ಕಾಂಗ್ರೆಸ್ಸಿಗೆ ಸಂಪೂರ್ಣ ಅಧಿಕಾರ ಕಷ್ಟ ಕಷ್ಟ: AICC

cong-come-back-in-ktk-assembly-doubtful-aicc-survey
ಬೆಂಗಳೂರು, ಫೆ.12: ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸಿಗೆ ನಿಜಕ್ಕೂ ಭಾರಿ ಆಘಾತದ ಸುದ್ದಿಯೊಂದು ಹೊರಬಿದ್ದಿದೆ. ಖುದ್ದು AICCಯೇ ಈ ಸುದ್ದಿಯ ಮೂಲ ಎಂಬುದು ಗಮನಾರ್ಹ.

ಎನಪ್ಪಾ ಅಂದರೆ ಸದ್ಯದಲ್ಲೇ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸಿಗೆ 'ಕೈ'ಕೊಡಲಿದ್ದಾರೆ. ಅಂದರೆ 224 ಸದಸ್ಯರ ವಿಧಾನಸಭೆಯಲ್ಲಿ ಆ ಪಕ್ಷಕ್ಕೆ 110 ಸ್ಥಾನಗಳಷ್ಟೇ ಬರಬಹುದಂತೆ.

ಜನವರಿ 31ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯೇ (AICC) ಸಮೀಕ್ಷೆ ನಡೆಸಿದ್ದು ಅದರ ಪ್ರಕಾರ ಕಾಂಗ್ರೆಸ್ಸಿಗೆ 110 ಅಥವಾ ಅದಕ್ಕಿಂತ ಕಡಿಮೆ ಸ್ಥಾನ ಪ್ರಾಪ್ತಿಯಾಗಲಿದ್ದು, ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯುವುದು ದುಸ್ತರವಾಗಲಿದೆ ಎಂದು ತಿಳಿದುಬಂದಿದೆ.

ಇನ್ನು, ಪಕ್ಷ ನಡೆಸಿದ್ದ ಈ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಅಬ್ಬಬ್ಬಾ ಅಂದರೆ 50-60 ಸೀಟು ದಕ್ಕಬಹುದು. ಅಂದರೆ ಅದರ ಸಾಮರ್ಥ್ಯ ಅರ್ಧಕ್ಕರ್ಧ ಕುಸಿಯಲಿದೆ. ಇನ್ನು ಯಡಿಯೂರಪ್ಪ ಸಾರಥ್ಯದ ಕೆಜೆಪಿಗೆ 15 ಮತ್ತು ಬಿಎಸ್ಆರ್ ಕಾಂಗ್ರೆಸ್ 10 ಸ್ಥಾನಕ್ಕೆ ತೃಪ್ತಪಟ್ಟುಕೊಳ್ಳಬೇಕಾಗುತ್ತದೆ. ಮತ್ತೊಂದು ಪ್ರಮುಖ ಪಕ್ಷವಾದ ಜೆಡಿಎಸ್ 40 ಗಡಿ ತಲುಪಿದರೆ ಅದೇ ಹೆಚ್ಚು.

ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತದ ತಳಮಳ, ಎಸ್ಎಂ ಕೃಷ್ಣ ಪರವಾಗಿ ನಿಂತು ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಅವರ ಗೆಲುವಿಗೆ ಅಡ್ಡಗಾಲು ಹಾಕಲು ಒಕ್ಕಲಿಗರ ಲಾಬಿ ಜೋರಾಗಿರುವುದು ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುವುದಕ್ಕೆ ತೊಡಕಾಗಿವೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು 'ಡೆಕ್ಕನ್ ಕ್ರಾನಿಕಲ್' ಪತ್ರಿಕೆಗೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+