• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲೆಕ್ಟ್ರಾನಿಕ್‌ ಸಿಟಿ ಮೇಲೆ ಕಣ್ಣು ಹಾಕಿದ ಬಿಬಿಎಂಪಿ

By Srinath
|
ಬೆಂಗಳೂರು, ಆ.2: ತನ್ನ ಖಜಾನೆಯನ್ನು ಬರಿದಾಗಿಸಿಕೊಂಡು ಪ್ರಮುಖ ಕಟ್ಟಡಗಳನ್ನು ಅಡ ಇಡಲು ಮುಂದಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಎಲೆಕ್ಟ್ರಾನಿಕ್‌ ಸಿಟಿ 1, 2 ಹಾಗೂ 3 ನೇ ಹಂತಗಳನ್ನು ತನ್ನ ಸರಹದ್ದು ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಮೊನ್ನೆ ಮಹತ್ವದ ನಿರ್ಣಯವೊಂದನ್ನು ಕೈಗೊಂಡಿದೆ.

ಮೊನ್ನೆ ಮಂಗಳವಾರ ನಡೆದ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ, ಎಲೆಕ್ಟ್ರಾನಿಕ್‌ ಸಿಟಿ ಪ್ರದೇಶವನ್ನು ಬಿಬಿಎಂಪಿಗೆ ಸೇರಿಸುವಂತೆ ರಾಜ್ಯ ಸರ್ಕಾರವನ್ನು ಕೋರುವ ನಿರ್ಣಯ ಸರ್ವಾನುಮತದಿಂದ ಅಂಗೀಕಾರ ಮಾಡಲಾಗಿದೆ. ಆದರೆ, ಎಲೆಕ್ಟ್ರಾನಿಕ್‌ ಸಿಟಿ ಕೈಗಾರಿಕಾ ಒಕ್ಕೂಟ (ELCIA) ಮತ್ತು ಸ್ಥಳೀಯರು ಇದನ್ನು ತೀವ್ರವಾಗಿ ವಿರೋಧಿಸಿದ್ದಾರೆ.

ಭಾರಿ ಪ್ರತಿರೋಧ ವ್ಯಕ್ತ: BBMP ಇಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಇದುವರೆಗೆ ಕೈಗೊಂಡಿಲ್ಲ. ಕಳೆದ 20 ವರ್ಷಗಳಿಂದ ಇಲ್ಲಿನೆಲ್ಲ ಮೂಲಸೌಕರ್ಯಗಳನ್ನೂ ನಮಗೆ ನಾವೇ ಮಾಡಿಕೊಂಡಿದ್ದೇವೆ. ಅಂಥಾದ್ದರಲ್ಲಿ ಈಗ ಈ ಕೈಗಾರಿಕಾ ಪ್ರದೇಶವನ್ನು ಮಾರ್ಪಡಿಸುವುದಕ್ಕೆ ನಮ್ಮ ಸಮ್ಮತಿಯಿಲ್ಲ' ಎಂದು ELCIA ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್ಎಸ್ ರಮಾ ತಿಳಿಸಿದ್ದಾರೆ.

'ಖಜಾನೆ ಖಾಲಿ ಮಾಡಿಕೊಂಡು ಕೂತಿರುವ BBMP ಭಾರಿ ತೆರಿಗೆ ಗಳಿಸಿಕೊಡುವ (ವಾರ್ಷಿಕ 300 ಕೋಟಿ ರೂ) ಫಲವತ್ತಾದ ಎಲೆಕ್ಟ್ರಾನಿಕ್‌ ಸಿಟಿ ಮೇಲೆ ಕಣ್ಣು ಹಾಕಿದೆ' ಎಂಬುದು ಸ್ಥಳೀಯ ನಿವಾಸಿಗಳ ಆಕ್ರೋಶದ ಮಾತುಗಳು. ಹಾಗಾಗಿ BBMP ನಿರ್ಣಯಕ್ಕೆ ಭಾರಿ ಪ್ರತಿರೋಧ ವ್ಯಕ್ತವಾಗಿದೆ.

