ಪೆಟ್ರೋಲ್ ಬೆಲೆ ಧಗಧಗ: ಬೆಂಗಳೂರಿನಲ್ಲಿ 76 ರೂ!

crude-prices-increase-petrol-diesel-price-hike-soon
ನವದೆಹಲಿ, ಫೆ.16: ಜನ ಸಾಮಾನ್ಯ ಅಂದಾಜಿಸಿದಂತೆ ಆತನ ಮೇಲೆ ಮತ್ತೊಂದು ಹೊರೆ ಬಿದ್ದಿದೆ. ನಗರದ ಪೆಟ್ರೋಲ್ ಬಂಕುಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 76 ರೂ ಮತ್ತು ಡೀಸೆಲ್ ಬೆಲೆ 53 ರೂ.ಗೆ ನಿಗದಿಯಾಗಿದೆ. ಅಲ್ಲಿಗೆ, ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ 2 ಮತ್ತು ಡೀಸೆಲ್ ಬೆಲೆ 90 ಪೈಸೆಯಷ್ಟು ಏರಿಕೆಯಾಗಿದೆ.

ಶುಕ್ರವಾರ ಮಧ್ಯರಾತ್ರಿಯಿಂದ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ರೂ 1.50 ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 45 ಪೈಸೆ ಹೆಚ್ಚಿಸಿ, ಕೇಂದ್ರ ಸರಕಾರ ಕೈತೊಳೆದುಕೊಂಡಿದೆ. ಜತೆಗೆ, ಜಾಗತಿಕ ಮಾರುಕಟ್ಟೆಯಲ್ಲಿನ ಏರಿಕೆಗೆ ಅನುಗುಣವಾಗಿ ಈ ಹೆಚ್ಚಳ ಮಾಡಿರುವುದಾಗಿಯೂ ಸಬೂಬು ಹೇಳಿದೆ.

ಫೆ. 12ರ ಸುದ್ದಿ: ಈಗಾಗಲೇ ಒಂದೇ ಸಮನೆ ಬೆಲೆಯೇರಿಕೆಯಿಂದ ಕಂಗೆಟ್ಟಿರುವ ಜನಕ್ಕೆ ಮತ್ತೊಂದು ಸುತ್ತಿನ ಬೆಲೆಯೇರಿಕೆ ಕಾಡಲಿದೆ. ಅತಿಶೀಘ್ರದಲ್ಲೇ ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುವುದು ನಿಶ್ಚಿತವಾಗಿದೆ.

ಈ ಮಧ್ಯೆ, ರಾಜ್ಯದಲ್ಲಿ KMF ಮೊನ್ನೆ ಗಗನಕ್ಕೇರಿಸಿದ್ದ ನಂದಿನಿ ಹಾಲಿನ ದರವನ್ನು ಸ್ವಲ್ಪಮಟ್ಟಿಗೆ ತಗ್ಗಿಸಿದೆ. ಅಂದರೆ 28 ರೂ. ಗೆ ತಲುಪಿದ್ದ ಸಾಮಾನ್ಯ ಹಾಲಿನ ದರವನ್ನು ಒಂದು ರೂ ತಗ್ಗಿಸಿದ್ದು, ಹೊಸ ದರ ನಾಳೆಯಿಂದ ಜಾರಿಗೆ ಬರಲಿದೆ.

ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿರುವುದರಿಂದ ಭಾರತದಲ್ಲೂ ತೈಲ ಬೆಲೆಯೇರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಇಂಧನ ಪೂರೈಕೆ ಸಂಸ್ಥೆಗಳಾದ Indian Oil, HPCL ಮತ್ತು BPCL ಹೇಳಿವೆ.

ಹಾಗಾಗಿ ಈ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರಿಗೆ ಕನಿಷ್ಠ 1 ರೂಪಾಯಿಯನ್ನು ಹೆಚ್ಚಿಸುವ ಆದೇಶ ಯಾವುದೇ ಕ್ಷಣ ಹೊರಬೀಳಬಹುದು ಎಂದು ಕಂಪನಿ ಮೂಲಗಳು ತಿಳಿಸಿವೆ.

ಹೀಗೆ ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಗದಗನೆ ಉರಿಯುತ್ತಿರುವುದರಿಂದ ಭಾರತೀಯ ತೈಲ ಕಂಪನಿಗಳು ತಲಾ ಒಂದು ಲೀಟರ್ ಪೆಟ್ರೋಲಿಗೆ 1 ರೂಪಾಯಿ, ಡೀಸೆಲ್ ಗೆ 11 ರೂಪಾಯಿ ಮತ್ತು ಎಲ್ ಪಿಜಿ ಟ್ಯಾಂಕರಿಗೆ 500 ರೂಪಾಯಿ ನಷ್ಟ ಅನುಭವಿಸುತ್ತಿವೆ.

ಸರಕಾರ ಕೊಡಮಾಡುತ್ತಿರುವ ಸಬ್ಸಿಡಿಯಿಂದಾಗಿ ಉಸಿರಾಡುತ್ತಿರುವ ಈ ಸರಕಾರಿ ತೈಲ ಕಂಪನಿಗಳಿಗೆ ಮುಂದಿನ ವರ್ಷದಿಂದ ಸಬ್ಸಿಡಿ ಕಟ್ ಮಾಡುವುದಾಗಿ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಹಾಗೇನಾದರೂ ಸಬ್ಸಿಡಿ ವಾಪಸಾದರೆ ತೈಲ ಬೆಲೆಗಳು ದಗದಗನೆ ಉರಿಯುವುದು ನಿಶ್ಚಿತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+