ಪದವೀಧರರಿಗೆ ಎಸ್ ಬಿಐನಿಂದ ಬಂಪರ್ ಸುದ್ದಿ

1500ಕ್ಕೂ ಅಧಿಕ ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗೆ ಅರ್ಜಿದಾರರು ಬುಧವಾರ(ಜ.23) ನೀಡಿದ ಪ್ರಕಟಣೆಯಂತೆ ವಿದ್ಯಾರ್ಹತೆ ಕಲಂ ನಲ್ಲಿ ಯಾವುದೇ ಪದವಿ ಪಡೆದಿರುವ ದಾಖಲೆ ಒದಗಿಸಿದರೆ ಸಾಕು. ಪಡೆದ ಅಂಕಗಳ ಶೇಕಡಾವಾರು ಲೆಕ್ಕಾಚಾರ ಬೇಕಿಲ್ಲ ಎನ್ನಲಾಗಿದೆ.
ಹೀಗಾಗಿ ಪದವಿ ಅಂಕಗಳ ಕಟ್ ಆಫ್ ಪರ್ಸಂಟೇಜ್ ಬಗ್ಗೆ ಚಿಂತೆ ಇಲ್ಲದೆ ಅರ್ಜಿ ಹಾಕಬಹುದಾಗಿದೆ. ಕಳೆದ ವರ್ಷದ ತನಕ, ಶೇ 55 ಅಂಕ ಪಡೆದವರು ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗೆ ಅರ್ಜಿ ಹಾಕಬಹುದಾಗಿತ್ತು. ಆದರೆ, ಎಸ್ ಬಿಐ ನೀಡಿರುವ ಇತ್ತೀಚಿನ ಪ್ರಕಟಣೆಯಲ್ಲಿ ಈ ಬಗ್ಗೆ ಯಾವುದೇ ಸೂಚನೆ ಇಲ ಎಂದು ಬ್ಯಾಂಕ್ ಪರೀಕ್ಷೆಗಳ ತರಬೇತಿ ಕೇಂದ್ರ, ನ್ಯಾಷನಲ್ ಸ್ಕೂಲ್ ಆಫ್ ಬ್ಯಾಂಕಿಂಗ್ ನಿರ್ದೇಶಕ ಸಿ,ಎಸ್ ವೆಪ ಹೇಳಿದ್ದಾರೆ.
ಆಸಕ್ತ ಅಭ್ಯರ್ಥಿಗಳು ಜನವರಿ 30 ರಿಂದ ಫೆಬ್ರವರಿ 23ರವರೆಗೂ ಆನ್ ಲೈನ್ ಮೂಲಕ ಅರ್ಜಿ ಹಾಕಬಹುದಾಗಿದೆ. ಲಿಖಿತ ಪರೀಕ್ಷೆಗಳು ಏಪ್ರಿಲ್ 28, 2013ರಂದು ನಡೆಯುವ ಸಾಧ್ಯತೆಯಿದೆ.
21 ರಿಂದ 30 ವರ್ಷ ವಯೋಮಿತಿಯಲ್ಲಿರುವ ಪದವೀಧರರು ಅರ್ಜಿ ಹಾಕಲು ಅರ್ಹರಾಗಿರುತ್ತಾರೆ. ಪ್ರೊಬೇಷನರಿ ಅಧಿಕಾರಿಗಳ ಸಂಬಳ ಭತ್ಯೆ ಗರಿಷ್ಠ 69,000 ಪ್ರತಿ ತಿಂಗಳಿನಂತೆ ದೊರೆಯಲಿದೆ. ಆದರೆ, ಯಾವ ವಿಭಾಗಕ್ಕೆ ನೇಮಕಾತಿ ನಡೆಯಲಿದೆ ಎಂಬುದರ ಮೇಲೆ ಸಂಬಳದ ಮೊತ್ತ ನಿರ್ಧರವಾಗಲಿದೆ ಎಂದು ಬ್ಯಾಂಕ್ ಮೂಲಗಳು ಹೇಳಿದೆ.
ರೀಟೇಲ್ ಬ್ಯಾಂಕಿಂಗ್ ಪೈಪೋಟಿ ಹಾಗೂ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಲು ಹೆಚ್ಚಿನ ನೇಮಕಾತಿ ಅಗತ್ಯವಿದೆ ಎಂದು ಎಸ್ ಬಿಐ ಚೇರ್ ಮನ್ ಪ್ರತೀಪ್ ಚೌಧರಿ ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ಎಸ್ ಬಿಐ ವರದಿ ಪ್ರಕಾರ ಕಳೆದ ಆರ್ಥಿಕ ವರ್ಷದಲ್ಲಿ 7,452 ಜನ ಉದ್ಯೋಗಗಳನ್ನು ಸಂಸ್ಥೆ ಕಳೆದುಕೊಂಡಿದೆ. ಆದರೆ, ಈ ಆರ್ಥಿಕ ವರ್ಷದಲ್ಲಿ 9,500 ಹೊಸ ನೇಮಕಾತಿ ಮಾಡಿಕೊಳ್ಳುವ ಮೂಲಕ ಮಾನವ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಲಾಗುತ್ತದೆ.
2012-13ರಲ್ಲಿ 9,500ಕ್ಕೂ ಅಧಿಕ ಕ್ಲಕ್ ಹುದ್ದೆಗಳು ಲಭ್ಯವಿರುತ್ತದೆ ಎಂದು ಬ್ಯಾಂಕ್ ಪ್ರಕಟಿಸಿದ್ದಾರೆ. ಮಾರ್ಚ್ 31, 2012ಕ್ಕೆ ಅನ್ವಯವಾಗುವಂತೆ ಎಸ್ ಬಿಐ ನಲ್ಲಿ ಶಾಶ್ವತ ಉದ್ಯೋಗಿಗಳ ಸಂಖ್ಯೆ 2,15,481ನಷ್ಟಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಂಗ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ 1000 ಮಂದಿ ಪ್ರೊಬೇಷನರಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಸಕ್ತ ಆರ್ಥಿಕ ವರ್ಷ 2012-13ರಲ್ಲಿ ಸುಮಾರು 63,200ಕ್ಕೂ ಅಧಿಕ ಹೊಸ ನೇಮಕಾತಿ ನಡೆಸಲಾಗುತ್ತದೆ ಎಂದು ಚಿದಂಬರಂ ಭರವಸೆ ನೀಡಿದ್ದರು. ಮಾರ್ಚ್ 2012ರ ಕೊನೆಗೆ ಒಟ್ಟಾರೆ ಸಾರ್ವಜನಿಕ ವಲಯದ ಬ್ಯಾಂಕ್ (ರಾಷ್ಟ್ರೀಕೃತ ಬ್ಯಾಂಕ್, ಎಸ್ ಬಿಐ ಹಾಗೂ ಜೊತೆಗಿನ ಬ್ಯಾಂಕ್ ಗಳು) ಗಳ ಉದ್ಯೋಗಸ್ಥರ ಸಂಖ್ಯೆ 8,01,509 ಆಗಿದೆ.












Click it and Unblock the Notifications