ಸಾಲು ಸಾಲು ಐಎಎಸ್, ಐಪಿಎಸ್ ಕೊರತೆ

ಅದೊಂದು ಕಾಲವಿತ್ತು ಐಎಎಸ್/ಐಪಿಎಸ್ ಅಂದರೆ ಅಕ್ಷರಶಃ ರಾಜನೇ ಸರಿ. ಆದರೆ ಖುದ್ದು ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಈಗ ಆ ಹುದ್ದೆಗಳು ಬೇಕಾಗಿಲ್ಲ. ಪ್ರತಿಭಾನ್ವಿತ ಯುವ ಜನತೆ ಅದರತ್ತ ಮೂಸಿನೋಡುತ್ತಿಲ್ಲ. ಅದು ಅವರ ಆಕರ್ಷಣೆ ಕಳೆದುಕೊಂಡು ಯಾವುದೋ ಕಾಲವಾಗಿದೆ.
ತತ್ಫಲವಾಗಿ, ಕಾಲಾಂತರದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳ ಕ್ಷಾಮ ಎದುರಾಗಿದ್ದು, ಪ್ರಸ್ತುತ ಬರೋಬ್ಬರಿ 3,000 ಮಂದಿ ಐಎಎಸ್, ಐಪಿಎಸ್ ಅಧಿಕಾರಿಗಳು ಸರಕಾರದ ಆಡಳಿತಯಂತ್ರಕ್ಕೆ ಬೇಕಾಗಿದ್ದಾರೆ. ಅಷ್ಟೇ ಅಲ್ಲ ಸದ್ಯದಲ್ಲೇ ಶೇ. 33ರಷ್ಟು ಹಾಲಿ ಐಎಎಸ್, ಐಪಿಎಸ್ ಅಧಿಕಾರಿಗಳು ತಮ್ಮ ಸ್ಥಾನಗಳನ್ನು ತೆರವುಗೊಳಿಸಲಿದ್ದು, ಇನ್ನೂ ಭಣಗುಟ್ಟಲಿದೆ. ಇದು ಎಲ್ಲೆಡೆಯೂ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿದೆ.
ಆ ರಾಜ್ಯ ಈ ರಾಜ್ಯ ಅಂತಿಲ್ಲ. ಪ್ರಸ್ತುತ, ದೇಶದಾದ್ಯಂತ ಅನೇಕ ಆಯಕಟ್ಟಿನ ಸ್ಥಾನಗಳೂ ಐಎಎಸ್, ಐಪಿಎಸ್ ಅಧಿಕಾರಿಗಳಿಲ್ಲದೆ ಬಿಕೋ ಎನ್ನುತ್ತಿವೆ. ಇರುವೋ ಕೆಲವೇ ಮಂದಿ ಜೂನಿಯರ್ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ವರ್ಗಾಯಿಸಲಾಗಿದೆ.












Click it and Unblock the Notifications