ದೆಹಲಿಯಲ್ಲಿ ಅನಾಮಧೇಯ ಲ್ಯಾಪ್ ಟಾಪ್ ಬ್ಯಾಗ್ ಪತ್ತೆ

The Delhi Police
ನವದೆಹಲಿ, ಫೆ.25 : ಹೈದರಾಬಾದ್ ಬಾಂಬ್ ಸ್ಫೋಟದ ನೆನಪು ಮನದಲ್ಲಿ ಇನ್ನೂ ಕಾಡುತ್ತಿರುವಾಗಲೇ ದೆಹಲಿ ಹೊರವಲದ ಸೈನಿಕ ಆಸ್ಪತ್ರೆಯ ಸಮೀಪ ಅನಾಮಧೇಯ ಕಪ್ಪು ಲ್ಯಾಪ್ ಟಾಪ್ ಬ್ಯಾಗ್ ಕಾಣಿಸಿಕೊಂಡು ಜನರ ಆತಂಕ್ಕೆ ಕಾರಣವಾಯಿತು.

ಸೋಮವಾರ ಮಧ್ಯಾಹ್ನ ದೆಹಲಿಯ ಕಂಟೋನ್ಮೆಂಟ್ ಬಡಾವಣೆಯ ಸಮೀಪ ಈ ಅನಾಮಧೇಯ ಬ್ಯಾಗ್ ಕಾಣಿಸಿಕೊಂಡಿತು. ತಕ್ಷಣ ಸುದ್ದಿ ತಿಳಿದು ದೆಹಲಿ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದವರು ಸ್ಥಳಕ್ಕೆ ಆಗಮಿಸಿದರು. ಬ್ಯಾಗ್ ನೊಂದಿಗೆ ಕೆಲವು ವೈರ್ ಗಳು ಕಂಡುಬಂದಿದ್ದು, ಸ್ಫೋಟಕಗಳಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸುತ್ತಮುತ್ತಮ ಪ್ರದೇಶ ಸೇರಿದಂತೆ ದೆಹಲಿಯ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸ್ಥಳಕ್ಕೆ ಎನ್ ಎಸ್ ಜಿಯ ತನಿಖಾ ತಂಡವನ್ನು ಕರೆಸಿಕೊಳ್ಳಲಾಗಿದೆ. ಬಾಂಬ್ ನಿಷ್ಕ್ರಿಯ ದಳದವರು ಬ್ಯಾಗ್ ಅನ್ನು ಬಾಂಬ್ ನಿರೋಧಕ ಪೆಟ್ಟಿಗೆಯಲ್ಲಿಟ್ಟು ಹೆಚ್ಚಿನ ತನಿಖೆಗಾಗಿ ಪೊರೆನ್ಸಿಕ್ ಲ್ಯಾಬ್ ಗೆ ಕಳುಹಿಸಿಕೊಟ್ಟಿದ್ದಾರೆ.

ಪೊರೆನ್ಸಿಕ್ ತಪಾಸಣೆ ಮುಗಿದು ಅದರ ವರದಿ ತಪುಪಲು ಎರಡು ದಿನಗಳ ಕಾಲಾವಕಾಶ ಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ವರದಿಯ ನಂತರವಷ್ಟೆ ಬ್ಯಾಗ್ ನಲ್ಲಿ ಇದ್ದ ವಸ್ತುಗಳೇನು? ಲ್ಯಾಪ್ ಟ್ಯಾಪ್ ಬ್ಯಾಗ್ ನಲ್ಲಿ ಸ್ಫೋಟಕಗಳನ್ನು ಇಡಲಾಗಿತ್ತೆ ಎಂಬ ಮಾಹಿತಿ ತಿಳಿಯಲಿದೆ.

ಸುಮಾರು 117 ಜನರು ಗಾಯಗೊಂಡು, 16 ಜನ ಸಾವನ್ನಪ್ಪಿದ ಹೈದರಾಬಾದ್ ಅವಳಿ ಸ್ಫೋಟದ ನಂತರ ದೆಹಲಿಯಲ್ಲಿ ಭದ್ರತಾ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.(ಚಿತ್ರಗಳಲ್ಲಿ ಹೈದರಾಬಾದ್ ಸ್ಫೋಟ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+