ಕೋಟ್ಯಂತರ ರೂ ಡ್ರಗ್ಸ್ ಸಾಗಿಸುತ್ತಿದ್ದ ಸೇನಾಧಿಕಾರಿ ಸೆರೆ

Imphal - Army PRO Ajay Chaudhary and 5 held for carrying drugs
ಇಂಫಾಲ, ಫೆ.25: ದೇಶದ ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮತ್ತಿತರ ಆರು ಮಂದಿಯನ್ನು ಮಣಿಪುರ ಪೊಲೀಸರು ನಿನ್ನೆ ವಶಕ್ಕೆ ತೆಗೆದುಕೊಂಡಿದ್ದಾರೆ. ಇವರೆಲ್ಲಾ ಸೇನಾ ವಾಹನದಲ್ಲಿ ಸಂಚರಿಸುತ್ತಿದ್ದಾಗ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪಿಆರ್ ಒ, ಕರ್ನಲ್ ಅಜಯ್ ಚೌಧರಿ, ಆತನ ಸಹಾಯಕ ಆರ್ ಕೆ ಬಬಲು, ಇಂಡಿಗೋ ವಿಮಾನ ಸಂಸ್ಥೆಯ ಬ್ರೊಜೇಂದ್ರೋ ಸಿಂಗ್, ಹಾವೊಪು ಹಾವೊಕಿಪ್, ಮಿಂಥಾಂಗ್ ಬೋಂಗೆಲ್ ಮತ್ತು ಮಿಲನ್ ಹಾವೊಕಿಪ್ ಬಂಧಿತರು. ಮೂರು ವಾಹನಗಳಲ್ಲಿ ಈ ಕಳ್ಳ ಮಾಲನ್ನು ಸಾಗಿಸುತ್ತಿದ್ದಾಗ ಚಂದೇಲ್ ಜಿಲ್ಲೆಯ ಪಲ್ಲೇಲ್ ಬಳಿ ಭಾನುವಾರ ಇವರನ್ನೆಲ್ಲಾ ಬಂಧಿಸಿ, ಮಾಲನ್ನು ವಶಪಡಿಸಿಕೊಳ್ಳಲಾಗಿದೆ.

ಈ ಮಾಲನ್ನು ಮ್ಯಾನ್ಮಾರ್ ಗೆ ಸಾಗಿಸಲು ಇವರು ಹವಣಿಸುತ್ತಿದ್ದರು ಎನ್ನಲಾಗಿದೆ. Narcotic Drugs and Psychotropic Substances (NDPS) Act ಅನುಸಾರ ಇವರ ವಿರುದ್ಧ ದೂರು ದಾಖಲಿಸಿಕೊಂಡು, ವಿಚಾರಣೆ ನಡೆಸಲಾಗುತ್ತಿದೆ.

ವರದಿ ಬಂದ ನಂತರ ಆರೋಪಿಗಳು ತಪ್ಪಿತಸ್ಥರು ಎಂದು ಸಾಬೀತಾದರೆ ಪಿಆರ್ ಒ, ಕರ್ನಲ್ ಅಜಯ್ ಚೌಧರಿ ಸಹಿತ ಎಲ್ಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿಯಲ್ಲಿ ರಕ್ಷಣಾ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ವಶಪಡಿಸಿಕೊಳ್ಳಲಾದ ಮಾದಕ ದ್ರವ್ಯಗಳು ಹೀಗಿವೆ: Respifed, Omkop, Hilcold, Polyfed ಮತ್ತು Actidin. ಇದನ್ನು ಪಾರ್ಟಿಗಳಲ್ಲಿ ಬಳಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+