ಪೆಟ್ರೋಲ್ : ಶುಕ್ರವಾರ ಸಿಕ್ಕಿದ್ದು ಸಿಹಿ ಸುದ್ದಿ

Petrol price cut by Rs. 2 per litre
ನವದೆಹಲಿ, ಮಾ.15: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿತಗೊಂಡಿರುವುದರಿಂದ ಭಾರತದ ಗ್ರಾಹಕರಿಗೆ ಶುಕ್ರವಾರ ಶುಭ ಸುದ್ದಿ ಸಿಕ್ಕಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 2 ರು ಕಡಿಮೆಯಾಗಲಿದೆ.

ಆರ್ಥಿಕ ಸುಧಾರಣೆ ಹೆಸರಿನಲ್ಲಿ ನಿರಂತರವಾಗಿ ಬೆಲೆ ಏರಿಕೆ ಕಸರತ್ತಿನಲ್ಲಿ ತೊಡಗಿರುವ ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ಶುಕ್ರವಾರ(ಮಾ.15) ಒಳ್ಳೆ ಸುದ್ದಿಯನ್ನೇ ನೀಡಿದೆ.

ಪರಿಷ್ಕೃತ ದರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಹೇಳಿದೆ. ಆದರೆ, ಸ್ಥಳೀಯ ತೆರಿಗೆಗಳನ್ನು ಹೊರತು ಪಡಿಸಿ ದರ ಇಳಿಕೆ ಮಾಡಲಾಗಿದೆ. ಹೀಗಾಗಿ ವಿವಿಧ ರಾಜ್ಯಗಳಲ್ಲಿ ದರ ಹೆಚ್ಚು ಕಮ್ಮಿಯಾಗಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 3 ಡಾಲರ್ ನಷ್ಟು ಇಳಿಕೆಯಾದ ಹಿನ್ನೆಲೆಯಲ್ಲಿ ಭಾರತದಲ್ಲಿ ಪೆಟ್ರೋಲ್ ದರವನ್ನು ಇಳಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೆಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲ್ ಸಂಸ್ಥೆ ಗಳು ಒಪ್ಪಿಗೆ ಸೂಚಿಸಿದೆ.

ಮಾ. 1 ರಂದು ಬ್ಯಾರೆಲ್ ಗೆ 123.54 ಡಾಲರ್ ರೇಟ್ ಇತ್ತು ಮಾ,13 ರ ಹೊತ್ತಿಗೆ ಬ್ಯಾರೆಲ್ ಗೆ 120.43 ಡಾಲರ್ ಗೆ ಕುಸಿದಿತ್ತು. ಡಾಲರ್ ಹಾಗೂ ರುಪಾಯಿ ಸಮರದಿಂದ ತೈಲ ಬೆಲೆ ಇಳಿಕೆ ಅನಿವಾರ್ಯವಾಗಿದೆ.

ಭಾರತದ ಕರೆನ್ಸಿ ಮಾ.14 ರಂದು ಡಾಲರ್ ಎದುರು 54.44ಕ್ಕೇರಿತ್ತು, ಮಾ.1 ರಂದು ಯುಎಸ್ ಡಾಲರ್ ಎದುರು 54.48 ರು ನಷ್ಟಿತ್ತು ಎಂದು ಆರ್ ಬಿಐ ಹೇಳಿದೆ.

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 70.74 ರೂ.ನಷ್ಟಿದ್ದು, ಅದು 69.74ರೂ.ಗಳಿಗೆ ಕುಸಿಯುವ ಸಾಧ್ಯತೆಗಳಿವೆ. ಜನವರಿ ಮೊದಲ ವಾರದಿಂದಲೇ ಡೀಸೆಲ್ ದರ 15 ದಿನಗಳಿಗೊಮ್ಮೆ ಹೆಚ್ಚಳವಾಗುತ್ತಲೇ ಬಂದಿದೆ.

ಬಜೆಟ್ ನಂತರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಸಾವಿರಾರು ಕೋಟಿ ನಷ್ಟವಾಗುವುದನ್ನು ತಗ್ಗಿಸಲು ಇಂಧನ ಬೆಲೆ ಏರಿಕೆ ಅನಿವಾರ್ಯ ಎಂದು ಹೇಳಿ ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ 1.40 ಬೆಲೆ ಏರಿಕೆ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಮಾ.2ರ ವೇಳೆಗೆ ಪೆಟ್ರೋಲ್ ದರ 77.98 ರು ಆಸುಪಾಸಿನಲ್ಲಿತ್ತು.ಈಗ ಸುಮಾರು 2.66 ರು ಕಮ್ಮಿಯಾಗಲಿದೆ.

ಆಯಾ ರಾಜ್ಯದಲ್ಲಿ ಮೌಲ್ಯವರ್ಧಿತ ತೆರಿಗೆ ಮತ್ತು ಪ್ರವೇಶ ತೆರಿಗೆ ವಿಭಿನ್ನವಾಗಿರುವುದರಿಂದ ಪೆಟ್ರೋಲ್ ಬೆಲೆ ಏರಿಕೆಯಲ್ಲಿ ಏರಿಳಿತ ಕಂಡುಬರುತ್ತದೆ. ಡಾಲರ್‌ಗೆ ಪ್ರತಿಯಾಗಿ ರುಪಾಯಿ ಮೌಲ್ಯ ಇನ್ನಷ್ಟು ಸ್ಥಿರಗೊಂಡಿದ್ದರೆ ಇಂಧನ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇರುತ್ತದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೆಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲ್ ಸಂಸ್ಥೆ ಗಳು ಮಾರ್ಚ್ 31, 2012ಕ್ಕೆ ಅನ್ವಯವಾಗುವಂತೆ 4,860 ಕೋಟಿ ರು ನಷ್ಟ ದಾಖಲಿಸಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+