ಶಿವಸೇನೆಗೆ ಸುಷ್ಮಾ ಸ್ವರಾಜ್ ಪ್ರಧಾನಿ ಅಭ್ಯರ್ಥಿಯಂತೆ

ಮುಂಬೈ, ಜ.30: ಭಾವಿ ಪ್ರಧಾನ ಮಂತ್ರಿ ಸ್ಥಾನಕ್ಕೆ ಆಯಾ ಪಕ್ಷಗಳು ಶಕ್ತ್ಯಾನುಸಾರ ಹೆಸರುಗಳನ್ನು ಸೂಚಿಸುತ್ತಿವೆ. ತಾಜಾ ಆಗಿ ಶಿವಸೇನೆಯು ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಆ ಹುದ್ದೆಗೆ ಯೋಗ್ಯ ಅಭ್ಯರ್ಥಿ ಎಂದು ಹೇಳಿದೆ.

NDA ಪ್ರಧಾನಿ ಅಭ್ಯರ್ಥಿಯಾಗಿ ಗುಜರಾತ್‌ ಸಿಎಂ ನರೇಂದ್ರ ಮೋದಿಯವರನ್ನು ತಾಜಾ ಆಗಿ ಬಿಜೆಪಿಯ ಹಿರಿಯ ನಾಯಕ ಯಶವಂತ ಸಿನ್ಹಾ, ರಾಮ್ ಜೇಠ್ಮಲಾನಿ, ಸಿಪಿ ಠಾಕೂರ್ ಸೇರಿದಂತೆ ಅನೇಕರು ಬೆಂಬಲಿಸುತ್ತಿರುವ ಸಂದರ್ಭದಲ್ಲೇ ಸುಷ್ಮಾ ಬಗ್ಗೆ ಶಿವಸೇನೆಯ ವಕ್ತಾರ ಹಾಗೂ ಸಂಸದ ಸಂಜಯ ರಾವತ್ ಅವರು ಮಂಗಳವಾರ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

sushma-swaraj-shiv-sena-pm-candidate-sanjay-raut

ಶಿವಸೇನೆಯ ದಿವಂಗತ ನಾಯಕ ಬಾಳಾ ಠಾಕ್ರೆ ಕೂಡ ಸುಷ್ಮಾ ಪ್ರಧಾನಿ ಅಭ್ಯರ್ಥಿನಿಯಾಗಬೇಕೆಂಬ ಬಗ್ಗೆ ಒಲವು ಹೊಂದಿದ್ದರು. ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಮುನ್ನ ಬಿಜೆಪಿ ತನ್ನ ಮಿತ್ರ ಪಕ್ಷಗಳ ಸಲಹೆಯನ್ನು ಪಡೆಯಬೇಕೆಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಗಮನಾರ್ಹವೆಂದರೆ ಶಿವಸೇನೆಯ ಹಾಲಿ ಅಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಸಂಜಯ ರಾವತ್ ಅವರ ವಿರೋಧಿ ಪಾಳದಲ್ಲಿ ಗುರುತಿಸಿಕೊಂಡಿರುವ ರಾಜ್ ಠಾಕ್ರೆ ಅವರು ನರೇಂದ್ರ ಮೋದಿಗೆ ನಿಕಟವಾಗಿದ್ದು, ಮೋದಿ ಪ್ರಧಾನಿಗೆ ಒಲವು ತೋರಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+