ಲಿಫ್ಟ್ ದುರಂತ : ಗರ್ಭಿಣಿ ಸೇರಿ ನಾಲ್ವರಿಗೆ ಗಾಯ

ಸುಮಾರು 20 ಅಡಿಗಳ ಮೇಲಿಂದ ಕೇಬಲ್ ಕಟ್ ಆಗಿ ಲಿಫ್ಟ್ ಬಿದ್ದಿದೆ. ಲಿಫ್ಟ್ ನಲ್ಲಿ ಗರ್ಭಿಣಿ ವಂದನಾ, ಆಕೆಯ ಪತಿ ಮಿಶ್ರಾ, ಲಿಫ್ಟ್ ಆಪರೇಟರ್ ಪುಟ್ಟರಾಜು ಮತ್ತು ಆಯಾ ಜಯಾ ಅವರು ಇದ್ದರು.
ಲಿಫ್ಟ್ ನಲ್ಲಿದ್ದ ಎಲ್ಲ ನಾಲ್ವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಲಿಫ್ಟ್ ನಲ್ಲಿ ರಕ್ತ ಬಿದ್ದಿರುವುದು ಕಂಡುಬಂದಿದ್ದು, ಕೂಡಲೆ ಅವರನ್ನು ರಾಮಯ್ಯ ಆಸ್ಪತ್ರೆ ಮತ್ತು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಮುಂದು ನೂರಾರು ಜನ ಜಮಾಯಿಸಿದ್ದು, ತೀವ್ರ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
ಈ ಹಿಂದೆ ಕೂಡ ಇದೇ ಆಸ್ಪತ್ರೆಯಲ್ಲಿ ಇದೇ ರೀತಿ ಅಪಘಾತ ಸಂಭವಿಸಿದ್ದರೂ ಲಿಫ್ಟ್ ನಿರ್ವಹಣೆ ಕುರಿತಂತೆ ಹೆಚ್ಚಿನ ನಿಗಾ ವಹಿಸಿರಲಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಆಸ್ಪತ್ರೆಯ ಅಧಿಕಾರಿಗಳು ಯಾರಿಗೂ ಹೆಚ್ಚಿನ ಗಾಯಗಳಾಗಿಲ್ಲ, ಸಣ್ಣಪುಟ್ಟ ಗಾಯಗಳಾಗಿವೆಯಷ್ಟೆ ಎಂದು ಹೇಳುತ್ತಿದ್ದಾರೆ.












Click it and Unblock the Notifications