ವೀಸಾ: ಶಿಕ್ಷಣಕ್ಕೆ ಭಾಗ್ಯದ ಬಾಗಿಲು ತೆರೆದ ಬ್ರಿಟನ್

Britain PM Cameron same-day Visa service for Indian students- businessmen
ಮುಂಬೈ, ಫೆ.19: ಮೂರು ದಿನಗಳ ಅಧಿಕೃತ ಭೇಟಿಗಾಗಿ ಭಾರತಕ್ಕೆ ಬಂದಿರುವ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಅವರು ಭಾರತದ ಅಭಿವೃದ್ಧಿಗೆ ಭಾರಿ ಕೊಡುಗೆಗಳನ್ನೇ ನೀಡಿದ್ದಾರೆ. ಬೆಂಗಳೂರು ಮತ್ತು ಮುಂಬೈ ನಡುವೆ ಮಾಯದಂಥ ಕಾರಿಡಾರ್ ಯೋಜನೆಗೆ ಸಕಲ ನೆರವು ನೀಡುವುದಾಗಿ ಹೇಳಿರುವ ಸಂದರ್ಭದಲ್ಲೇ...

ಭಾರತೀಯ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಗೂ ಭಾರಿ ಉಡುಗೊರೆ ನೀಡಿದ್ದಾರೆ. ಉದ್ಯಮಿಗಳಿಗೆ ಅರ್ಜಿ ಹಾಕಿದ ದಿನವೇ ವೀಸಾ ನೀಡುವುದಾಗಿ ಘೋಷಿಸಿದ್ದರೆ, ಇಂಗ್ಲೆಂಡ್‌ ಗೆ ವ್ಯಾಸಂಗಕ್ಕಾಗಿ ಬರುವ ವಿದ್ಯಾರ್ಥಿಗಳ ಸಂಖ್ಯಾ ಮಿತಿ ಮತ್ತು ಅಲ್ಲಿ ತಂಗುವ ಕಾಲ ಮಿತಿಯನ್ನು ತೆಗೆದುಹಾಕಿದ್ದಾರೆ.

'ವಿಶ್ವದಲ್ಲೇ ಅತಿ ದೊಡ್ಡ ವೀಸಾ ನೀಡಿಕೆ ಕೇಂದ್ರ ಭಾರತದಲ್ಲಿದೆ. ನಮ್ಮ ದೇಶಕ್ಕೆ ಬಂದು ಹೂಡಿಕೆ ಮಾಡಲು ಅಮಿತ ಅವಕಾಶಗಳಿವೆ. ಆಸಕ್ತ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲೆಂದು ಒಂದೇ ದಿನದಲ್ಲಿ ವೀಸಾ ನೀಡಿಕೆ ಸೇವೆ ಆರಂಭಿಸಲಿದ್ದೇವೆ' ಎಂದು ಅವರು ಪ್ರಕಟಿಸಿದ್ದಾರೆ.

'ಇನ್ನು, ಇಂಗ್ಲೆಂಡ್‌ನಲ್ಲಿ ಅಧ್ಯಯನ ಕೈಗೊಳ್ಳುವ ಭಾರತೀಯ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಯಾವುದೇ ಮಿತಿಯನ್ನು ಹೇರಲಾಗಿಲ್ಲ. ಉನ್ನತಾಭ್ಯಾಸ ಕೈಗೊಳ್ಳಲು ಅವರು ಎಷ್ಟು ವರ್ಷಗಳಾದರೂ ಇಂಗ್ಲೆಂಡ್‌ನಲ್ಲಿ ನೆಲೆಸಬಹುದಾಗಿದೆ' ಎಂದು ಅವರು ಸ್ಪಷ್ಟವಾಗಿ ಹೇಳಿದರು- ಪಿಟಿಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+