ಹಿಂದೂ ಹುಡುಗನ ಕೈಹಿಡಿದ ಮುಸ್ಲಿಂ ಯುವತಿ

ಯಾದಗಿರಿ ತಾಲೂಕಿನ ಮೈಲಾಪೂರ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಈ ಇಬ್ಬರು ಪ್ರೇಮಿಗಳು ಪ್ರೇಮ ವಿವಾಹವಾದರು. ಬೆಳಗಾವಿ ಮೂಲದ ನಸೀಮಾ (25) ಯಾದಗಿರಿ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಆನಂದ (28) ದಾಂಪತ್ಯ ಜೀವನ ಪ್ರೇಮಿಗಳ ದಿನದಿಂದ ಆರಂಭವಾಗಿದೆ.
ಮುಸ್ಲಿಂ ಸಮುದಾಯದ ನಸೀಮಾ ಹಿಂದೂ ಧರ್ಮದ ಆನಂದ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರು ಯಾದಗಿರಿಯ ಅಜೀಂ ಪ್ರೇಮಜಿ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕೇಲಸ ನಿರ್ವಹಿಸುತ್ತಿದ್ದಾರೆ. ಇಂದು ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ತಮ್ಮ ಸ್ನೇಹಿತರ ಸಮ್ಮುಖದಲ್ಲಿ ಸಪ್ತಪದಿ ತುಳಿದರು. ಈ ಬಗ್ಗೆ ಚಿತ್ರೀಕರಿಸಲು ಮಾಧ್ಯಮದವರು ತೆರಳಿದಾಗ ವಿರೋಧ ವ್ಯಕ್ತಪಡಿಸಿದ ಇಬ್ಬರು ದೇವಾಲಯದಿಂದ ಕಾಲ್ಕಿತ್ತರು.
ಈ ಮದುವೆಗೆ ಎರಡು ಮನೆಯವರ ವಿರೋಧವಿದ್ದ ಕಾರಣ ಇಬ್ಬರ ಪಾಲಕರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಅವರಿಬ್ಬರ ಆಪ್ತ ಸ್ನೇಹಿತರು ಮಾತ್ರ ದೇವಸ್ಥಾನದಲ್ಲಿ ಹಾಜರಿದ್ದು, ಮದುವೆಗೆ ಸಾಕ್ಷಿಯಾದರು. ಈ ಬಗ್ಗೆ ಮಾತನಾಡಲು ನವ ಜೋಡಿ ನಿರಾಕರಿಸಿದೆ. ಇದರ ಬಗ್ಗೆ ದೇವಾಲಯದ ಅರ್ಚಕರನ್ನು ಕೇಳಿದರೆ, ಬೇರೆ ಬೇರೆ ಜಾತಿಯವರು ಪ್ರೀತಿಸಿ ಮದುವೆ ಮಾಡಿಕೊಂಡಿರುವುದನ್ನು ದೃಢಪಡಿಸಿದರು.












Click it and Unblock the Notifications