ಉತ್ತರಪ್ರದೇಶ ಕಳಂಕ: ಗ್ಯಾಂಗ್ ರೇಪ್, ವಿಡಿಯೋ

ಮುಜಾಫರನಗರ ಜಿಲ್ಲೆಯ ಭೋಪಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿಕ್ರಿ ಗ್ರಾಮದಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದೆ. ಭಾನುವಾರ ರಾತ್ರಿ ಮನೆಯಲ್ಲಿ ತನ್ನ ಗಂಡ ಇಲ್ಲದ ವೇಳೆ ಆರೋಪಿಗಳು ಮನೆಯೊಳಕ್ಕೆ ಪ್ರವೇಶಿಸಿದರು. ಕೈಲ್ಲಿ ಗನ್ ಹಿಡಿದಿದ್ದರು. ಪ್ರಾಣಹರಣ ಬೆದರಿಕೆಯೊಡ್ಡಿ ನನ್ನ ಶೀಲಹರಣ ಮಾಡಿದರು ಎಂದು ಬಾಧಿತ ಮಹಿಳೆ ದೂರಿದ್ದಾರೆ.
ನಾಲ್ವರೂ ಆರೋಪಿಗಳನ್ನು ನೌಷಾದ್, ಪರವೇಜ್, ಕಮಲ್ ಹಾಸನ್ ಮತ್ತು ನಾಜರ್ ಎಂದು ಗುರುತಿಸಲಾಗಿದೆ. ಆದರೆ ಆರೋಪಿಗಳು ಸದ್ಯ ಪರಾರಿಯಾಗಿದ್ದಾರೆ. ಆರೋಪಿಗಳು ಪೈಶಾಚಿಕ ಕೃತ್ಯವೆಸಗುವಾಗ ಇಡೀ ಘಟನೆಯನ್ನು ವಿಡಿಯೋ ಸಹ ಮಾಡಿದ್ದಾರೆ ಎಂದು ಬಾಧಿತ ಮಹಿಳೆ ದೂರಿರುವುದಾಗಿ ಪೊಲೀಸರು ಹೇಳಿದ್ದಾರೆ.
ಮತ್ತೊಂದು ಘಟನೆ: ಜಿಲ್ಲೆಯ ಭಡೇರಿ ಗ್ರಾಮದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. 28 ವರ್ಷದ ವಿಧವೆಯ ಮೇಲೆ ಆಕೆಯ ಬಾವಮೈದುನನೇ ಅತ್ಯಾಚಾರವೆಸಗಿದ್ದಾನೆ. ಬಾಧಿತ ಮಹಿಳೆಯ ಪತಿ 5 ವರ್ಷದ ಹಿಂದೆ ಅಸುನೀಗಿದ್ದರು. ಆಕೆ ತನ್ನ ಅತ್ತೆ-ಮಾವನ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications