ಬೆಂಗಳೂರಿನಲ್ಲಿ ವಾಹನ ಜಾಸ್ತಿನಾ, ಜನ ಜಾಸ್ತಿನಾ?

ಇನ್ನೊಂದು ವರ್ಷದಲ್ಲಿ ಇವುಗಳ ಸಂಖ್ಯೆ 50 ಲಕ್ಷವನ್ನೂ ದಾಟಲಿದೆ. ಆದರೆ ನಗರೀಕರಣದ ಬಳುವಳಿಯಾಗಿ ಬಯಸದೇ ಬಂದಿರುವ ಭಾಗ್ಯವೆಂದರೆ ಟ್ರಾಫಿಕ್ ಜಾಮ್ ಮತ್ತು ಆರೋಗ್ಯದಲ್ಲಿ ಏರುಪೇರು.
ಇದಕ್ಕೆ ಉತ್ತರವಾಗಿ ಸಮೂಹ ಸಾರಿಗೆ ವ್ಯವಸ್ಥೆಯಡಿ ಮೆಟ್ರೋ ರೈಲು ಬಂದಿದೆಯಾದರೂ ಅದಿನ್ನೂ ಪೂರ್ಣ ಪ್ರಮಾಣದಲ್ಲಿ ಟೇಕ್ ಆಫ್ ಆಗಿಲ್ಲ. ಆದರೂ ಅದು ಅರೆಕಾಸಿನ ಮಜ್ಜಿಗೆಯಾದೀತು. ಏಕೆಂದರೆ ನಮ್ಮ ಮೆಟ್ರೋಗೆ ಶೇ. 18ರಷ್ಟು ಸಂಚಾರವನ್ನು ಹೊರಲು ಸಾಧ್ಯವಾದೀತು ಅಷ್ಟೇ. ಹಾಗಾಗಿ ನಮ್ಮ ಮೆಟ್ರೋ ಅಲ್ಲದೆ ಇತರೆ ಮಾರ್ಗಗಳತ್ತಲೂ ನಾವು ಯೋಚಿಸಬೇಕಿದೆ.
ದೆಹಲಿ ಮತ್ತು ಮುಂಬೈಗೆ ಹೋಲಿಸಿದಲ್ಲಿ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಅಧಿಕವಾಗಿಯೇ ಇದೆ. ಒಂದು ವರದಿಯ ಪ್ರಕಾರ ಬೆಂಗಳೂರಿನಲ್ಲಿ ಪ್ರತಿ ಇಬ್ಬರಿಗೆ ಒಂದು ವಾಹನವಿದ್ದರೆ ದೆಹಲಿಯಲ್ಲಿ ನಾಲ್ವರಿಗೆ ಒಂದು ವಾಹನ ಮತ್ತು ಮುಂಬೈನಲ್ಲಿ ಪ್ರತಿ 8 ಮಂದಿಗೆ ಒಂದು ವಾಹನವಿದೆ.
ಟ್ರಾಫಿಕ್ ಜಂಕ್ಷನ್ ಗಳನ್ನು ಸುಧಾರಿಸುವುದು, ಏಕಮುಖ ಸಂಚಾರ ಅಳವಡಿಸುವುದು, ರಸ್ತೆಗಳಲ್ಲಿ ಪಾರ್ಕಿಂಗ್ ತೆಗೆದುಹಾಕುವುದು ಸ್ವಲ್ಪಮಟ್ಟಿಗೆ ಟ್ರಾಫಿಕ್ ಸಮಸ್ಯೆಯನ್ನು ನೀಗಿಸುವುದಾದರೂ ಅದೇ ಅಂತಿಮ ಪರಿಹಾರವಲ್ಲ.
ವಾಹನ ಖರೀದಿಸುವುದು ಮೂಲಭೂತ ಹಕ್ಕು. ಆದರೆ ಪೆಡಂಭೂತವಾಗಿ ಬೆಳೆಯುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ನಮ್ಮ ಹಕ್ಕನ್ನು ಸ್ವಲ್ಪ ಮೊಟಕುಗೊಳಿಸಿ, ಕರ್ತವ್ಯ ನಿಭಾಯಿಸುವುದು ಸಮಂಜಸವಲ್ಲವೇ?












Click it and Unblock the Notifications