ಬಜೆಟ್ : ಯಾವುದು ಏರಿಕೆ ಯಾವುದು ಇಳಿಕೆ
ನವದೆಹಲಿ, ಫೆ.28: ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಿ ಆರ್ಥಿಕ ಸುಸ್ಥಿರತೆಗೆ ಆದ್ಯತೆ ನೀಡಿ ಜನಪ್ರಿಯ ಬಜೆಟ್ ಮಂಡಿಸಿದ ಖುಷಿಯಲ್ಲಿ ವಿತ್ತ ಸಚಿವ ಪಿ ಚಿದಂಬರಂ ಅವರು 2013-14ನೇ ಸಾಲಿನ ಬಜೆಟ್ ಭಾಷಣ ಮುಗಿಸಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿ ಕೂಡಾ ಐಷಾರಾಮಿ ವಸ್ತುಗಳು, ತಂಬಾಕು ಪದಾರ್ಥಗಳ ಬೆಲೆ/ ತೆರಿಗೆ ಹೆಚ್ಚಳ ಮಾಡಲಾಗಿದೆ.
ಮೊಬೈಲ್ ಫೋನ್, ಸ್ಮಾಟ್ ಫೋನ್, ಕಾರು ಸೆಟ್ ಟಾಪ್ ಬಾಕ್ಸ್, ಸಿಗರೇಟು, ತಂಬಾಕು ಪದಾರ್ಥ, ಮಾರ್ಬಲ್ ಸೇರಿದಂತೆ ಹಲವು ವಸ್ತುಗಳ ಮೇಲಿನ ತೆರಿಗೆ ಏರಿಸಲಾಗಿದೆ. ನಾರಿನ ಉತ್ಪನ್ನ, ಪೌಷ್ಠಿಕ ಆಹಾರ ಸೇರಿದಂತೆ ವಿವಿಧ ವಸ್ತುಗಳ ಮೇಲೆ ತೆರಿಗೆ ಕಡಿಮೆ ಮಾಡಲಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹೆಚ್ಚಿನ ಅನುಕೂಲಕರ ವಾತಾವರಣ ಸೃಷ್ಟಿ ಹಾಗೂ ಮುಂಬರುವ ಚುನಾವಣಾ ದೃಷ್ಟಿಯಿಂದ ಹೆಚ್ಚಿನ ತೆರಿಗೆ ಏರಿಸಲು ಹೋಗದೆ, ಸಮತೋಲನ ಕಾಯ್ದುಕೊಂಡು ಎಲ್ಲರಿಂದಲೂ ಮೆಚ್ಚುಗೆ ಗಳಿಸುವ ಉದ್ದೇಶ ಈ ಬಜೆಟ್ ನಲ್ಲಿ ಎದ್ದು ಕಾಣುತ್ತಿದೆ.
ಕರ್ನಾಟಕ, ಆಂಧ್ರಪ್ರದೇಶ ಮುಂತಾದ ರಾಜ್ಯಗಳ ಚುನಾವಣೆ, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸಾರ್ವಜನಿಕ ವಲಯದ ಮಹಿಳಾ ಬ್ಯಾಂಕ್ ಸ್ಥಾಪನೆಯನ್ನು ವಿಪಕ್ಷಗಳು ಕೂಡಾ ಮುಕ್ತವಾಗಿ ಸ್ವಾಗತಿಸಿದೆ. 8ನೇ ಬಾರಿಗೆ ಬಜೆಟ್ ಮಂಡಿಸಿದ ಪಿ ಚಿದಂಬರಂ ಅವರು 2013-14ರ ಸಾಲಿನಲ್ಲಿ ಯಾವುದನ್ನು ಏರಿಕೆ ಮಾಡಿದ್ದಾರೆ? ಯಾವುದನ್ನು ಇಳಿಕೆ ಮಾಡಿದ್ದಾರೆ ಎಂಬುದನ್ನು ಕೆಳಗಿನ ಸ್ಪೈಡ್ ನೋಡಿ

