ನೀವು ವ್ಯಾಲೆಂಟೈನಾ? ನಿಮ್ಮ ಡ್ರೆಸ್ ನೋಡಿ ಹೇಳ್ತೀವಿ

ಇದೇ ಬಂದ ಒಂದು ಇ ಮೇಲ್ ಗಮನ ಸೆಳೆಯುತ್ತಿದೆ. ಯಾವ ಡ್ರೆಸ್ ಹಾಕಿಕೊಂಡರೆ ಚೆನ್ನ ಎಂಬುದನ್ನು ಆಯಾ ಪ್ರೇಮಿಗಳೇ ನಿರ್ಧರಿಸಿಕೊಳ್ಳಲಿ. ಆದರೆ, ಪ್ರೇಮಿಗಳ ದಿನದಂದು ಯುವಕ ಯುವತಿಯರು ತೊಟ್ಟ ಉಡುಗೆ ತೊಡುಗೆಗಳ ಆಧಾರದ ಮೇಲೆ ಅವರು ಲವ್ ನಲ್ಲಿ ಬಿದ್ದಿದ್ದಾರಾ? ಮೇಲಕ್ಕೆದ್ದಿದ್ದಾರಾ? ಪ್ರೇಮಿಗಳ ಲವ್ ಯಾವ ಸ್ಟೇಜ್ ನಲ್ಲಿದೆ ಎಂಬುದನ್ನು ಊಹಿಸಬಹುದಂತೆ. ಎಷ್ಟು ಸರಿಯೋ ತಪ್ಪೋ ಓದುಗರೇ ನಿರ್ಧರಿಸಬೇಕು.
ಈ ನಡುವೆ ರೋಸ್ ಡೇ, ಹಗ್ ಡೇ, ಚಾಕಲೇಟ್ ಡೇ, ಪ್ರಪ್ರೊಸಲ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಕಿಸ್ ಡೇ ..ಹೀಗೆ ವ್ಯಾಲೆಂಟೈನ್ ವೀಕ್ ನಿಂದಾಗಿ ವ್ಯಾಪಾರಿಗಳಿಗೆ ಭರ್ಜರಿ ಲಾಭವಾಗಿದೆ. ಯುವಕ ಯುವತಿಯರ ಪ್ರೇಮದ ಹುಚ್ಚು ಅಪ್ಪ ಅಮ್ಮಂದಿರ ಪಾಲಿಗೆ ಡೂಮ್ಸ್ ಡೇ ಆಗದಿದ್ದರೆ ಸಾಕು.
ಸದ್ಯಕ್ಕೆ ಡ್ರೆಸ್ ಕೋಡ್ ಬಗ್ಗೆ ಬರೋಣ.. ಕಲ್ಚರಲ್ ಡೇ, ಗೋವಿಂದ ಡ್ರೆಸ್ ಡೇ, ಎಥನಿಕ್ ಡೇ ಹೀಗೆ ವಿವಿಧ ಡೇ ಆಚರಿಸುವ ಕಂಪನಿಗಳಿಂದಲೇ ಈ ರೀತಿ ಮೇಲ್ ಹಬ್ಬಿರುವ ಶಂಕೆ ಇದೆ ಎಂದು ಲವರ್ಸ್ ಹೇಳಿಕೆ. ಯಾವ ಡ್ರೆಸ್ ಹಾಕಿದ್ದರೆ ಯಾವ ಸ್ಥಿತಿ ನೋಡೋಣ
* ಕೆಂಪು ಉಡುಪು: ಈಗಾಗಲೇ ಲವ್ ನಲ್ಲಿ ಬಿದ್ದಿದ್ದೀರಾ
* ಪಿಂಕ್ ಉಡುಪು: ಪ್ರೊಪೊಸಲ್ ಗೆ ಈಗಷ್ಟೇ ಸಮ್ಮತಿ ಸಿಕ್ಕಿದೆ
* ಹಳದಿ ಉಡುಪು: ಪ್ರೊಪೊಸ್ ಮಾಡಲು ನಾನು ರೆಡಿ
* ನೀಲಿ ಉಡುಪು: ನಾನು ಫ್ರೀ.. ಯಾರಾದರೋ ನನಗೆ ಪ್ರೊಪೋಸ್ ಮಾಡ್ಬಹುದು
* ಹಸಿರು ಉಡುಪು: ನಿನಗಾಗಿ ಮಾತ್ರ ನಾನು ಕಾದಿದ್ದೇನೆ
* ಬಿಳಿ ಉಡುಪು: ಸ್ಸಾರಿ ಡಿಯರ್, ನಾನು ಈಗಾಗಲೇ ಬುಕ್ ಆಗಿದ್ದೇನೆ
* ಕಂದು/ಕಿತ್ತಲೆ ಉಡುಪು: ಭಗ್ನ ಹೃದಯಿ
* ಕಪ್ಪು ಉಡುಪು: ಪ್ರೊಪೊಸಲ್ ಈಗಷ್ಟೇ ಮುರಿದು ಬಿದ್ದಿದೆ
* ನೆರಳೆ ಬಣ್ಣದ ಉಡುಪು: ಸದ್ಯಕ್ಕೆ ಇಷ್ಟವಿಲ್ಲ, ಮುಂದೆ ನೋಡೋಣ
* ಬೇರೆ ಯಾವುದೇ ಬಣ್ಣದ ಉಡುಪಾಗಿದ್ದರೆ, ಲವ್ ಬಗ್ಗೆ ಗೊಂದಲಮಯ ಮನಸ್ಥಿತಿ ಇರುತ್ತದೆ. ಅಥವಾ ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಬೇಡ ಎಂದು ನಿರ್ಧರಿಸಿರುತ್ತಾರೆ.
ಬೆಂಗಳೂರು ಸೇರಿದಂತೆ ಐಟಿ ಕೇಂದ್ರಿತ ನಗರಗಳಲ್ಲಿ ಕಾರ್ಪೊರೇಟ್ ಸಂಸ್ಕೃತಿಗೆ ತಕ್ಕಂತೆ ವ್ಯಾಲೆಂಟೈನ್ಸ್ ಡೇ ಆಚರಣೆಗೆ ಒಳಪಡುತ್ತಿದೆ. ಹೂವು, ಹಣ್ಣು, ಆಭರಣ, ಆಟಿಕೆ, ಗ್ರೀಟಿಂಗ್ ಕಾರ್ಡ್ ಜೊತೆಗೆ ವೆಹಿಕಲ್ ಗಿಫ್ಟ್ ಗಳು ಕೂಡಾ ಹೆಚ್ಚಾಗುತ್ತಿದೆ. ಶೇ 20 ರಷ್ಟು ಅಧಿಕ ವಹಿವಾಟು ಕಾಣಲಾಗಿದೆ ಎಂದು ಅಸೊಚಾಮ್ ನ ಪ್ರಧಾನ ಕಾರ್ಯದರ್ಶಿ ಡಿ.ಎಸ್ ರಾವತ್ ಹೇಳಿದ್ದಾರೆ.












Click it and Unblock the Notifications