ನಂದಿನಿ ಹಾಲಿನ ದರ 1 ರೂ. ಇಳಿಕೆ ?

ಹಾಲಿನ ದರವನ್ನು 4 ರೂ. ಏರಿಕೆ ಮಾಡಿರುವುದರಿಂದ ಗ್ರಾಹಕರು ಕೆಎಂಎಫ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಸೋಮವಾರ ನಡೆದ ಕೆಎಂಎಫ್ ಆಡಳಿತ ಮಂಡಳಿಯ ಸಭೆಯಲ್ಲಿ ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ವಿರೋಧದ ಕುರಿತು ವಿಸೃತವಾದ ಚರ್ಚೆ ನಡೆಯಿತು ಎಂದು ತಿಳಿದು ಬಂದಿದೆ.
ಗ್ರಾಹಕರ ಹಿತವನ್ನು ಪರಿಗಣಿಸಿ ಹಾಲಿನ ದರವನ್ನು 1 ರೂ. ಇಳಿಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಪರಿಷ್ಕೃತ ದರ ಫೆ.13ರಿಂದ ಜಾರಿಗೆ ಬರಲಿದ್ದು, ಇದರಿಂದಾಗಿ ಪ್ರತಿ ಲೀಟರ್ ಹಾಲಿನ ದರ 1 ರೂ.ಇಳಿಕೆಯಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಸಭೆಯ ಬಳಿಕ ತಿಳಿಸಿದ್ದಾರೆ.
ಚುನಾವಣಾ ತಂತ್ರವೇ : ಹಾಲಿನ ದರವನ್ನು ಏಕಾಏಕಿ 4 ರೂ. ಏರಿಸಿ ನಂತರ 1 ರೂ. ಇಳಿಕೆ ಮಾಡುವ ಮೂಲಕ ಗ್ರಾಹಕರ ಅನುಕಂಪ ಗಿಟ್ಟಿಸಲು ಬಿಜೆಪಿ ಸರ್ಕಾರ ನಿರ್ಧರಿಸಿದೆಯೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ. ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಫೆ.8 ರಂದು ರಾತ್ರಿ ಹಾಲಿನ ದರ ಏರಿಕೆಗೆ ಸಮ್ಮತಿ ಸೂಚಿಸಿದ್ದರು.
ಸೋಮವಾರ ಗ್ರಾಹಕರ ವಿರೋಧ ಎಂದು ಹಾಲಿನ ದರವನ್ನು ಒಂದು ರೂ. ಇಳಿಕೆ ಮಾಡಲಾಗಿದೆ. ಇಂತಹ ತಂತ್ರದ ಮೂಲಕ ಕೆಎಂಎಫ್ ಮತ್ತು ಸರ್ಕಾರ ಹಾಲಿನ ದರವು ಹೆಚ್ಚಾಗಬೇಕು. ಜನರಿಗೆ ಬೆಲೆ ಏರಿಕೆಯ ಬಿಸಿಯೂ ತಟ್ಟಬಾರದು ಎಂಬ ನೀತಿ ಅನುಸರಿಸಲು ಹೊರಟಿದೆಯೇ ಎಂಬ ಅನುಮಾನ ಕಾಡದೆ ಇರದು.












Click it and Unblock the Notifications