ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಆಯೋಗ ಸಜ್ಜು

Urban Local Bodies election
ಬೆಂಗಳೂರು, ಮಾ.5 : ಸ್ಥಳೀಯ ಸಂಸ್ಥೆಗಳ ಚುಣಾವಣೆಗಯ ಬಹಿರಂಗ ಪ್ರಚಾರ ಕಾರ್ಯ ಇಂದು ಬೆಳಗ್ಗೆ 7 ಗಂಟೆಗೆ ಮುಕ್ತಾಯಗೊಂಡಿದೆ. ಮತದಾನ ನಡೆಯಲು ಕೇವಲ 48 ಗಂಟೆಗಳು ಬಾಕಿ ಇವೆ. ವಿವಿಧ ರಾಜಕೀಯ ಪಕ್ಷಗಳು ಸೋಮವಾರ ಸಂಜೆಯವರೆಗೂ ಬಿರುಸಿನಿಂದ ಪ್ರಚಾರ ಕಾರ್ಯ ನಡೆಸಿವೆ.

ಇಂದು ಬೆಳಗ್ಗೆಯಿಂದ ಕೇವಲ ಮನೆ-ಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸಬಹುದಾಗಿದೆ. ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲು ವಿವಿಧ ಜಿಲ್ಲೆಗಳಿಗೆ ತೆರಳಿದ್ದ ರಾಜಕೀಯ ನಾಯಕರು ಇಂದು ಬೆಳಗ್ಗೆ ಕ್ಷೇತ್ರ ತೊರೆಯಬೇಕಾಗಿದೆ.

ರಾಜ್ಯದ 208 ಸ್ಥಳೀಯ ಸಂಸ್ಥೆಗಳು ಮತ್ತು ಏಳು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಆಯೋಗ ಎಲ್ಲಾ ಸಿದ್ದತೆ ಮಾಡಿಕೊಂಡಿದೆ. ಮಾ.7ರ ಗುರವಾರ, ಬೆಳಗ್ಗೆ 7ರಿಂದ ಸಂಜೆ 5 ಗಂಟೆಯ ವರೆಗೆ ಮತದಾನ ನಡೆಯಲಿದೆ. ಯಾವುದಾರರೂ ಕ್ಷೇತ್ರದಲ್ಲಿ ಮರು ಮತದಾನ ಅಗತ್ಯವಿದ್ದರೆ ಮಾ.9 ರಂದು ನಡೆಯಲಿದೆ.

ಮಾ.11 ರ ಸೋಮವಾರ ಮತ ಬೆಳಗ್ಗೆ 8ರಿಂದ ಮತ ಎಣಿಕೆ ಪ್ರಾರಂಭವಾಗಲಿದ್ದು, ಅಂದೇ ಫಲಿತಾಂಶ ಘೋಷಿಸಲಾಗುವುದು ಎಂದು ಚುನಾವಣಾ ಆಯೋಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರ ಬಳಸುತ್ತಿದ್ದು, 12 ಸಾವಿರಕ್ಕೂ ಅಧಿಕ ಮತಯಂತ್ರಗಳನ್ನು ಬಳಸಲಾಗುತ್ತಿದೆ.

ರಾಜ್ಯಾದ್ಯಂತ ಒಟ್ಟು 10,482 ಮತಗಟ್ಟೆ ಸ್ಥಾಪಿಲಾಗುತ್ತಿದೆ. ಇವುಗಳಲ್ಲಿ 3,146 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಒಟ್ಟಾರೆ 34,584 ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ನಿರತರಾಗಲಿದ್ದಾರೆ. 80 ಜನ ಕೆಎಸ್ಅಧಿಕಾರಿಗಳನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸಲಾಗಿದೆ.

ಗುರುತಿನ ಚೀಟಿ ಕಡ್ಡಾಯ : ಭಾವಚಿತ್ರ ಇರುವ ಚುನಾವಣೆ ಗುರುತಿನ ಚೀಟಿಯನ್ನು ಮತದಾನಕ್ಕೆ ಕಡ್ಡಾಯಗೊಳಿಸಲಾಗಿದೆ. ಚುನಾವಣಾ ಗುರುತಿನ ಚೀಟಿ ಹೊಂದಿಲ್ಲದವರು ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ ಆದರೆ, ಆಯೋಗ ನಿಗದಿಪಡಿಸಿರುವ ಗುರುತಿನ ಚೀಟಿ ತರಬೇಕಾಗುತ್ತದೆ.

ಭಾವಚಿತ್ರ ಇರುವ ವಾಹನ ಪರವಾನಗಿ, ಆಧಾರ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಹಿರಿಯ ನಾಗರಿಕರ ಕಾರ್ಡ್, ವಿದ್ಯಾರ್ಥಿಗಳ ಕಾಲೇಜು ಗುರುತಿನ ಚೀಟಿ, ಗ್ಯಾಸ್ ಕಾರ್ಡ್, ಸರಕಾರಿ ಮತ್ತು ಅರೆ ಸರಕಾರಿ ಇಲಾಖೆ, ಸಾರ್ವಜನಿಕ ಉದ್ದಿಮೆಗಳು ನೀಡಿರುವ ನೌಕರರ ಗುರುತಿನ ಚೀಟಿಯನ್ನು ಪರಿಗಣಿಸುತ್ತೇವೆ ಎಂದು ಚುಣಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಒಟ್ಟು ಮತದಾರರು : ರಾಜ್ಯದಲ್ಲಿ ಒಟ್ಟು 85,32,942 ಮತದಾರರಿದ್ದಾರೆ. ಇವರಲ್ಲಿ 43,06,520 ಪುರುಷ ಮತದಾರರು ಮತ್ತು 42,26,411 ಮಹಿಳಾ ಮತದಾರರಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+