ಯಾವುದರ ಬೆಲೆ ಇಳಿಕೆ
ಪ್ರತಿ ಬಾರಿಯಂತೆ ಈ ಬಾರಿ ಕೂಡಾ ಐಷಾರಾಮಿ ವಸ್ತುಗಳು, ತಂಬಾಕು ಪದಾರ್ಥಗಳ ಬೆಲೆ/ ತೆರಿಗೆ ಹೆಚ್ಚಳ ಮಾಡಲಾಗಿದೆ. ವಜ್ರ ಸೇರಿದಂತೆ ಕೆಲವು ಪದಾರ್ಥಗಳು ಇಳಿಕೆಯಾಗಿದೆ ಮೊದಲಿಗೆ ಇಳಿಕೆಯಾಗಿರುವುದನ್ನು ಸರಣಿಯಲ್ಲಿ ನೋಡಿ

ಯಾವುದರ ಬೆಲೆ ಇಳಿಕೆ
ರೆಡಿಮೇಡ್ ಗಾರ್ಮೆಂಟ್ಸ್ ಬಟ್ಟೆಗಳ ಬೆಲೆ ಕಡಿಮೆಯಾಗಲಿದೆ. ಈ ವಸ್ತ್ರಗಳ ಮೇಲಿನ ಅಬಕಾರಿ ಸುಂಕ ಇಳಿಸಲಾಗಿದೆ.
* ವಾಷಿಂಗ್ ಮೆಷಿನ್ ಬೆಲೆ ಇಳಿಕೆ

ಯಾವುದರ ಬೆಲೆ ಇಳಿಕೆ
* ಕೃಷಿ ಪರೀಕ್ಷಾ ಉಪಕರಣಗಳು, ಕೃಷಿ ಸಂಬಂಧಿಸಿದ ಯಂತ್ರಗಳ ಮೇಲಿನ ತೆರಿಗೆ ಇಳಿಕೆ
* ಹೈಬ್ರೀಡ್ ಕಾರುಗಳ ಬಿಡಿ ಭಾಗದ ಮೇಲಿನ ಸುಂಕ ಇಳಿಕೆ
* ಎಲೆಕ್ಟ್ರಿಕ್, ಹೈಬ್ರೀಡ್ ಕಾರುಗಳ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಮೇಲೆ ಸುಂಕ ಶೇ 10 ರಿಂದ ಶೇ 6ಕ್ಕೆ ಇಳಿಕೆ

ಯಾವುದರ ಬೆಲೆ ಇಳಿಕೆ
ವಿದೇಶಿ ಚರ್ಮದ ಉತ್ಪನ್ನಗಳ ಕಸ್ಟಮ್ಸ್ , ಅಬಕಾರಿ ಸುಂಕ ಇಳಿಕೆ, ಪರ್ಸ್, ಶೂ, ಬೆಲ್ಟ್ ಇತ್ಯಾದಿ ದರ ಇಳಿಕೆ

ಯಾವುದರ ಬೆಲೆ ಇಳಿಕೆ
ಚರ್ಮದ ಉತ್ಪನ್ನಗಳ ಯಂತ್ರಗಳು, ಚರ್ಮೋದ್ಯಮಕ್ಕೆ ಹೆಚ್ಚಿನ ಅನುದಾನ, ದೇಶಿ ಚರ್ಮೋತ್ಪನ್ನ ಬೆಲೆ ಕೂಡಾ ಇಳಿಕೆ