ಯಾವೆಲ್ಲ ಪ್ರದೇಶಗಳು: ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಸುತ್ತಮುತ್ತಲಿನ ಕೋನಪ್ಪನ ಅಗ್ರಹಾರ, ದೊಡ್ಡ ನಾಗಮಂಗಲ, ರಾಯಸಂದ್ರ, ದೊಡ್ಡ ತೋಗೂರು, ಚಿಕ್ಕ ತೋಗೂರು, ಘಟ್ಟಹಳ್ಳಿ, ವೀರಸಂದ್ರ, ಶಿಕಾರಿಪಾಳ್ಯ, ತಿರುಪಾಳ್ಯ, ನೀಲಾದ್ರಿ ನಗರ, ಬೆಟ್ಟದಲಸಾಪುರ, ಗೊಲ್ಲಹಳ್ಳಿ, ಹುಳಿಮಂಗಳ, ಗೋವಿಂದಶೆಟ್ಟಿ ಪಾಳ್ಯ, ಶಾಂತಿಪುರ ಮುಂತಾದ ಪ್ರದೇಶಗಳು ಸರಕಾರದ ಅಂಕಿತ ಬೀಳುತ್ತಿದ್ದಂತೆ ಇನ್ನು ಬಿಬಿಎಂಪಿ ವ್ಯಾಪ್ತಿಗೆ ಬರಲಿವೆ.

ಎಲೆಕ್ಟ್ರಾನಿಕ್‌ ಸಿಟಿ ಏನು, ಎತ್ತ?: ವಿಧಾನಸೌಧದಿಂದ 25 ಕಿ.ಮೀ. ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ-7 ಗೆ ಹೊಂದಿಕೊಂಡಿರುವ ಕೋನಪ್ಪನ ಅಗ್ರಹಾರ ಮತ್ತು ದೊಡ್ಡ ತೋಗೂರು ಗ್ರಾಮಗಳ 440 ಎಕರೆ ವಿಸ್ತೀರ್ಣದಲ್ಲಿ ಸ್ಥಾಪನೆಯಾಗಿರುವ ಎಲೆಕ್ಟ್ರಾನಿಕ್‌ ಸಿಟಿ 3 ಕೋಟಿ ಚದರಡಿ ನಿರ್ಮಿತ ಪ್ರದೇಶ ಹೊಂದಿದೆ. ಇದು ಪಾಲಿಕೆ ವ್ಯಾಪ್ತಿಗೇ ಸೇರಿದ್ದರೂ ತೆರಿಗೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಗೆ ತಪ್ಪು ಮಾಹಿತಿ ನೀಡಿ ಪಾಲಿಕೆ ವ್ಯಾಪ್ತಿಯಿಂದ ಹೊರಗುಳಿದಿದೆ.

ಎಲೆಕ್ಟ್ರಾನಿಕ್‌ ಸಿಟಿಯಲ್ಲಿ 187 ಬೃಹತ್‌ ಉದ್ದಿಮೆಗಳು, 25 ವಸತಿ ಸಂಕೀರ್ಣಗಳು, 26 ಅಂತಾರಾಷ್ಟ್ರೀಯ ವಿದ್ಯಾ ಸಂಸ್ಥೆಗಳು, 3 ಬೃಹತ್‌ ಹೋಟೆಲ್‌ಗ‌ಳಿದ್ದು ವಾರ್ಷಿಕ 300 ಕೋಟಿ ರೂ. ತೆರಿಗೆ ಸಂಗ್ರಹಿಸಬಹುದು. ಹೀಗಾಗಿ, ಆ ಪ್ರದೇಶ ಬಿಬಿಎಂಪಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದು BBMP ವಾದ.

ಎಲೆಕ್ಟ್ರಾನಿಕ್‌ ಸಿಟಿ ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ತನ್ನ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲು BBMP ನಿರ್ಧರಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore BBMP eyes Electronics City ELCIA resists. The cash-starved BBMP passed a resolution to include all three stages of Electronics City and the villages surrounding it under its ambit so that it can extract Rs. 300 crore in taxes from this prime business and industrial area. But, the Electronics City Industries Association (ELCIA) has resisted the move strongly.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more