ಈ ವರ್ಷ ಚಿನ್ನದ ಬೆಲೆ ಕಡಿಮೆಯಾಗುತ್ತದಾ?

ಯುರೋಪಿನ ಪ್ರಮುಖ ಬ್ಯಾಂಕ್ Societe Generale ವಿಶ್ಲೇಷಣೆಯ ಪ್ರಕಾರ ಖಂಡಿತಾ ಈ ಬಾರಿ ಚಿನ್ನದ ಬೆಲೆ ಕಡಿಮೆಯಾಗುತ್ತದೆ. ಹೇಗೆಂದರೆ ...
ಅಮೆರಿಕದಲ್ಲಿ ಡಾಲರ್ ಆಟ: ಡಾಲರ್ ಮೌಲ್ಯ ಉತ್ತಮಗೊಳ್ಳಲಿದೆ. ಬಡ್ಡಿ ದರಗಳು ಹೆಚ್ಚಲಿವೆ. ಆರ್ಥಿಕತೆ ಚೇತರಿಕೆ ಕಾಣಲಿದೆ. ಜತೆಗೆ ಅಮೆರಿಕದಲ್ಲಿ ಸದ್ಯಕ್ಕೆ ಹಣದುಬ್ಬರ ಇನ್ನೂ ನಿಯಂತ್ರಣದಲ್ಲಿದೆ. ಹಾಗಾಗಿ ಚಿನ್ನ ಆಕರ್ಷಣೆ ಕಳೆದುಕೊಳ್ಳಲಿದೆ.
ತತ್ಪರಿಣಾಮವಾಗಿ ಚಿನ್ನದ ಬೆಲೆ ಈ ವರ್ಷ ಕುಗ್ಗಲಿದೆ. ಇದರಿಂದಾಗಿ, ಭಾರತದಲ್ಲಿಯೂ ಚಿನ್ನದ ಬೆಲೆ ಕಡಿಮೆಯಾಗಲಿದೆ. ಆದರೆ ನಿಖರವಾಗಿ ಎಷ್ಟು ಕಡಿಮೆಯಾಗಲಿದೆ ಎಂಬುದರ ಬಗ್ಗೆ ಈಗಲೇ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 30,000 ರೂ. ಗಿಂತ ಸ್ವಲ್ಪವೇ ಹೆಚ್ಚಾಗಿದೆ.












Click it and Unblock the Notifications