ಲೈಂಗಿಕವಾಗಿ ಪೀಡಿಸಿದ ಕಾಮುಕ ಶಿಕ್ಷಕನ ಬಂಧನ

Vice-principal arrested for molesting girl student
ಪುಣೆ, ಜ. 22 : ಹದಿನಾಲ್ಕು ವರ್ಷ ವಯಸ್ಸಿನ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ದುರ್ಬಳಸಿಕೊಂಡ ಆರೋಪದ ಮೇಲೆ ಪುಣೆಯ ಪ್ರತಿಷ್ಠಿತ ಶಾಲೆಗಳಲ್ಲಿ ಒಂದು ಎಂದು ಹೆಸರಾಗಿರುವ ಡಾನ್ ಬಾಸ್ಕೋ ಕಾನ್ವೆಂಟ್ ಶಾಲೆಯ ವೈಸ್ ಪ್ರಿನ್ಸಿಪಾಲ್‌ನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಯರವಾಡದಲ್ಲಿರುವ ಡಾನ್ ಬಾಸ್ಕೋ ಕಾನ್ವೆಂಟ್ ಶಾಲೆಯ ವೈಸ್ ಪ್ರಿನ್ಸಿಪಾಲ್ ಕೂಡ ಆಗಿರುವ ಶಿಕ್ಷಕ ಇಜು ಫ್ರಾನ್ಸಿಸ್ ಫಲ್ಕಾವ್ (54) ತನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದ ಎಂದು 14 ವರ್ಷದ ವಿದ್ಯಾರ್ಥಿನಿ ದೂರು ನೀಡಿದ್ದಳು. ತನ್ನನ್ನು ಜ.2ರಂದು ಚೇಂಬರಿಗೆ ಕರೆಸಿಕೊಂಡ ಇಜು ಲೈಂಗಿಕವಾಗಿ ಹಿಂಸಿಸಿದ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಳು.

ದೂರು ನೀಡಿರುವ ವಿದ್ಯಾರ್ಥಿನಿಯಲ್ಲದೆ ಇನ್ನೂ ಮೂರು ವಿದ್ಯಾರ್ಥಿನಿಯರ ಮೇಲೆ ಈ ಕಾಮುಕ ಶಿಕ್ಷಕ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಮತ್ತು 511ಗಳಡಿ ಆತನ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಬಂಧಿಸಲಾಗಿರುವ ಶಿಕ್ಷಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇಜುನ ಅಸಭ್ಯ ವರ್ತನೆಯ ಬಗ್ಗೆ ತಿಳಿಯುತ್ತಿದ್ದಂತೆ ಕೆಲ ರಾಜಕೀಯ ಪಕ್ಷಗಳ ಕಾರ್ಯಕರ್ತರು ಶಾಲೆಯ ಎದುರಿಗೆ ಜಮಾಯಿಸಿ ಫಲ್ಕಾವ್ ವಿರುದ್ಧ ಘೋಷಣೆಗಳನ್ನು ಕೂಗಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+