ಯಾವುದರ ಬೆಲೆ ಇಳಿಕೆ
ದೇಶಿ ಕುಸುರಿ ಕಲೆ ವಸ್ತುಗಳು, ಪಶ್ಮೀನಾ ಮುಂತಾದ ನೆಲಹಾಸುಗಳು ಬೆಲೆ ಕಡಿಮೆ

ಯಾವುದರ ಬೆಲೆ ಇಳಿಕೆ
2000 ರು ಮುಖಬೆಲೆಗಿಂತ ಕಡಿಮೆ ಮೊಬೈಲ್ ಫೋನ್ ಮೇಲೆ ಕಸ್ಟಮ್ಸ್ ಸುಂಕ ಇಲ್ಲ

ಯಾವುದರ ಬೆಲೆ ಇಳಿಕೆ
ಕೃಷಿ ಸಂಬಂಧಿಸಿದ ಕೋರ್ಸುಗಳ ಮೇಲೆ ಸೇವಾ ತೆರಿಗೆ ಇಳಿಕೆ

ಯಾವುದರ ಬೆಲೆ ಇಳಿಕೆ
* ಕೃಷಿಗಾಗಿ ಭೂಮಿ ಖರೀದಿ, ಭೂಮಿ ಮಾರಾಟ ವ್ಯವಹಾರಗಳ ಮೇಲಿನ ಸುಂಕದಲ್ಲಿ ರಿಯಾಯಿತಿ.
* ಓಟ್ಸ್ ಧಾನ್ಯ ಪದಾರ್ಥಗಳ ಬೆಲೆ ಇಳಿಕೆ
* ಮುತ್ತು ರತ್ನ ಹವಳಗಳ ಬೆಲೆ ಇಳಿಕೆ

ಯಾವುದರ ಬೆಲೆ ಏರಿಕೆ
ಇಳಿಕೆಗಿಂತ ಏರಿಕೆಯಲ್ಲೇ ಚಿದಂಬರಂ ಅವರು ತೃಪ್ತಿ ಕಂಡಿದ್ದಾರೆ. ಮೊಬೈಲ್ ಫೋನ್, ಸ್ಮಾಟ್ ಫೋನ್, ಕಾರು ಸೆಟ್ ಟಾಪ್ ಬಾಕ್ಸ್, ಸಿಗರೇಟು, ತಂಬಾಕು ಪದಾರ್ಥ, ಮಾರ್ಬಲ್ ಸೇರಿದಂತೆ ಹಲವು ವಸ್ತುಗಳ ಮೇಲಿನ ತೆರಿಗೆ ಏರಿಸಲಾಗಿದೆ. ಏರಿಕೆ ಸರಣಿ ಇಲ್ಲಿಂದ ಶುರು

ಯಾವುದರ ಬೆಲೆ ಏರಿಕೆ
* SUV ಗಳ ತೆರಿಗೆ ಶೇ 27 ರಿಂದ 30ಕ್ಕೆ ಏರಿಕೆಯಾಗಿದೆ. ಆದರೆ, ಈ ತೆರಿಗೆ SUV ಗಳನ್ನು ಟ್ಯಾಕ್ಸಿಗಳಾಗಿ ಬಳಸಿದರೆ ಅನ್ವಯವಾಗುವುದಿಲ್ಲ.

ಯಾವುದರ ಬೆಲೆ ಏರಿಕೆ
* 800 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಇಂಜಿನ್ ವುಳ್ಳ ಮೋಟರ್ ಸೈಕಲ್ ಮೇಲಿನ ಅಬಕಾರಿ ಸುಂಕ ಶೇ 60-70 ರಷ್ಟು ಹೆಚ್ಚಿಸಲಾಗಿದೆ.

ಯಾವುದರ ಬೆಲೆ ಏರಿಕೆ
* ಸೆಟ್ ಟಾಪ್ ಬಾಕ್ಸ್ ಗಳ ಮೇಲಿನ ಆಮದು ಸುಂಕ ಶೇ 5 ರಿಂದ ಶೇ 10ಕ್ಕೇರಿಸಲಾಗಿದೆ.

ಯಾವುದು ಬೆಲೆ ಇಳಿಕೆ
* 50 ಸಾವಿರ ರು ವರೆಗಿನ ಆಮದು ಚಿನ್ನಕ್ಕೆ ಸುಂಕವಿಲ್ಲ (ಪುರುಷರಿಗೆ) ಮಹಿಳೆಯರಿಗೆ ಈ ಮಿತಿ 1 ಲಕ್ಷ ರು. ಚಿನ್ನದ ಆಮದು ಮಿತಿ ಏರಿಕೆ
* ಮುತ್ತು ರತ್ನಗಳ ಮೇಲೆ ತೆರಿಗೆ ಇಳಿಕೆ
* ಬೆಳ್ಳಿ ಬೆಲೆ ಏರಿಕೆ, ವಜ್ರದ ಬೆಲೆ ಇಳಿಕೆ

ಯಾವುದರ ಬೆಲೆ ಏರಿಕೆ
* ತಂಬಾಕು ಪದಾರ್ಥಗಳು ಸಿಗರೇಟ್ ಮೇಲೆ ಅಬಕಾರಿ ಸುಂಕ ಶೇ 18ಕ್ಕೆ ಏರಿಸಲಾಗಿದೆ.

