Google ಕಂಪನಿಯಲ್ಲಿ ಆತನ ಸಂಬಳವೆಷ್ಟು ಗೊತ್ತೇ?

google-offer-rushabh-agrawal-bits-pilani-r-1-point-16-c
ಆತ ಇನ್ನೇನು ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿ, ಉದ್ಯೋಗ ಜಗತ್ತಿಗೆ ಪ್ರವೇಶಿಸಬೇಕು ಅಂದುಕೊಳ್ಳುತ್ತಿದ್ದಾಗ ಸೀದಾ ಆತನ ಕಾಲೇಜು ಆವರಣಕ್ಕೆ ಲಗ್ಗೆಯಿಟ್ಟ Google ಕಂಪನಿ ಸರಿಯಾಗಿ ಒಂದು ತಿಂಗಳಲ್ಲಿ ಆತನನ್ನು ಸರ್ವಾಂಗೀಣ ಪರೀಕ್ಷೆಗೆ ಒಳಪಡಿಸಿ ನೀನೇ ನಮಗೆ ತಕ್ಕ ಅಭ್ಯರ್ಥಿ ಎಂದು ಘೋಷಿಸಿದೆ.

ಹಾಗೆ ವಾಗ್ದಾನ ನೀಡಲು Google ಕಂಪನಿ ಆತನಿಗೆ fix ಮಾಡಿದ ಸಂಬಳ ಎಷ್ಟು ಗೊತ್ತೆ? ಬರೋಬ್ಬರಿ ವಾರ್ಷಿಕ 1.6 ಕೋಟಿ ರೂ! ಯಾರಪ್ಪಾ ಆ ಪುಣ್ಯಾತ್ಮ ಮತ್ತು ಕಾಲೇಜು ಯಾವುದು ಅಂದರೆ ಕಂಪ್ಯೂಟರ್ ಸೈನ್ಸ್ ಪದವೀಧರ 'ರುಷಬ್ ಅಗರವಾಲ್' ಆ ಲಕ್ಕಿ ಫೆಲೋ. ಮತ್ತು ಕಾಲೇಜು BITS Pilani. ಗಮನಾರ್ಹವೆಂದರೆ ಆತ ಸೆಲೆಕ್ಟ್ ಆಗಿರುವುದು ಬೆಂಗಳೂರು ಗೂಗಲ್ ಕಚೇರಿಗೆ!

ಇಷ್ಟೆಲ್ಲ ಹೇಳಿದ ಮೇಲೆ ವಿಶ್ವದಲ್ಲಿ ಅತ್ಯುತ್ತಮ workplace ಗೂಗಲ್ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ಅಲ್ವೇ!? ರುಷಬ್ ಅಗರವಾಲ್ ಪ್ರಸ್ತುತ ಪದವಿ ಮುಗಿಸಿ, Mountain View, California Officeನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಆಗಸ್ಟ್ 10, 2012: ರುಷಬ್ ಅಗರವಾಲ್ ಗೂಗಲ್ ಲಿಖಿತ ಪರೀಕ್ಷೆ ಬರೆದಿದ್ದು.
ಆಗಸ್ಟ್ 10, 2012: ಬೆಂಗಳೂರು ಗೂಗಲ್ ಕಚೇರಿಯಿಂದ ರುಷಬ್ ಸೇರಿದಂತೆ 5 ಮಂದಿಗೆ ಬುಲಾವ್.
ಸೆಪ್ಟೆಂಬರ್ 8, 2012: ಐದೂ ಮಂದಿಗೆ ಸಂದರ್ಶನಗಳು. ಅದರಲ್ಲಿ ಸೆಲೆಕ್ಟ್ ಆಗಿದ್ದು ರುಷಬ್ ಅಗರವಾಲ್ ಮತ್ತು ಕುನಾಲ್ ಲಾಡ್.

ಮುಂದೆ ಇಮೇಲ್ ಮೂಲಕ ರುಷಬ್ ಅಗರವಾಲ್ ಮಾತ್ರವೇ ಸೆಲೆಕ್ಟ್ ಆಗಿರುವುದು ತಿಳಿಸಿದಾಗ, ಆತ ಪುಟ್ಟ ಇಮೇಲ್ ಬರಹವನ್ನು ಹತ್ತು ನಿಮಿಷದಲ್ಲಿ ಹತ್ತಾರು ಸಲ ಓದಿದ ಬಳಿಕವೇ ವಾಸ್ತವಕ್ಕೆ ಮರಳಿದ್ದು. ಹುಡುಗ ಅಷ್ಟೊಂದು excite ಆಗಿದ್ದ. ಆ ಘಳಿಗೆಯಲ್ಲೇ ಗೂಗಲ್ HR ಫೋನ್ ಮಾಡಿ, ನೀನು ಅಂತಿಮವಾಗಿ ಸೆಲೆಕ್ಟ್ ಆಗಿದ್ದೀಯಾ ಎಂದೂ ಘೋಷಿಸಿದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+