ಕನ್ನಡ ದ್ರೋಹಿ ಎಫ್ಎಂ ಚಾನಲ್ಲುಗಳಿಗೆ ಕೋರ್ಟ್ ನೋಟೀಸ್

HC notice to FM channels in Karnataka
ಬೆಂಗಳೂರು, ಜ. 18 : ಕನ್ನಡವನ್ನು ಕಡೆಗಣಿಸಿ ಹಿಂದಿ ಮತ್ತು ಇಂಗ್ಲಿಷಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿವೆ ಎಂದು ಆರೋಪಿಸಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಹೂಡಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಲ್ಕು ಎಫ್ಎಂ ಚಾನಲ್ಲುಗಳಿಗೆ ಹೈಕೋರ್ಟ್ ನೋಟೀಸ್ ನೀಡಿದೆ.

ರೆಡ್ ಎಫ್ಎಂ 93.5, ರೇಡಿಯೋ ಫೀವರ್ 104, ರೇಡಿಯೋ ಒನ್ 94.3, ರೇಡಿಯೋ ಇಂಡಿಗೋ 91.9 ಚಾನಲ್ಲುಗಳಿಗೆ ಕರ್ನಾಟಕ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ. ಮುಂದಿನ ವಾರ ಕೋರ್ಟಿಗೆ ಹಾಜರಾಗುವಂತೆ ನೋಟೀಸಿನಲ್ಲಿ ತಿಳಿಸಲಾಗಿದೆ.

ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಕನ್ನಡ ಭಾಷೆಯನ್ನು ಬಿಟ್ಟು ಹಿಂದಿ ಭಾಷೆಯ ಕಾರ್ಯಕ್ರಮಗಳನ್ನು ಹೆಚ್ಚಾಗಿ ಪ್ರಸಾರ ಮಾಡುತ್ತಿವೆ ಎಂದು ಆರೋಪಿಸಿ ದ.ಸಂ.ಸ. ಹೋರಾಟಗಾರ ಮತ್ತು ಸಾಹಿತಿ ಗೊಲ್ಲಳ್ಳಿ ಶಿವಪ್ರಸಾದ್ ಅವರು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಈ ಚಾನಲ್ಲುಗಳು ಭಾರತ ಸರಕಾರದ ಜೊತೆ ಒಡಂಬಡಿಕೆ ಮಾಡುವಾಗ ಪ್ರಾದೇಶಿಕ ಭಾಷೆಗೆ ಒತ್ತು ನೀಡುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದವು. ಈಗ ಪ್ರಾದೇಶಿಕ ಭಾಷೆಯನ್ನೇ ಕಡೆಗಣಿಸಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದು, ಇದು ಕಾನೂನು ಬಾಹಿರವಾಗಿದೆ ಎಂದು ಗೊಲ್ಲಳ್ಳಿ ಶಿವಪ್ರಸಾದ್ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಎಫ್ಎಂ ರೇಡಿಯೋಗಳು ಆಗಾಗ ಕನ್ನಡ ಹಾಡುಗಳನ್ನು, ಕನ್ನಡದಲ್ಲಿ ಜಾಹೀರಾತುಗಳನ್ನು ಬಿತ್ತರಿಸುತ್ತಿದ್ದರೂ ಅದರ ಪ್ರಮಾಣ ತೀರ ಕಡಿಮೆ. ಎಫ್ಎಂ ಚಾನಲ್ಲುಗಳ ಕನ್ನಡ ವಿರೋಧಿ ಧೋರಣೆಯನ್ನು ವಿರೋಧಿಸಿ ಕರ್ನಾಟಕ ಆಡಿಯೋ ಮತ್ತು ವಿಡಿಯೋ ಮಾಲಿಕರ ಸಂಘ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿಭಟನೆ ವ್ಯಕ್ತಪಡಿಸಿತ್ತು. ಚಾನಲ್ ಮಾಲಿಕರ ಜೊತೆ ಮಾತುಕತೆ ಕೂಡ ನಡೆಸಿತ್ತು.

ಕನ್ನಡ ರಾಜ್ಯೋತ್ಸವ ಬಂದಾಗ ಕೆಲ ಕನ್ನಡ ಕಾರ್ಯಕ್ರಮಗಳನ್ನು, ಕನ್ನಡ ಜಾಹೀರಾತುಗಳನ್ನು ಪ್ರಸಾರ ಮಾಡುತ್ತವೆಯೇ ಹೊರತು ಉಳಿದ ಸಮಯದಲ್ಲಿ ಕನ್ನಡವನ್ನು ನಿಕೃಷ್ಟವಾಗಿ ನೋಡಲಾಗುತ್ತಿದೆ. ಕೆಲ ಬಾರಿ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಅವಮಾನವಾಗುವಂತೆ ಕೂಡ ನಡೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಈ ಚಾನಲ್ಲುಗಳು ಕನ್ನಡಿಗರ ಹಕ್ಕುಗಳನ್ನೇ ಕಿತ್ತುಕೊಂಡಿವೆ ಎಂದು ಆಡಿಯೋ ವಿಡಿಯೋ ಮಾಲಿಕರು ಆರೋಪಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+