ಮೋದಿ - ಒಬಾಮಾ ನಡುವಿನ ಸಾಮ್ಯತೆ ಏನು?
ಅಹಮದಾಬಾದ್, ಫೆ.14: ಅಮೆರಿಕದ ಅಧ್ಯಕ್ಷ, ಅದ್ಭುತ ಭಾಷಣಕಾರ ಬರಾಕ್ ಒಬಾಮಾ ಮೊನ್ನೆ ಮತ್ತೊಮ್ಮೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ಅದನ್ನು ಕೇಳುತ್ತಿದ್ದ ನನಗೆ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಹೆಮ್ಮೆ ಮೂಡಿಸಿತು.
'ವೈಬ್ರಾಂಟ್ ಗುಜರಾತ್' ಬಗ್ಗೆ ಮೋದಿ ಭಾಷಣ ಕೇಳಿದ್ದ ನನಗೆ ಇಬ್ಬರೂ ನಾಯಕರ ನಡುವೆ ಸಾಕಷ್ಟು ಸಾಮ್ಯತೆ ಇದೆಯಲ್ಲವೇ ಅನ್ನಿಸಿತ್ತು. ಇಬ್ಬರ ಭಾಷಣಗಳೂ ಆಶಾದಾಯಕವಾಗಿದ್ದು, ಭವಿಷ್ಯದ ಹಾದಿಯನ್ನು ಕಟ್ಟಿಕೊಟ್ಟಿದ್ದಾರೆ.

ಅದೇ ಹಳಸಲು ರಾಜಕೀಯ ವಿಷಯಗಳಿಂದ ದೂರವಾಗಿ, ಭರವಸೆಗಳ ಮಹಾಪೂರ ಹರಿಸುವ ಬದಲು ಭರವಸೆಯ ಬೆಳಕಾಗಿ ಅಭಿವೃದ್ಧಿ ಪಥವನ್ನು ತೆರೆದಿಡುವುದು ಈ ಇಬ್ಬರೂ ನಾಯಕರಿಗೆ ಮುಖ್ಯವಾಗಿದೆ. ಇಂದಿನ ಯುವಜನತೆಗೆ ಉದ್ಯೋಗಾವಕಾಶವಷ್ಟೇ ಬೇಕಿರುವುದು. ಇದನ್ನು ಮೋದಿ-ಒಬಾಮಾ ಮನಗಂಡಿದ್ದಾರೆ.
ಒಬಾಮಾ ಮಾತುಗಳನ್ನು ಕೇಳಿ : ಅಮೆರಿಕದ ಆರ್ಥಿಕತೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಆದರೆ ಅನೇಕ ಮಂದಿಗೆ ಸರಿಯಾದ ಕೆಲಸ ಅಂತ ಸಿಗುತ್ತಿಲ್ಲ. ನಮ್ಮ ರಾಷ್ಟ್ರ ಹೊಸ ನೌಕರಿಗಳಿಗೆ ಮತ್ತು ಉತ್ಪಾದಕತೆಗೆ ಕೇಂದ್ರ ಸ್ಥಾನವಾಗಬೇಕು.
ಮೋದಿಯ ಗುಜರಾತ್ ಪರಿಸ್ಥಿತಿ ಹೀಗಿದೆ: ದೇಶದಲ್ಲೇ ಗುಜರಾತ್ ಅತ್ಯುನ್ನತ ಉದ್ಯೋಗ ಸೃಷ್ಟಿ ಕೇಂದ್ರವಾಗಿದೆ. ದೇಶದಲ್ಲಿ ಸೃಷ್ಟಿಯಾಗುತ್ತಿರುವ ಶೇ. 72ರಷ್ಟು ಉದ್ಯೋಗಗಳು ಗುಜರಾತಿನ ಬಳುವಳಿಯಾಗಿದೆ. ಗುಜರಾತಿನಲ್ಲಿ ನಿರುದ್ಯೋಗ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ಯಾರೇ ಆಗಲಿ ಉದ್ಯೋಗವನ್ನರಸಿ ಗುಜರಾತಿಗೆ ಬರುವವರು ಶಾಂತಿಯುತವಾಗಿ ವೃತ್ತಿಗೌರವದೊಂದಿಗೆ ಕಾರ್ಯಮಗ್ನರಾಗಬಹುದು.
