ಚಿನ್ನ ಮಿತಿ ಹೆಚ್ಚಳಕ್ಕೆ ಎನ್ನಾರೈಗಳ ಆಗ್ರಹ

India Govt asked to increase limit of duty free gold for NRIs
ವಾಷಿಂಗ್ಟನ್, ಮಾ.3: ಅನಿವಾಸಿ ಭಾರತೀಯ ದಂಪತಿಗೆ ಸುಂಕರಹಿತ ಚಿನ್ನ ಸಾಗಾಟದ ಮಿತಿಯನ್ನು ಹೆಚ್ಚಿಸುವಂತೆ ಭಾರತೀಯ ಅಮೆರಿಕನ್ ಸಂಘಟನೆಯೊಂದು ಭಾರತ ಸರಕಾರವನ್ನು ಕೋರಿದೆ. ಅನಿವಾಸಿ ಭಾರತೀಯ ದಂಪತಿಗೆ ನಿಗದಿಪಡಿಸಲಾಗಿರುವ ಸುಂಕ ರಹಿತ ಚಿನ್ನದ ವೌಲ್ಯದ ಮಿತಿಯನ್ನು 1.5 ಲಕ್ಷ ರೂಪಾಯಿಗಳಿಂದ 3 ಲಕ್ಷ ರೂಪಾಯಿಗಳಿಗೆ ಏರಿಸಬೇಕೆಂದು 'ದಿ ನಾರ್ತ್ ಅಮೆರಿಕನ್ ಪಂಜಾಬಿ ಅಸೋಸಿಯೇಶನ್'(ಎನ್‌ಎಪಿಎ) ಹೇಳಿಕೆಯೊಂದರಲ್ಲಿ ಭಾರತ ಸರಕಾರವನ್ನು ಕೇಳಿಕೊಂಡಿದೆ.

'ಪ್ರಸಕ್ತ ಏರಿಸಲಾಗಿರುವ ಸುಂಕರಹಿತ ಚಿನ್ನದ ಆಭರಣಗಳ ವೌಲ್ಯದ ಮಿತಿಯು ಪುರುಷ ಪ್ರಯಾಣಿಕನಿಗೆ 50 ಸಾವಿರ ರೂಪಾಯಿಗಳಾಗಿದ್ದು, ಮಹಿಳೆಗೆ ಅದನ್ನು ಒಂದು ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಈ ಕ್ರಮದಿಂದ ಪ್ರಯಾಣಿಕರಿಗೆ ಕಿರುಕುಳವಾಗುವುದು ತಪ್ಪುವುದರ ಬದಲಿಗೆ ವಿಮಾನ ನಿಲ್ದಾಣಗಳಲ್ಲಿ ಭ್ರಷ್ಟಾಚಾರದ ಪ್ರಮಾಣ ಇನ್ನಷ್ಟು ಅಧಿಕವಾಗಲು ಕಾರಣವಾಗಬಹುದಾಗಿದೆ. ಆದುದರಿಂದ ಈ ಮಿತಿಯನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ'' ಎಂದು ಎನ್‌ಎಪಿಎಯ ವಕ್ತಾರ ಸತ್ನಾಮ್ ಸಿಂಗ್ ಚಹಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಅನಿವಾಸಿ ಭಾರತೀಯರು ರಾಷ್ಟ್ರದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಬಂಡವಾಳ ಹೂಡುವುದನ್ನು ಹಾಗೂ ದೇಣಿಗೆ ನೀಡುವುದನ್ನು ಬಯಸುವುದಾದಲ್ಲಿ ಭಾರತ ಸರಕಾರವು ಭಾರತಕ್ಕೆ ಭೇಟಿ ನೀಡುವ ಅನಿವಾಸಿ ಭಾರತೀಯರಿಗೆ ಯಾವುದೇ ಕಿರುಕುಳವನ್ನುಂಟು ಮಾಡಬಾರದು'' ಎಂದು ಹೇಳಿದ್ದಾರೆ.

ಈಕ್ವಿಟಿ ಬಂಡವಾಳ ಹೂಡಿಕೆ ಇನ್ನಷ್ಟು ಅಕರ್ಷಣೆ ಹಾಗೂ ಮುಕ್ತ ವಾತಾವರಣ ಸೃಷ್ಟಿಸಬೇಕಿದೆ. ಇದರಿಂದ ಮೊದಲ ಬಾರಿಗೆ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಸಹಾಯಕವಾಗಲಿದೆ ಎಂದು NAPA ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+