Electronics City ಬಿಬಿಎಂಪಿ ವ್ಯಾಪ್ತಿಯಿಂದ ಹೊರಗೇ

Bangalore BBMP loses Electronics City - a win for ELCIA,
ಬೆಂಗಳೂರು, ಫೆ.23: ನಗರದ ಹೊರವಲಯದಲ್ಲಿರುವ ಎಲೆಕ್ಟ್ರಾನಿಕ್‌ ಸಿಟಿ ಪ್ರದೇಶವನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳಲು ಬಿಬಿಎಂಪಿ ನಡೆಸಿದ ಕಸರತ್ತು ವಿಫಲವಾಗಿದೆ. ತತ್ಫಲವಾಗಿ, ಈ ಭಾಗದ 903.11 ಎಕರೆ ಪ್ರದೇಶವನ್ನು ಈಗ e-City Industrial Township Authority ಎಂಬ ನೂತನ ಪ್ರಾಧಿಕಾರಕ್ಕೆ ಒಪ್ಪಿಸಲಾಗಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಎಲೆಕ್ಟ್ರಾನಿಕ್‌ ಸಿಟಿ 1, 2 ಹಾಗೂ 3 ನೇ ಹಂತಗಳನ್ನು ತನ್ನ ಸರಹದ್ದು ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಕಳೆದ ಆಗಸ್ಟಿನಲ್ಲಿ ಮಹತ್ವದ ನಿರ್ಣಯವನ್ನೂ ಕೈಗೊಂಡಿತ್ತು. ಇದಕ್ಕೆ ಅಂಕಿತ ಹಾಕುವಂತೆ ರಾಜ್ಯ ಸರ್ಕಾರವನ್ನೂ ಕೋರಿತ್ತು.

ಆದರೆ, ಎಲೆಕ್ಟ್ರಾನಿಕ್‌ ಸಿಟಿ ಕೈಗಾರಿಕಾ ಒಕ್ಕೂಟ (ELCIA) ಮತ್ತು ಸ್ಥಳೀಯರಿಂದ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

'BBMP ಇಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಇದುವರೆಗೆ ಕೈಗೊಂಡಿಲ್ಲ. ಕಳೆದ 20 ವರ್ಷಗಳಿಂದ ಇಲ್ಲಿನೆಲ್ಲ ಮೂಲಸೌಕರ್ಯಗಳನ್ನೂ ನಮಗೆ ನಾವೇ ಮಾಡಿಕೊಂಡಿದ್ದೇವೆ. ಅಂಥಾದ್ದರಲ್ಲಿ ಈಗ ಈ ಕೈಗಾರಿಕಾ ಪ್ರದೇಶವನ್ನು ಮಾರ್ಪಡಿಸುವುದಕ್ಕೆ ನಮ್ಮ ಸಮ್ಮತಿಯಿಲ್ಲ' ಎಂಬುದು ELCIA ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್ಎಸ್ ರಮಾ ಅವರ ವಾದವಾಗಿತ್ತು.

'ಖಜಾನೆ ಖಾಲಿ ಮಾಡಿಕೊಂಡು ಕೂತಿರುವ BBMP ಭಾರಿ ತೆರಿಗೆ ಗಳಿಸಿಕೊಡುವ (ವಾರ್ಷಿಕ 300 ಕೋಟಿ ರೂ) ಫಲವತ್ತಾದ ಎಲೆಕ್ಟ್ರಾನಿಕ್‌ ಸಿಟಿ ಮೇಲೆ ಕಣ್ಣು ಹಾಕಿದೆ' ಎಂಬುದು ಸ್ಥಳೀಯ ನಿವಾಸಿಗಳ ಆಕ್ರೋಶದ ಮಾತುಗಳು.

ಯಾವೆಲ್ಲ ಪ್ರದೇಶಗಳು: ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಸುತ್ತಮುತ್ತಲಿನ ಕೋನಪ್ಪನ ಅಗ್ರಹಾರ, ದೊಡ್ಡ ನಾಗಮಂಗಲ, ರಾಯಸಂದ್ರ, ದೊಡ್ಡ ತೋಗೂರು, ಚಿಕ್ಕ ತೋಗೂರು, ಘಟ್ಟಹಳ್ಳಿ, ವೀರಸಂದ್ರ, ಶಿಕಾರಿಪಾಳ್ಯ, ತಿರುಪಾಳ್ಯ, ನೀಲಾದ್ರಿ ನಗರ, ಬೆಟ್ಟದಲಸಾಪುರ, ಗೊಲ್ಲಹಳ್ಳಿ, ಹುಳಿಮಂಗಳ, ಗೋವಿಂದಶೆಟ್ಟಿ ಪಾಳ್ಯ, ಶಾಂತಿಪುರ ಮುಂತಾದ ಪ್ರದೇಶಗಳು ಈಗ eCity Industrial Township Authority ವ್ಯಾಪ್ತಿಗೆ ಬರಲಿವೆ.

ಎಲೆಕ್ಟ್ರಾನಿಕ್‌ ಸಿಟಿಯಲ್ಲಿ 187 ಬೃಹತ್‌ ಉದ್ದಿಮೆಗಳು, 25 ವಸತಿ ಸಂಕೀರ್ಣಗಳು, 26 ಅಂತಾರಾಷ್ಟ್ರೀಯ ವಿದ್ಯಾ ಸಂಸ್ಥೆಗಳು, 3 ಬೃಹತ್‌ ಹೋಟೆಲ್‌ಗ‌ಳಿದ್ದು ವಾರ್ಷಿಕ 300 ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+