ಇ ಮೇಲ್ ಮೂಲಕ ರಾಜೀನಾಮೆ ರವಾನೆ!

ಏನಪಾ ಅಂದರೆ ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಇಚ್ಛಿಸಿರುವ Team KJP, ಇಂದು ಬೆಳಗ್ಗೆ ಸ್ಪೀಕರ್ ಕೆ ಜಿ ಬೋಪಯ್ಯ ಅವರ ಇ-ಮೇಲ್ ವಿಳಾಸಕ್ಕೆ ಅಷ್ಟೂ ರಾಜೀನಾಮೆ ಪತ್ರಗಳನ್ನು ರವಾನಿಸಿದೆ.
ಮರುಮಾತನಾಡದೆ, ಮರುವಿಳಂಬ ಮಾಡದೆ ಈ ರಾಜೀನಾಮೆ ಪತ್ರಗಳನ್ನು ಅಂಗೀಕರಿಸಿ ಎಂದು ಶಾಸಕ ಸಿಎಂ ಉದಾಸಿ ಹೇಳಿದ್ದಾರಾದರೂ, ಜನವರಿ 27 ಅಥವಾ 28ರಂದು ಇದನ್ನು ಸ್ವೀಕರಿಸಿ ಎಂದು ಸೂಚಿಸಿರುವುದು ಕುತೂಹಲಕಾರಿಯಾಗಿದೆ.
ಇತ್ತ ಯುದ್ಧ ಗೆದ್ದ ಉತ್ಸಾಹದಲ್ಲಿರುವ Team BJP, ಈ ಮೇಲು- ಆ ಮೇಲು ಆಟಗಳೆಲ್ಲ ನಮ್ಮತ್ರ ನಡೆಯೋದಿಲ್ಲ. ಅಸಲಿಗೆ ಕಾನೂನಿನಲ್ಲಿ ಅದಕ್ಕೆ ಮಾನ್ಯತೆಯೇ ಇಲ್ವಲ್ಲಾ! ಎಂದು ಗಹಗಹಿಸಿ ನಕ್ಕಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications