ಯುಬಿ ಸಿಟಿ ಮುಂದೆ ಸದ್ಯದಲ್ಲೇ ಬಿಬಿಎಂಪಿ ತಮಟೆ ಏಟು

ಹಾಗಾಗಿ ಕಬ್ಬನ್ ಪಾರ್ಕಿನಿಂದ ಕೂಗಳತೆಯಲ್ಲಿರುವ UB City ಎದುರು ಸದ್ಯದಲ್ಲೇ BBMP ತಮಟೆ ಸದ್ದು ಕೇಳಿಬಂದರೆ ಆಶ್ಚರ್ಯವೇನೂ ಇಲ್ಲ. ಆದರೆ ಇಂತಹ ಸದ್ದು ಮಲ್ಯ ಸಾಹೇಬರ ಕಿವಿಗೆ ಬೀಳಬೇಕು, ಅಷ್ಟೇ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ತಾಂತ್ರಿಕ ಜಾಗೃತ ದಳದ ಹಿರಿಯ ಅಧಿಕಾರಿಗಳು ಇತ್ತೀಚೆಗೆ ಸ್ಥಳ ಪರೀಕ್ಷೆ ನಡೆಸಿ, ಪಾಲಿಕೆಗೆ 10 ಕೋಟಿ ತೆರಿಗೆ ಬಾಕಿ ಬರಬೇಕಿದೆ ಎಂದು ಬರೆದುಕೊಂಡು ಹೋಗಿದ್ದಾರೆ.
Self Assessment Scheme ಯೋಜನೆಯಡಿ ತೆರಿಗೆ ಪಾವತಿಸುವ ಸಂಬಂಧ ಯುಬಿ ಸಿಟಿ, BBMPಯನ್ನು ಯಾಮಾರಿಸಿದೆ. ಹಾಗಾಗಿ ತೆರಿಗೆ ಕಟ್ಟಿ ಇಲ್ಲವೇ ತಮಟೆ ಸದ್ದು ಕೇಳಿ ಎಂದು BBMP ಸದ್ಯದಲ್ಲೇ ನೋಟಿಸ್ ಜಾರಿ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯಲ್ಲಿ Subramanya Construction and Development Companyಯು ಹೀಗೇ ತೆರಿಗೆ ವಂಚಿಸಿತ್ತು. 7.45 ಕೋಟಿ ರೂ. ತೆರಿಗೆ ಪಾವತಿಸಬೇಕಿತ್ತು. ಆದರೆ ತಕ್ಷಣಕ್ಕೆ 3.74 ಕೋಟಿ ರೂ. ಪಾವತಿಸಿದ್ದು. ಉಳಿದ ಮೊತ್ತವನ್ನು ಅತಿ ಶೀಘ್ರದಲ್ಲೇ ಪಾವತಿಸವುದಾಗಿ ತಿಳಿಸಿದೆ.












Click it and Unblock the Notifications