ಮೋದಿಗೆ ಮದನಿ ಬೆಂಬಲ, ಕಾಂಗ್ರೆಸ್ಸಿಗರಿಗೆ ನಡುಕ?

ನವದೆಹಲಿ, ಫೆ.18: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರ ಮಟ್ಟದ ನಾಯಕರಾಗಿ ಬೆಳೆದಿಲ್ಲ. ಅವರಿಗೆ ಎಲ್ಲಾ ಸಮುದಾಯ, ವರ್ಗಗಳ ಬೆಂಬಲ ಇಲ್ಲ ಎಂಬ ಕೂಗು ಸುಮಾರು ಕಾಲದಿಂದ ಇದೆ. ಆದರೆ, ಬಿಜೆಪಿಯ ಅಘೋಷಿತ ಪ್ರಧಾನಿ ಅಭ್ಯರ್ಥಿ ಮೋದಿ ಅವರಿಗೆ ಅಲ್ಪಸಂಖ್ಯಾತರ ಬೆಂಬಲ ಹರಿದು ಬರುತ್ತಿದೆ.

ಇನ್ಮುಂದೆ ಮೋದಿ ಅವರನ್ನು ಮುಸ್ಲಿಂ ವಿರೋಧಿ ನಾಯಕ ಎಂದು ಕರೆಯುವಂತಿಲ್ಲ. ಜಮಾತೆ ಉಲಾಮಾ-ಇ- ಹಿಂದ್ ಸಂಘಟನೆಯ ಪ್ರದಹನ ಕಾರ್ಯದರ್ಶಿ ಮೌಲಾನಾ ಮಹಮೂದ್ ಮದನಿ ಅವರು ಇತ್ತೀಚೆಗೆ ಮೋದಿ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.

ಗುಜರಾತಿನ ಮುಸ್ಲಿಂ ಬಾಂಧವರು ಅವರ ಮುಖ್ಯಮಂತ್ರಿ ಬಗ್ಗೆ ತೋರಿಸಿರುವ ಒಲವು, ಬೆಂಬಲ ಸಮರ್ಥನೀಯವಾಗಿದೆ. ರಾಜ್ಯದ ಅಭಿವೃದ್ಧಿ, ಸರ್ವ ಜನಾಂಗದ ಶಾಂತಿಯ ತೋಟವಾಗಿ ಗುಜರಾತ್ ಬೆಳೆಯಲು ಮೋದಿ ಕಾರಣ ಎಂಬುದನ್ನು ಒಪ್ಪಲೇಬೇಕು ಎಂದಿದ್ದಾರೆ.

Now, Madani backs Modi: More worry for Congress?

"ಗುಜರಾತಿನ ಹಲವು ಅಸೆಂಬ್ಲಿ ಕ್ಷೇತ್ರದಲ್ಲಿ ಮೋದಿ ಅಲೆ ಇನ್ನೂ ಇರುವುದನ್ನು ಜಮಾತ್ ಕಾರ್ಯಕರ್ತರು ದೃಢಪಡಿಸಿದ್ದಾರೆ. ಮುಸ್ಲಿಮರು ಮತ ಹಾಕಿ ಮೋದಿಗೆ ಬಲ ತುಂಬಿದ್ದಾರೆ.

ಇತರೆ ರಾಜ್ಯದಲ್ಲಿರುವ ಮುಸ್ಲಿಮರಿಗೆ ಹೋಲಿಸಿದರೆ ಗುಜರಾತಿನಲ್ಲಿ ಆರ್ಥಿಕವಾಗಿ ಬೆಳೆದಿದ್ದಾರೆ. ಹಲವು ಸೆಕ್ಯುಲರ್ ರಾಜ್ಯಗಳಿಂದ ಗುಜರಾತ್ ಮುಸ್ಲಿಮರಿಗೆ ಸುರಕ್ಷಿತವಾಗಿದೆ ಎಂದು ಮದನಿ ಅವರು ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಸ್ಲಿಂ ಜನಾಂಗ ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿ ಉತ್ತಮ ಫಲಿತಾಂಶ ಹೊರಹಾಕಿದೆ. ಶೇ 90ರಷ್ಟು ಮುಸ್ಲಿಮರೇ ಇರುವ ಸಲಾಯ ಪ್ರದೇಶದಲ್ಲಿ ಕಾಂಗ್ರೆಸ್ ಒಂದು ಸೀಟು ಕೂಡಾ ಗೆಲ್ಲಲಾಗಿಲ್ಲ.

ಜೊತೆಗೆ ಮುನ್ಸಿಪಾಲ್ಟಿ ಎಲೆಕ್ಷನ್ ನಲ್ಲಿ ಬಿಜೆಪಿ ನಿಲ್ಲಿಸಿದ್ದ ಎಲ್ಲಾ 24 ಅಲ್ಪ ಸಂಖ್ಯಾತ ಅಭ್ಯರ್ಥಿಗಳು ಭರ್ಜರಿ ಜಯಭೇರಿ ಬಾರಿಸಿರುವುದು ಮೋದಿಗೆ ಹೆಚ್ಚಿನ ಬಲ ತಂದಿದೆ. 75 ಸೀಟುಗಳಲ್ಲಿ 47 ಸೀಟು ಗೆದ್ದಿರುವ ಬಿಜೆಪಿ, ಕಾಂಗ್ರೆಸ್ ನಿಂದ 10 ಸೀಟು ಕಿತ್ತುಕೊಂಡಿದೆ.

ಈಗ ಮುಸ್ಲಿಂ ಹೆಚ್ಚಾಗಿರುವ ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದತ್ತ ಮೋದಿ ಅಲೆ ಕೂಡಾ ಸಾಗುತ್ತಿದೆ. ಬಿಹಾರದ ಮುಸ್ಲಿಮರು ಕೂಡಾ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಇದು ಪ್ರಧಾನಿ ಹುದ್ದೆಗೆ ಮೋದಿ ಏಕೆ ಎನ್ನುತ್ತಿದ್ದ ಮಿತ್ರ ಪಕ್ಷ ಜೆಡಿಯು ಗೂ ತಲೆ ನೋವಾಗಿದೆ.

ಒಟ್ಟಾರೆ, ಮುಸ್ಲಿಂ ಸಂಘಟನೆಗಳು ನಿಧಾನಗತಿಯಲ್ಲಿ ಮೋದಿಯನ್ನು ರಾಷ್ಟ್ರೀಯ ನಾಯಕರನ್ನಾಗಿ ಒಪ್ಪಿಕೊಳ್ಳಲು ಸಿದ್ಧವಾಗುತ್ತಿವೆ. ಎನ್ ಡಿಎನ ಕೆಲ ಮಿತ್ರ ಪಕ್ಷಗಳು ಮಾತ್ರ ಮೋದಿಯನ್ನು ಪ್ರಧಾನಿ ಕುರ್ಚಿಯಲ್ಲಿ ಕಾಣಲು ಸಾಧ್ಯವೇ ಇಲ್ಲ ಎಂದು ರಚ್ಚೆ ಹಿಡಿದು ಕೂತಿವೆ. ಅಭಿವೃದ್ಧಿ ಮಂತ್ರ ಪಠಿಸುವ ಮೋದಿ ಪ್ರಧಾನಿಯಾಗಲಿ ಎಂದು ಅಲ್ಪಸಂಖ್ಯಾತರು ಆಶಿಸುತ್ತಿದ್ದಾರೆ. ಕಾಂಗ್ರೆಸ್ ಗೆ ಮತ್ತೆ ಹಿನ್ನಡೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+