ಮಗಳ ಮೇಲೆ ಮಲ ತಂದೆ ನಿರಂತರ ಅತ್ಯಾಚಾರ

Lucknow: Stepfather rapes 20-year-old girl for months
ಲಖ್ನೋ,ಫೆ.4: ಅಖಿಲೇಶ್ ಯಾದವ್ ಅವರು ಮುಖ್ಯಮಂತ್ರಿಯಾದ ಮೇಲೆ ಕ್ರೈಂ ರೇಟ್ ತಗ್ಗಲಿದೆ ಎಂಬ ಆಶಯ ಹೊತ್ತಿದ್ದ ಉತ್ತರ ಪ್ರದೇಶ ಜನತೆಗೆ ನಿರಾಶೆಯಾಗಿದೆ. ನಗರ ಪ್ರದೇಶಗಳಲ್ಲೇ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿರುವುದು ಆತಂಕಕಾರಿಯಾಗಿದೆ.

ಲಖ್ನೋದ ಮಾಲ್ ಪ್ರದೇಶದಲ್ಲಿ 20 ವರ್ಷದ ಯುವತಿಯೊಬ್ಬಳ ಮೇಲೆ ಆಕೆಯ ಮಲ ತಂದೆಯು ಹಲವಾರು ತಿಂಗಳುಗಳಿಂದ ನಿರಂತರವಾಗಿ ಅತ್ಯಾಚಾರ ಎಸಗಿತ್ತಿರುವ ದಾರುಣ ಘಟನೆ ಬಗ್ಗೆ ಉತ್ತರ ಪ್ರದೇಶ ಪೊಲೀಸರು ಬಹಿರಂಗಗೊಳಿಸಿದ್ದಾರೆ.

ಅತ್ಯಾಚಾರದ ವಿಷಯವನ್ನು ಬಾಯ್ಬಿಟ್ಟಲ್ಲಿ ಕೊಲೆ ಮಾಡುವುದಾಗಿಯೂ ಆತ ಯುವತಿಗೆ ಬೆದರಿಕೆ ಹಾಕಿದ್ದರಿಂದ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಕಳೆದ ನಾಲ್ಕೈದು ತಿಂಗಳುಗಳಲ್ಲಿ ಆತ ಆಕೆಯ ಮೇಲೆ ಹಲವಾರು ಸಲ ಅತ್ಯಾಚಾರವೆಸಗಿದ್ದಾನೆ. ಯುವತಿ ತಾಯಿ ಹಾಗೂ ಆರೋಪಿಯ ಪತ್ನಿಗೆ ವಿಷಯ ತಿಳಿದ ಮೇಲೆ ಆಕೆ ಧೈರ್ಯಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಘಟನೆ ಬಗ್ಗೆ ವಿವರಗಳು ಸಿಕ್ಕಿದೆ. ಯುವತಿಯ ತಾಯಿಯು ತನ್ನ ಮೊದಲ ಪತಿಯೊಂದಿಗಿನ ದಾಂಪತ್ಯ ಜೀವನ ಮುರಿದುಬಿದ್ದ ಬಳಿಕ ಆಕೆ ಆರೋಪಿಯನ್ನು ವಿವಾಹವಾಗಿದ್ದಳು. ಆಕೆಗೆ ಮೊದಲ ಪತಿಯಿಂದ ಇಬ್ಬರು ಪುತ್ರಿಯರಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮಾಯಾವತಿ ಆಡಳಿತ ಕಾಲದಲ್ಲಿ ಸ್ತ್ರೀಯರ ಮಾನಭಂಗದ ತವರೂರು ಎಂದೇ ಪರಿಗಣಿತವಾಗಿದ್ದ ಉತ್ತರ ಪ್ರದೇಶದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದಿದ್ದರೂ ಇನ್ನೂ ಪರಿಸ್ಥಿತಿ ಬದಲಾಗಿಲ್ಲ. ದೌರ್ಭಾಗ್ಯವೆಂದರೆ ಅದೇ ಬಿಎಸ್ ಪಿ ಪಕ್ಷದ ಅಂಗಳದಿಂದಲೇ ಹದಿಹರಯದ ಬಾಲಕಿಯತ್ತ ಪಿಸ್ತೂಲು ಹಿಡಿದು ಬೆದರಿಸಿ ಮಾನಭಂಗ ನಡೆಸಿರುವ ಘಟನೆ ನಡೆದಿತ್ತು.

ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಇಲ್ಲಿನ ಬಾಬಾ ರಾಮದೇವ್ ಅವರ ಪತಂಜಲಿ ಆಶ್ರಮದ ಆಯುರ್ವೇದ ವೈದ್ಯರೊಬ್ಬರನ್ನು ಉತ್ತರಪ್ರದೇಶ ಪೊಲೀಸರು ಜನವರಿ ತಿಂಗಳಿನಲ್ಲಿ ಬಂಧಿಸಿದ ಪ್ರಕರಣ ನಡೆದಿತ್ತು. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+