ಮತನೀಡಿ 5 ಸಾವಿರ ರು. ಜಮಾ ಮಾಡಿಕೊಳ್ಳಿ!

Vote and get 5 thousand rupee deposited
ಬೆಂಗಳೂರು, ಫೆ.7 : ಮೇ ಕೊನೆಯ ವಾರದಲ್ಲಿ ಚುನಾವಣೆ ನಡೆಯುವುದು ನಿಗದಿಯಾಗಿದೆ. ರಾಜಕೀಯ ಪಕ್ಷಗಳು ಮತದಾರನ್ನು ಸೆಳೆಯಲು ಹಣ, ಕುಕ್ಕರ್, ಸೀರೆ ಮುಂತಾದ ವಸ್ತುಗಳನ್ನು ಹಂಚಲು ಆರಂಭಿಸಿವೆ. ಆದರೆ, ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಮಾತ್ರ ವಿನೂತನವಾದ ಕರಪತ್ರ ಪ್ರಕಟಗೊಂಡಿದ್ದು, ನಾವು ಸೂಚಿಸುವ ಅಭ್ಯರ್ಥಿಗೆ ಮತ ನೀಡಿ 5 ಸಾವಿರ ರು. ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಪಡೆಯಿರಿ ಎಂದು ಹೇಳುತ್ತಿದೆ.

ಕುಷ್ಟಗಿಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಗೊಂಡಿರುವ ಇಂತಹ ಕರಪತ್ರ ನೋಡಿ ಜನರೇ ಆಶ್ಚರ್ಯಗೊಂಡಿದ್ದಾರೆ. ಭಾರತ ಮತದಾರರ ಒಕ್ಕೂಟದ ಲೆಟರ್ ಹೆಡ್ ನಲ್ಲಿ ಮುದ್ರಣಗೊಂಡಿರುವ ಪತ್ರದಲ್ಲಿನ 8971995643, 9880096423, 9019132232 ನಂಬರ್ ಗಳಿಗೆ ಜನರು ಕೂತೂಹಲದಿಂದ ಕರೆ ಮಾಡಿದ್ದಾರೆ.

ಕರಪತ್ರದೊಂದಿಗೆ ಇರುವ ಅರ್ಜಿಯನ್ನು ಭರ್ತಿಮಾಡಿ ಇಟ್ಟುಕೊಳ್ಳಿ. ಪ್ರಕಟಣೆಯಲ್ಲಿರುವ ವಿಳಾಸಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ. ಸ್ಥಳೀಯ ಮತ್ತು ವಿಧಾನಸಭಾ ಚುನಾಣೆಗಳ ಸಮಯದಲ್ಲಿ ತಾವು ಸೂಚಿಸುವ ಅಭ್ಯರ್ಥಿಗಳಿಗೆ ಮತ ಹಾಕಿ. ನಂತರ ನಿಮ್ಮ ಬ್ಯಾಂಕ್ ಖಾತೆಗೆ 5 ಸಾವಿರ ರು. ಜಮಾ ಆಗುತ್ತದೆ ಎಂದು ಕರೆ ಮಾಡಿದವರಿಗೆ ಉತ್ತರ ದೊರೆಯುತ್ತಿದೆಯಂತೆ.

ನೀವು ಯಾರು ಎಂಬ ಪ್ರಶ್ನಿಸಿದರೆ? ಭಾರತ ಮತದಾರರ ಒಕ್ಕೂಟದ ಎಂಬ ನಮ್ಮ ಸಂಘಟನೆ ಭಷ್ಟಾಚಾರ ತೊಲಗಿಸಲು ಇಂತಹ ಕಾರ್ಯ ಮಾಡುತ್ತಿದ್ದೇವೆ. ನಾವು ಹೇಳುವ ಅಭ್ಯರ್ಥಿಗಳಿಗೆ ಮಾತ್ರ ಮತದಾನ ಮಾಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಭಾರತ ಮತದಾರರ ಒಕ್ಕೂಟಕ್ಕೆ ನೀವು ಸದಸ್ಯರಾಗಿ ಎಂದು ಮನವಿ ಮಾಡುತ್ತಿದ್ದಾರಂತೆ. ಹೀಗೆ ಮಾಡುತ್ತಿರುವುದು ಭ್ರಷ್ಟಾಚಾರವಲ್ಲವೆ?

ಪ್ರಕಟಣೆಯಲ್ಲಿ ಅರ್ಜಿ ಸಲ್ಲಿಸಿದವರಿಗೆ 1 ರಿಂದ 5 ಲಕ್ಷ ರು.ವರೆಗೆ ಬ್ಯಾಂಕ್ ನಿಂದ ಸಾಲಸೌಲಭ್ಯ ನೀಡುವುದಾಗಿಯೂ ಆಮಿಷ ಒಡ್ಡಲಾಗಿದ್ದು, ಕೆಲವು ಜನರು ಇದೊಂದು ಗಾಳಿ ಸುದ್ದಿ ಎಂದು ಸುಮ್ಮನಾಗಿದ್ದರೆ, ಇನ್ನೂ ಕೆಲವರು ಅರ್ಜಿ ಸಲ್ಲಿಸಲು ಸೈಬರ್ ಕೆಫೆಗಳನ್ನು ಹುಡುಕುತ್ತಿದ್ದಾರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+