ಯಾವುದರ ಬೆಲೆ ಏರಿಕೆ
* ಹವಾ ನಿಯಂತ್ರಿತ ರೆಸ್ಟೋರೆಂಟ್ ಗಳ ಮೇಲೆ ಸೇವಾ ತೆರಿಗೆ ಹೆಚ್ಚಳ ಮಾಡಲಾಗಿದೆ.

ಯಾವುದರ ದರ ಏರಿಕೆ
ಸಿಎನ್ ಜಿ ಬಳಸಿದ ಆಟೋರಿಕ್ಷಾ, ಇತರೆ ವಾಹನಗಳ ಸಂಚಾರ ಬೆಲೆ ಏರಿಕೆ. ಸಿಎನ್ ಜಿ ಬಳಕೆ ಮೇಲೆ ಸುಂಕ ಹೆಚ್ಚಳ

ಪುಟ್ಟ ಮನೆ ಖರೀದಿ
2000 ಚ.ಅ ವಿಸ್ತೀರ್ಣದ ಮನೆ ಖರೀದಿ ಮೇಲೆ ತೆರಿಗೆ ಇಳಿಕೆ

ಯಾವುದರ ಬೆಲೆ ಏರಿಕೆ
ಐಷಾರಾಮಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಉಳಿಯುವುದು, ಡಿನ್ನರ್, ಸಪ್ಪರ್ ಬೆಲೆ ಏರಿಕೆ, ಸೇವಾ ತೆರಿಗೆ ಹೆಚ್ಚಳ

Array
* 2000 ರು ಗಿಂತ ಅಧಿಕ ಬೆಲೆಯ ಮೊಬೈಲ್ ಮೇಲೆ ಶೇ 6 ರಷ್ಟು ಅಧಿಕ ಅಬಕಾರಿ ಸುಂಕ (excise duty) ಹಾಕಲಾಗಿದೆ.
* ಸ್ಮಾರ್ಟ್ ಫೋನ್ ಮೇಲೆ ಶೇ 6 ರಷ್ಟು ಅಧಿಕ ಸುಂಕ

ಯಾವುದರ ಬೆಲೆ ಏರಿಕೆ
ಸಿಎನ್ ಜಿ ಬಸ್ ಸಾರ್ವಜನಿಕ ಸಾರಿಗೆ ಬಸ್ ಆದರೂ ಪ್ರಯಾಣ ದರ ಹೆಚ್ಚಳ ನಿರೀಕ್ಷೆ. ಸಿಎ ನ್ ಜಿ ಮೇಲೆ ಸುಂಕ ಏರಿಕೆ

ಯಾವುದರ ಬೆಲೆ ಏರಿಕೆ
* ಮಾರ್ಬಲ್ ಚದರಡಿಗೆ ಶೇ 65 ರಿಂದ 70 ರಷ್ಟು ಏರಿಕೆ

ಯಾವುದರ ಬೆಲೆ ಏರಿಕೆ
ರೇಷ್ಮೆ ಮೇಲಿನ ಸುಂಕ ಹೆಚ್ಚಳವಾಗಿರುವುದರಿಂದ ರೇಷ್ಮೆ ಉತ್ಪನ್ನಗಳು, ರೇಷ್ಮೆ ಸೀರೆ ಬೆಲೆ ಏರಿಕೆಯಾಗಲಿದೆ

ಯಾವುದರ ಬೆಲೆ ಏರಿಕೆ
2000 ಚ. ಅ ಗೂ ಅಧಿಕ ವಿಸ್ತೀರ್ಣದಲ್ಲಿ ನಿರ್ಮಾಣವಾದ ಐಷಾರಾಮಿ ಬಂಗಲೆಯ ಮೇಲೆ ತೆರಿಗೆ ಹೆಚ್ಚಳ


Click it and Unblock the Notifications
