ರೈಲಿಗೆ ತಲೆಕೊಟ್ಟು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

ನಗರದ ಹುಣಸೂರು ರಸ್ತೆಯ ಕಲಾಮಂದಿರ ಹತ್ತಿರದ ರೈಲ್ವೆ ಅಂಡರ್ ಬ್ರಿಡ್ಜ್‌ನಡಿ ಮುಂಜಾನೆ 5 ಗಂಟೆ ವೇಳೆ ನಗರದಿಂದ ನಂಜನಗೂಡು ಕಡೆಗೆ ತೆರಳುತ್ತಿದ್ದ ರೈಲಿಗೆ ಸಿಲುಕಿ ಗಂಡು ಮಗು (5) ಹಾಗೂ ಹೆಣ್ಣು ಮಗು(8)ವಿನೊಂದಿಗೆ 35 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಿಳೆ ಮತ್ತು ಮಕ್ಕಳ ಗುರುತು ಹಾಗೂ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಭೀಕರ ಘಟನೆ ನಡೆದಿರುವುದನ್ನು ಗಮನಿಸಿದ ಮೈಸೂರು-ನಂಜನಗೂಡು ಮಾರ್ಗದ ರೈಲು ಚಾಲಕ ಅಶೋಕ ಪುರಂ ರೈಲ್ವೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು.
ಅಶೋಕಪುರಂ ರೈಲ್ವೆ ಅಧಿಕಾರಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದಾಗ ಮೃತ ವ್ಯಕ್ತಿಗಳ ಬಳಿಯಲ್ಲಿ ಮೊಬೈಲ್ ಸಂಖ್ಯೆಯಿರುವ ಚೀಟಿ ದೊರೆತಿದೆ. ಮೊಬೈಲ್ ಸಂಖ್ಯೆಗೆ ಪೊಲೀಸರು ಕರೆ ಮಾಡಿದಾಗ ವ್ಯಕ್ತಿಗಳು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಮೃತರ ವಿವರಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಶವಗಳನ್ನು ಮೈಸೂರು ಮೆಡಿಕಲ್ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.












Click it and Unblock the Notifications