ಉತ್ಪಾದನಾ ವಲಯವನ್ನು ಪುನಶ್ಚೇತನಗೊಳಿಸಿ, ಸತ್ವಶಾಲಿಗೊಳಿಸುವುದು ಒಬಾಮಾಗೆ ಆದ್ಯತೆಯ ವಿಷಯವಾಗಿದೆ. 21ನೆಯ ಶತಮಾಣದಲ್ಲಿ ಜನತೆ ಬಯಸುತ್ತಿರುವುದು ಇದನ್ನೇ ಅಲ್ಲವೇ? ಮೋದಿಯೂ ಅದನ್ನೇ ಅಲ್ವೇ ಹೇಳಿದ್ದು- 'Zero Defect' ಉತ್ಪಾದನೆ. ಕೇಂದ್ರವು ವಿದೇಶಿ ಆಸಕ್ತಿಗಳಿಗೆ ನೀರೆರೆಯುತ್ತಿರುವಾಗ ಒಬ್ಬ ಮೋದಿ 'Made in India' ಮಂತ್ರ ಜಪಿಸುತ್ತಾ, iCreate ಎನ್ನುತ್ತಿದ್ದಾರೆ. ಒಮಾಬಾ ಮೊನ್ನೆ ತಮ್ಮ ಯುವಕರಿಗೆ ಕರೆಕೊಟ್ಟಿದ್ದು ಈ iCreate ಬಗ್ಗೆಯೇ.
'ನವಜಾತ ಮಧ್ಯಮ ವರ್ಗ' ಘೋಷಣೆಯನ್ನು ಹುಟ್ಟಿಹಾಕುವ ಮೂಲಕ ಮೋದಿ 'ಆಮ್ ಆದ್ಮಿ'ಗೆ ಹತ್ತಿರವಾಗುತ್ತಿರುವಾಗ ಒಬಾಮಾ ಸಹ ಸದೃಢ ಮಧ್ಯಮವರ್ಗ ಸೃಷ್ಟಿ ಬಗ್ಗೆ ಆಪ್ಯಾಯತೆಯಿಂದ ಮಾತನಾಡಿದ್ದಾರೆ.
'ನಮೋ' ಮತ್ತು 'ಬಒ' ಹಸಿರು ಪ್ರೇಮ: ಮೋದಿ ಕಂಡುಕೊಂಡಿರುವ ಸತ್ಯವೆಂದರೆ Information Technology, Bio Technology ಮತ್ತು Environment Technology ಎಂಬ ತ್ರಿಪದಿಗಳು ಭವಿಷ್ಯದ ಆಧಾರಸ್ತಂಬಗಳು ಎಂಬುದು. ಮೋದಿ ಅವರ ಪರಿಸರ ಪ್ರೇಮ ಈಗಾಗಲೇ ಜಗತ್ತಿನಲ್ಲಿ ಗುಜರಾತನ್ನು ನಾಲ್ಕನೆಯ ರಾಜ್ಯವನ್ನಾಗಿಸಿದೆ. ಅಮೆರಿಕದ ಒಬಾಮಾ ಸಹ ಇದನ್ನೇ ಹೇಳುತ್ತಿರುವುದು. ಗೊತ್ತಿಲ್ಲ, ಮುಂದಿನ ದಿನಗಳಲ್ಲಿ ಒಬಾಮಾ ಗುಜರಾತಿಗೆ ಭೇಟಿ ನೀಡಿ, ಚಾರಂಕಾದಲ್ಲಿರುವ ಏಷ್ಯಾದ ಅತಿ ದೊಡ್ಡ ಸೌರಶಕ್ತಿ ಪಾರ್ಕ್ ಗೆ ಭೇಟಿ ನೀಡಿದರೂ ಆಶ್ಚರ್ಯವಿಲ್ಲ.
ಸವಿಸ್ತಾರ ಲೇಖನಕ್ಕೆ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications