ಕಮಲ್ ದೇಶದ ಆಸ್ತಿ, ಸಲ್ಲೂ, ಶಾರುಖ್ ಟ್ವೀಟ್

ಟ್ವೀಟ್ ಲೋಕ, ಜ.31: "ನಾನು ಮುಸ್ಲಿಂರ ವಿರೋಧಿಯಲ್ಲ, ನನ್ನ ಚಿತ್ರ ಮುಸ್ಲಿಂ ವಿರೋಧಿಯಲ್ಲ, ಜಾತಿ ಹೆಸರಿನಲ್ಲಿ ಚಿತ್ರ ತೆಗೆದು ದೇಶ ವಿಭಜನೆ ಮಾಡಲು ಯತ್ನಿಸುತ್ತಿಲ್ಲ, ಈ ಚಿತ್ರಕ್ಕಾಗಿ ಮನೆಮಠ ಎಲ್ಲವನ್ನೂ ಧಾರೆ ಎರೆದಿದ್ದೇನೆ, ಚಿತ್ರ ನಿಷೇಧಗೊಂಡರೆ ಬೀದಿಗೆ ಬೀಳುತ್ತೇನೆ' ಎಂದು ದೇಶದ ಅಪ್ರತಿಮ ಕಲಾವಿದ ಪದ್ಮಶ್ರೀ ಕಮಲ ಹಾಸನ್ ಭಾವುಕರಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳುತ್ತಿದ್ದಂತೆ ಕಮಲ್ ಪರ ಟ್ವೀಟ್ ಗಳ ಮಹಾಪೂರ ಹರಿದು ಬಂದಿದೆ.

ಎಂಎಫ್ ಹುಸೇನ್ ರಂತೆ ನಾನು ದೇಶ ಬಿಟ್ಟು ಜಾತ್ಯತೀತ ದೇಶವನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ ಎಂದು ಕಮಲ್ ಹೇಳಿದ ಮಾತು ದೇಶದ ಕಲಾಭಿಮಾನಿಗಳ ಮನ ತಟ್ಟಿದೆ. ಚಿತ್ರರಂಗದ ಬಹುತೇಕ ಗಣ್ಯರು, ನಟ, ನಟಿಯರು ವಿಶ್ವರೂಪಂ ನಿಷೇಧವನ್ನು ಖಂಡಿಸಿ, ಕಮಲ್ ಹಾಸನ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಸಿನಿಮಾಟೋಗ್ರಾಫಿ ಕಾಯ್ದೆಗೆ ತಿದ್ದುಪಡಿ ತರುವ ನಿರ್ಧಾರಕ್ಕೆ ಬಂದಿದೆ. ಯಾವುದೇ ಒಂದು ಚಿತ್ರಕ್ಕೆ ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್ ನೀಡಿದ ನಂತರ ಅದನ್ನು ಯಾರು ಪ್ರಶ್ನಿಸುವಂತಿರಬಾರದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮನೀಶ್ ತಿವಾರಿ ಟ್ವೀಟ್ ಮಾಡಿದ್ದಾರೆ.

ಕಮಲ್ ಅವರ ಭಾವುಕ ಸುದ್ದಿಗೋಷ್ಠಿ ಮನಕಲುಕುವಂತಿದೆ ಎಂದಿರುವ ಸೆನ್ಸಾರ್ ಮಂಡಳಿ ಅಧ್ಯಕ್ಷೆ ಲೀಲಾ ಸ್ಯಾಮ್ಸನ್, ಕೇಂದ್ರ ಸರ್ಕಾರದ ನಿರ್ಧಾರವನ್ನು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ.

ಉಳಿದಂತೆ ಶಾರುಖ್ ಖಾನ್, ಸಲ್ಮಾನ್ ಖಾನ್, ಫರಾನ್ ಅಖ್ತರ್, ಮಹೇಶ್ ಭಟ್ ಸೇರಿದಂತೆ ಹಲವಾರು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಕಮಲ್ ಹಾಸನ್ ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಟ್ವೀಟ್ ದೃಶ್ಯಾವಳಿ ನೋಡಿರಿ...

ಶಾರುಖ್ ಖಾನ್

ಶಾರುಖ್ ಖಾನ್

We have all gone through this, we have all faced this. To say the least, it is the most unfortunate thing to happen to a film,

ಸಲ್ಮಾನ್ ಖಾನ್ ಟ್ವೀಟ್

ಸಲ್ಮಾನ್ ಖಾನ್ ಟ್ವೀಟ್

Hope each n every fan of his supports him like I am doing n want all my fan to fully support him . Bhool gaye kya ek doojeh ke liyeh, Then go stand out side the cinema hall n insist on seing the film, its a movie dude, entertainment, wat law n order problem on a movie?

ಮಹೇಶ್ ಭಟ್ ಟ್ವೀಟ್

ಮಹೇಶ್ ಭಟ್ ಟ್ವೀಟ್

Kamal Hassan is a national treasure, an immaculate artiste. He has been subjected to humiliation. It is one of the darkest moment for the entire film fraternity,

ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ

ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ

ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಭಾರತಕ್ಕೆ ಆಸ್ಪದವಿಲ್ಲ. ನಮ್ಮದು ಮುಕ್ತ ಸಮಾಜ, ಪ್ರತಿಯೊಬ್ಬರಿಗೂ ಸ್ವತಂತ್ರವಾಗಿ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶ ನೀಡಲಾಗುತ್ತದೆ. ಕಲಾವಿದರನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಸಂವಿಧಾನ ವಿರೋಧಿ ಕ್ರಮವನ್ನು ಖಂಡಿಸುತ್ತೇವೆ

ಫರಾನ್ ಅಖ್ತರ್ ಟ್ವೀಟ್

ಫರಾನ್ ಅಖ್ತರ್ ಟ್ವೀಟ್

"Apart from harassing the film maker, isn't the ban of Vishwaroopam ridiculing the CBFC? Should their authority not be protected?
"And if their decision cannot be upheld, why subject film makers to this review?"

 ಸಿದ್ದಾರ್ಥ್

ಸಿದ್ದಾರ್ಥ್

"Heartbreaking to see the greatest Tamil actor of all time talking about leaving Tamil Nadu, about bankruptcy and about unfair persecution. Vishwaroopam screenings cancelled before starting & even stopped mid show all over TN. What a sad day. What a horrible week. #TalibanTN,"

ನಿರ್ದೇಶಕ ನಿಖಿಲ್ ಅಡ್ವಾಣಿ

ನಿರ್ದೇಶಕ ನಿಖಿಲ್ ಅಡ್ವಾಣಿ

ಸೆನ್ಸಾರ್ ಮಂಡಳಿ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ನಿಖಿಲ್ ಅಡ್ವಾಣಿ 'So should we just consider the Censor Board as a defunct organisation and send all films to the Supreme Court? 'ಎಂದು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+