ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

ರಾಜ್ಯಾದ್ಯಂತ ಒಟ್ಟು 961 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಟ್ಟು 6.13 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಬರೆಯಲಿದ್ದಾರೆ. ನಕಲು ಮಾಡುವುದನ್ನು ತಡೆಯಲು ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ವಲಯವೆಂದು ಘೋಷಿಸಲಾಗಿದೆ.
ಒಟ್ಟು 961 ಪರೀಕ್ಷಾ ಕೇಂದ್ರಗಳಲ್ಲಿ 46 ಕೇಂದ್ರಗಳನ್ನು ಅತಿಸೂಕ್ಷ್ಮ, 114 ಕೇಂದ್ರಗಳನ್ನು ಸೂಕ್ಷ ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದೆ. ಪರೀಕ್ಷೆ ಪ್ರಾರಂಭವಾಗುವ ಅರ್ಧಗಂಟೆ ಮೊದಲು ಪರೀಕ್ಷಾ ಕೇಂದ್ರಗಳ ಬಳಿ ಹಾಜರಾಗುವಂತೆ ಪರೀಕ್ಷಾ ಮಂಡಳಿ ವಿದ್ಯಾರ್ಥಿಗಳಿಗೆ ಕರೆ ನೀಡಿದೆ.
ಒಟ್ಟು 6.13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗಳು ಬರೆಯಲಿದ್ದು, 3.19 ಲಕ್ಷ ಬಾಲಕರು ಮತ್ತು 2.93 ಲಕ್ಷ ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ.
ಕಲಾ ವಿಭಾಗದಲ್ಲಿ 2.57 ಲಕ್ಷ ವಿದ್ಯಾರ್ಥಿಗಳು, ವಿಜ್ಞಾನ ವಿಷಯದಲ್ಲಿ 1.78 ಲಕ್ಷ ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 1.81 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯಾರ್ಥಿಗಳಿಗೆ ಕೆಲವು ಸಲಹೆಗಳು...
* ಪರೀಕ್ಷೆಗೆ ಹೊರಡುವ ಮುನ್ನ ಪ್ರವೇಶ ಪತ್ರ, ಪೆನ್ ಮುಂತಾದ ಅಗತ್ಯವಿರುವ ವಸ್ತುಗಳನ್ನು ಮರೆಯದಿರಿ
* ಒತ್ತಡಕ್ಕೆ ಒಳಗಾಗದೆ ಪ್ರಶ್ನೆಗಳನ್ನು ಸರಿಯಾಗಿ ಓದಿಕೊಂಡು ಉತ್ತರಿಸಿ
* ಟಿವಿ, ಕ್ರಿಕೆಟ್ ಗಳಿಂದ ದೂರವಿರಿ. ಮುಗಿದ ಪರೀಕ್ಷೆಗಳ ಹೆಚ್ಚು ಯೋಚಿಸದೆ ಮುಂದಿನ ವಿಷಯಕ್ಕೆ ಸಜ್ಜಾಗಿ
* ಪರೀಕ್ಷಾ ಕೇಂದ್ರಗಳಿಗೆ ಅರ್ಧಗಂಟೆಗಳ ಮೊದಲು ಹಾಜರಾಗಿ
ಒನ್ ಇಂಡಿಯಾ ಕನ್ನಡ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್. (ಪರೀಕ್ಷಾ ವೇಳಾಪಟ್ಟಿ)











Click it and Unblock the Notifications