ಬಹು ಜನಪ್ರಿಯ ಫಿಲಿಪ್ಸ್ ಇನ್ನು ಮುಗಿದ ಕಥೆ

ಬೆಂಗಳೂರು, ಜ.31: ಮನೆ ಮನೆಯ ಮಾತಾಗಿದ್ದ ಫಿಲಿಪ್ಸ್ ಕಂಪನಿಯ ಆಕರ್ಷಕ ವಸ್ತುಗಳು ಇನ್ನು ಗ್ರಾಹಕರಿಗೆ ಸಿಗುವುದಿಲ್ಲ. ಏಕೆಂದರೆ ಕಂಪನಿ ತನ್ನ ಉತ್ಪಾದಕತೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ಗ್ರಾಹಕರಿಗೆ ನಿರಾಶೆ ಕಟ್ಟಿಟ್ಟಬುತ್ತಿ.

ಇಂದಿನ ಸ್ಪರ್ಧಾ ಸಮರದಲ್ಲಿ ಪೈಪೋಟಿ ನೀಡಲಾಗದೆ ಸುದೀರ್ಘ ಇತಿಹಾಸ ಹೊಂದಿರುವ Philips consumer-electronics ಸರಕು ಇದೀಗ ಭವಿಷ್ಯ ಕಳೆದುಕೊಂಡಿದೆ. ಜಿ.ಇ, ಆ್ಯಪಲ್, ಸ್ಯಾಮ್ ಸಂಗ್, ಸೋನಿ ಇವೇ ಮುಂತಾದ ಕಂಪನಿಗಳು ಒಟ್ಟಾಗಿ Philips ಕಂಪನಿಯ ಬಾಗಿಲು ಮುಚ್ಚಿಸಿವೆ.

philips-exits-consumer-electronics-sold-to-japan-funai

ಡಚ್ ಮೂಲದ Philips ಕಂಪನಿಯು ಮಂಗಳವಾರ ತನ್ನಲ್ಲಿ ಉಳಿದುಕೊಂಡಿದ್ದ ಒಂದಷ್ಟು ಪಾಲನ್ನು ಜಪಾನ್ ಕಂಪನಿಗೆ ಮಾರಾಟ ಮಾಡಿ ಇತಿಹಾಸ ಸೇರಿಕೊಂಡಿದೆ. ಮೂಲತಃ ವೈದ್ಯಕೀಯ ಸಲಕರಣೆ ಸರಕುಗಳು ಮತ್ತು ಬಲ್ಬುಗಳ ಮಾರಾಟದಲ್ಲಿ ಎತ್ತಿದ ಕೈ ಎನಿಸಿಕೊಂಡಿದ್ದ Philips ಆನಂತರ ಆಡಿಯೋ, ವಿಡಿಯೋ, ಮಲ್ಟಿಮೀಡಿಯಾ ಮತ್ತಿತರ ಉಪ ಉತ್ಪನ್ನಗಳನ್ನು ಬ್ರ್ಯಾಂಡ್ ಲೈಸೆನ್ಸ್ ಜತೆಗೆ ಸೇರಿಸಿ ಕೇವಲ ಎನಿಸುವಷ್ಟು ಅಂದರೆ 201.8 ದಶಲಕ್ಷ ಡಾಲರ್ ಗೆ ಮಾರಾಟ ಮಾಡಿ ಕೈತೊಳೆದುಕೊಂಡಿದೆ.

Philips ಕಂಪನಿ 80 ವರ್ಷಗಳಿಂದ ನವನವೀನ ಉತ್ಪನ್ನಗಳನ್ನು ತಯಾರಿಸುತ್ತಾ ಜನಮನ್ನಣೆ ಗಳಿಸಿತ್ತು. ಗಮನಾರ್ಹವೆಂದರೆ Philips ನಂತರ ಬದ ಜರ್ಮನಿಯ ಸೀಮನ್ಸ್ ಮತ್ತು ಫ್ರಾನ್ಸಿನ ಅಲ್ಕಾಟೆಲ್ ಲ್ಯುಸೆಂಟ್ ಕಂಪನಿಗಳು ಅಷ್ಟೇ ವೇಗದಲ್ಲಿ ಮಾರುಕಟ್ಟೆಯಿಂದ ನಿರ್ಗಮಿಸಿವೆ.

1930ರಲ್ಲಿ... Philips ರೇಡಿಯೋ ಖರೀದಿಸಿದವನೇ ಊರಿಗೆ ರಾಜ ಎನ್ನುವಂತಾಗಿತ್ತು. 1972ರಲ್ಲಿ ಮೊದಲ ವಿಡಿಯೋ ಕ್ಯಾಸೆಟ್ ರೆಕಾರ್ಡರ್ ಅನ್ನು ಮಾರುಕಟ್ಟೆಗೆ ಬಿಟ್ಟಿತು. 1983ರಲ್ಲಿ ಸಿ.ಡಿ, ಯನ್ನೂ ಹೊರತಂದಿತು. ಆದರೆ ಇಂದಿನ ಡಿಜಿಟಲ್ ಯುಗದ ಪರಿಕಲ್ಪನೆಯನ್ನೂ ಮಾಡದ ಅಂದಿನ ದಿನಗಳಲ್ಲೇ ಅಂದರೆ 1970-80ರಲ್ಲಿ ಜಪಾನಿನ VHS ಮುಂದೆ ಶರಣಾಗತಿ ಬೇಡಿತ್ತು.

ಕಂಪನಿ ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ನೂರಾರು ಮಿಲಿಯನ್ ಡಾಲರ್ ನಷ್ಟ ಅನುಭವಿಸುತ್ತಾ ಬಂದಿತ್ತು. ಮೊಬೈಲ್ ಫೋನ್ ಸೆಟ್, ಟೆಲಿವಿಶನ್ ಅದೂ ಇದೂ ಅಂತ ಉತ್ಪಾದಿಸುತ್ತಾ ಮಾರುಕಟ್ಟೆಯಲ್ಲಿ ಹೇಗೋ ಚಲಾವಣೆಯಲ್ಲಿ ಇರಲು ಬಯಸಿತ್ತಾದರೂ ಇಂದಿನ ಇಂಟರ್ ನೆಟ್ ಯುಗದಲ್ಲಿ ಅನ್ಯ ಮಾರ್ಗವಿಲ್ಲದೆ Philips ಸೋಲೊಪ್ಪಿಕೊಂಡು ಮನೆ ಸೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+