ಪಿಕ್ನಿಕ್ ಬೇಡ ಅಂದಿದ್ದಕ್ಕೆ 12ರ ಬಾಲಕ ಆತ್ಮಹತ್ಯೆ

ಅಪ್ಪ ದುಡ್ಡು ಕೊಡಲಿಲ್ಲ. ತಾನು ಪಿಕ್ನಿಕ್ ಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ನೊಂದ ಏಳನೆ ತರಗತಿಯ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒರಿಸ್ಸಾದ ಗಂಜಾಮ್ ಜಿಲ್ಲೆಯಲ್ಲಿ ವರದಿಯಾಗಿದೆ.
ಜಿಲ್ಲೆಯ ಗೊಬಾರದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 12 ವರ್ಷದ ವಿದ್ಯಾರ್ಥಿ ಬಲರಾಂ ನಾಯಕ್ ವ್ಯಾಸಂಗ ಮಾಡುತ್ತಿದ್ದ. ಪಿಕ್ನಿಕ್ ಗೆ ಹೋಗಲು ಆಗಲಿಲ್ಲವಲ್ಲಾ ಎಂದು ಬಾಲಕ ಶನಿವಾರ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಗ್ರಾಮಸ್ಥರು ಅವನನ್ನು ಆಸ್ಪತ್ರೆಗೆ ಕರೆದೊಯ್ದರೂ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಬಾಲಕನ ಆತನ ತಂದೆ ದಿನಗೂಲಿ ಮಾಡಿದರೆ, ತಾಯಿ ಅರಣ್ಯದಲ್ಲಿ ಕಿರುಉತ್ಪನ್ನಗಳನ್ನು ಸಂಗ್ರಹಿಸುತ್ತಾರೆ. ಕುಟುಂಬ ಕಡು ಬಡತನದಲ್ಲಿದೆ. ಬಾಲಕ ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ ಆತನ ಪೋಷಕರು ಮತ್ತು ಅಜ್ಜ ಮನೆಯಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಅವರು ಶಾಲಾ ಶಿಕ್ಷಕರನ್ನು ವಿಚಾರಣೆಗೊಳಪಡಿಸಲಾಗಿದೆ












Click it and Unblock the Notifications