ಯುವತಿಯ ಅತ್ಯಾಚಾರ ಮಾಡಿ, ಶೂಟೌಟ್

ಮೃತ ಯುವತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಭಾನುವಾರ ಈ ಘಟನೆ ನಡೆದಿದೆ. ಯುವತಿಯನ್ನು ಗುಂಡಿಟ್ಟು ಸಾಯಿಸುವ ಮುನ್ನ ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ ವಿವಾಹಿತ ಮಹಿಳೆ ಪಿಂಕಿ ಎಂಬುವವರನ್ನು ಆಕೆಯ ಪತಿ ಮತ್ತು ಆತನ ಮನೆಯರವರು ಉಸುರುಗಟ್ಟಿಸಿ ಸಾಯಿಸಿದ್ದಾರೆ. ಕನ್ಹೇರಿ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಅಳಿಯನ ಮನೆಯವರು ತಮ್ಮ ಮಗಳು ಪಿಂಕಿಯನ್ನು ಸಾಯಿಸಿದ್ದಾರೆ ಎಂದು ಮೃತ ಮಹಿಳೆಯ ತಂದೆ ಕರಣ್ ಸಿಂಗ್ ಆರೋಪಿಸಿದ್ದಾರೆ. ಪಿಂಕಿ ಪತಿ ಯೋಗೇಶ್ ಕುಮಾರನನ್ನು ಬಂಧಿಸಲಾಗಿದ್ದು, ಆತನ ಮನೆಯರವರು ಪರಾರಿಯಾಗಿದ್ದಾರೆ.












Click it and Unblock the Notifications