ಬಜೆಟ್ ನಂತರದ ಗಿಫ್ಟ್ ಪೆಟ್ರೋಲ್ ಬೆಲೆ ಏರಿಕೆ

Petrol price hiked by Rs 1.40
ನವದೆಹಲಿ, ಮಾ.1: ಜನ ಸಾಮಾನ್ಯರಿಗೆ ಮೆಚ್ಚುಗೆಯಾಗುವಂಥ ಬಜೆಟ್ ಮಂಡಿಸಿದ ಮರುದಿನವೆ ಯುಪಿಎ ಸರ್ಕಾರ, ಜನತೆಗೆ ಶಾಕ್ ನೀಡಿದೆ. ಪೆಟ್ರೋಲ್ ಬೆಲೆ ಮತ್ತೊಮ್ಮೆ ಏರಿಕೆಯಾಗಿದ್ದು, ಶುಕ್ರವಾರ( ಮಾ.1) ಮಧ್ಯರಾತ್ರಿಯಿಂದಲೇ ನೂತನ ದರಗಳು ಜಾರಿಗೆ ಬರಲಿದೆ.

ಬೆಂಗಳೂರು ನಗರದ ಪೆಟ್ರೋಲ್ ಬಂಕುಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 76 ರೂ ಮತ್ತು ಡೀಸೆಲ್ ಬೆಲೆ 53 ರೂ.ಇತ್ತು. ನಾಳೆ ಬೆಳಗ್ಗೆ ಅಂಕಿಗಳು ಬದಲಾಗಲಿದೆ. ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ 1.40 ಬೆಲೆ ಏರಿಕೆ ಮಾಡಲಾಗಿದೆ.ಇದು ವ್ಯಾಟ್ ರಹಿತ, ಸ್ಥಳೀಯ ಮಾರಾಟ ತೆರಿಗೆ ರಹಿತ ಏರಿಕೆಯಾಗಿದೆ. ಆಯಾ ರಾಜ್ಯಗಳ ತೆರಿಗೆ ಅನ್ವಯ ಇನ್ನಷ್ಟು ಬೆಲೆ ಹೆಚ್ಚಳವಾಗಲಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಏರಿಕೆಗೆ ಅನುಗುಣವಾಗಿ ಈ ಹೆಚ್ಚಳ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಸಾವಿರಾರು ಕೋಟಿ ನಷ್ಟವಾಗುವುದನ್ನು ತಗ್ಗಿಸಲು ಈ ಕ್ರಮ ಅನಿವಾರ್ಯ ಎಂದು ಯುಪಿಎ ಸರ್ಕಾರ ಹೇಳಿದೆ. ಫೆ.16 ರಂದು ಕೊನೆಯ ಬಾರಿಗೆ ದರ ಹೆಚ್ಚಳ ಮಾಡಲಾಗಿತ್ತು. ಪೆಟ್ರೋಲ್ ದರ 1.50 ರು ಹಾಗೂ ಡೀಸೆಲ್ ದರ 45 ಪೈಸೆ ಹೆಚ್ಚಿಸಲಾಗಿತ್ತು.

ಪರಿಷ್ಕೃತ ದರಗಳು: ಬೆಂಗಳೂರಿನಲ್ಲಿ ಪೆಟ್ರೋಲ್ ದರ 77.98 ರು ಆಗಲಿದೆ.
* ಚೆನ್ನೈ : ರು. 73.57
* ಕೋಲ್ಕತ್ತಾ : ರು. 77.99
* ಮುಂಬೈ: ರು. 77.29
* ದೆಹಲಿ : ರು. 70.46

ಆದರೆ, ಆಯಾ ರಾಜ್ಯದಲ್ಲಿ ಮೌಲ್ಯವರ್ಧಿತ ತೆರಿಗೆ ಮತ್ತು ಪ್ರವೇಶ ತೆರಿಗೆ ವಿಭಿನ್ನವಾಗಿರುವುದರಿಂದ ಪೆಟ್ರೋಲ್ ಬೆಲೆ ಏರಿಕೆಯಲ್ಲಿ ಏರಿಳಿತ ಕಂಡುಬರುತ್ತದೆ. ಡಾಲರ್‌ಗೆ ಪ್ರತಿಯಾಗಿ ರುಪಾಯಿ ಮೌಲ್ಯ ಇನ್ನಷ್ಟು ಸ್ಥಿರಗೊಂಡಿದ್ದರೆ ಇಂಧನ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇರುತ್ತದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೆಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲ್ ಸಂಸ್ಥೆ ಗಳು ಮಾರ್ಚ್ 31, 2012ಕ್ಕೆ ಅನ್ವಯವಾಗುವಂತೆ 4,860 ಕೋಟಿ ರು ನಷ್ಟ ದಾಖಲಿಸಿದೆ.

ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿರುವುದರಿಂದ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಪ್ರತಿ ದಿನ 550 ಕೋಟಿ ರು ನಷ್ಟವಾಗುತ್ತಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 6.28 ರು ಕಳೆದುಕೊಳ್ಳುತ್ತಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಜೈಪಾಲ್ ರೆಡ್ಡಿ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಪ್ರತಿದಿನ ಪ್ರತಿ ಲೀಟರ್ ಡೀಸೆಲ್ ಮಾರಾಟದಿಂದ 19 ರು, ಸೀಮೆಎಣ್ಣೆ ಮಾರಾಟದಿಂದ 32.7/ ಲೀ ಹಾಗೂ ಎಲ್ ಪಿಜಿ 347/ಸಿಲೆಂಡರ್ ಗೆ ಕಳೆದುಕೊಳ್ಳುತ್ತಿದೆ. [ಪೆಟ್ರೋಲ್ ಬೆಲೆ ಏರಿಕೆಗೆ ಬೆಂಕಿ ಹಾಕಿ, ಈ ಜೋಕ್ಸ್ ಓದಿರಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+