥೆಯ ಸಹ ಸ್ಥಾಪಕ ಎಸ್ ಗೋಪಾಲಕೃಷ್ಣನ್ ಹೇಳಿದ್ದಾರೆ.

2013-14ರ ಆರ್ಥಿಕ ವರ್ಷದ ನೇಮಕಾತಿಯ ಬಗ್ಗೆ ಮಾತನಾಡುತ್ತಾ ಎಸ್ ಗೋಪಾಲಕೃಷ್ಣನ್ ಹೇಳಿದ ಮಾತುಗಳನ್ನೇ ಉಲ್ಲೇಖಿಸಿದರೆ "Hiring position seems to be muted this year because many companies still have deep bench (strength), in other words their utilisation rate is still low." ಎಂದಿದ್ದಾರೆ.

ಇನ್ಫೋಸಿಸ್ ಸಂಸ್ಥೆ ಇತ್ತೀಚೆಗೆ 5,000ಕ್ಕೂ ಅಧಿಕ ಉದ್ಯೋಗಿಗಳನ್ನು ಹೊರ ದಬ್ಬಲು ಮುಂದಾಗಿರುವ ಬಗ್ಗೆ ಸುದ್ದಿ ಹಬ್ಬಿತ್ತು. ಮೂರನೇ ತ್ರೈಮಾಸಿಕದ ಫಲಿತಾಂಶ ಹೊರ ಬೀಳುವ ಮುನ್ನವೇ ಪಿಂಕ್ ಸ್ಲಿಪ್ ವಿತರಿಸಲು ಇನ್ಫೋಸಿಸ್ ಮುಂದಾಗಿದೆ ಎನ್ನಲಾಗಿತ್ತು. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮೇಲ್ಕಂಡಂತೆ ಗೋಪಾಲಕೃಷ್ಣನ್ ಉತ್ತರಿಸಿದ್ದಾರೆ.

ಉತ್ತಮ ಕಾರ್ಯನಿರ್ವಹಣೆ ತೋರದ 'under-performers' ಗಳನ್ನು ಕಂಪನಿಯಿಂದ ಹೊರಕ್ಕೆ ಕಳಿಸಲು, ಜೊತೆಗೆ ತ್ರೈಮಾಸಿಕದಿಂದ ತ್ರೈಮಾಸಿಕದಲ್ಲೆ ಸಾಮಾನ್ಯವಾಗಿ ಉದ್ಯೋಗಿಗಳ ಕಡಿತಗೊಳಿಸಲು ಇನ್ಫೋಸಿಸ್ ಮುಂದಾಗಿದೆ.

ಉದ್ಯೋಗಿಗಳ ನೇಮಕಾತಿ ವಿಷಯ ಈಗ ಎಲ್ಲಾ ಪ್ರಮುಖ ಐಟಿ ಸಂಸ್ಥೆಗಳಿಗೆ ತಲೆನೋವಾಗಿದೆ. ಇತ್ತೀಚೆಗೆ ಎಚ್ ಸಿಎಲ್ ಸಂಸ್ಥೆ ವಿರುದ್ಧ ಫ್ರೆಶರ್ಸ್ ನೇಮಕಾತಿ ಲೆಟರ್ ಸಿಕ್ಕಿಲ್ಲ ಎಂದು ಪ್ರತಿಭಟನೆ ನಡೆಸಿದ್ದರು. ಅನೇಕ ಕಂಪನಿಗಳಲ್ಲಿ ಬೆಂಚ್ ಗಳಲ್ಲಿ ಶೇ 30ರಷ್ಟು ಉದ್ಯೋಗಿಗಳು ಸುಮ್ಮನೆ ಕುಳಿತುಕೊಳ್ಳುವಂತಾಗಿದೆ.

ಇನ್ಫೋಸಿಸ್ ನ ವಿಷಯಕ್ಕೆ ಬಂದರೆ, ಇತ್ತೀಚೆಗೆ ಇನ್ಫೋಸಿಸ್ ಸಂಸ್ಥೆ ತನ್ನ ಮ್ಯಾನೇಜ್ಮೆಂಟ್ ನ ಪ್ರಮುಖ ಸ್ಥಾನಗಳಲ್ಲಿ ಭಾರಿ ಬದಲಾವಣೆ ಮಾಡಿತ್ತು. ಜಾಗತಿಕ ಮಾನವ ಸಂಪನ್ಮೂಲ ಅಧಿಕಾರಿ ನಂದಿತಾ ಗುರ್ಜಾರ್ ಅವರ ಜಾಗಕ್ಕೆ ಶ್ರೀಕಂಠನ್ ಮೂರ್ತಿ ಅವರನ್ನು ಕೂರಿಸಲಾಗಿದೆ.

ಮೂರನೇ ತ್ರೈಮಾಸಿಕದ ನಂತರ ಸುಮಾರು 9000 ಉದ್ಯೋಗಿಗಳಿಗೆ ಬಡ್ತಿ ಯೋಗ ಲಭಿಸಲಿದೆ.ಆರ್ಥಿಕ ವರ್ಷದ ಮಧ್ಯಾವಧಿಯಲ್ಲಿ ಒಂದು ಸುತ್ತಿನ ಬಡ್ತಿ ನೀಡಲಾಗಿತ್ತು. ವರ್ಷಾಂತ್ಯದೊಳಗೆ ಇನ್ನೊಂದು ಸುತ್ತಿನ ಬಡ್ತಿ ನೀಡಲಾಗುವುದು ಎಂದು ಸಿಇಒ ಶಿಬುಲಾಲ್ ಘೋಷಿಸಿದ್ದರು.

ಬೆಂಗಳೂರು ಮೂಲದ ಸಂಸ್ಥೆ ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 1,53,761 ರಷ್ಟು ಉದ್ಯೋಗಿಗಳನ್ನು ಹೊಂದಿತ್ತು ನಂತರ ಶೇ 1.2 ರಷ್ಟು ಸಂಖ್ಯೆ ಹೆಚ್ಚಿಸಿಕೊಂಡು 1,55,629ಕ್ಕೇರಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+