ಲೈಂಗಿಕ ಕಿರುಕುಳ ಆರೋಪ, ಕೋಚ್ ಬಂಧನ

J & K U-20 Hockey coch held Molestation case
ಹೈದರಾಬಾದ್, ಜ.15: ಇಪ್ಪತ್ತು ವರ್ಷದೊಳಗಿನವರ ಮಹಿಳೆಯರ ರಾಷ್ಟ್ರೀಯ ಹಾಕಿ ತಂಡ ಆಟಗಾರ್ತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜಮ್ಮು ಕಾಶ್ಮೀರ ಮಹಿಳಾ ತಂಡದ ಕೋಚ್ ಅಂಗದ್ ಸಿಂಗ್ ರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

ಪಂಜಾಬ್ ಆಟಗಾರ್ತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜಮ್ಮು-ಕಾಶ್ಮೀರ ಮಹಿಳಾ ತಂಡದ ಕೋಚ್ ಅಂಗದ್ ಸಿಂಗ್‌ರನ್ನು ಬಂಧಿಸಿ, ಕೋರ್ಟಿಗೆ ಹಾಜರುಪಡಿಸಲಾಗಿದೆ ಎಂದು ಹೈದರಾಬಾದ್ ಪೊಲೀಸರು ಹೇಳಿದ್ದಾರೆ.

ಹೈದರಾಬಾದ್‌ಗೆ ರೈಲಿನಲ್ಲಿ ಆಗಮಿಸುತ್ತಿದ್ದ ವೇಳೆ ತಮ್ಮೊಂದಿಗೆ ಪ್ರಯಾಣಿಸುತ್ತಿದ್ದ ಜಮ್ಮು-ಕಾಶ್ಮೀರದ ಕೋಚ್ ಸಿಂಗ್ ತಮಗೆ ಲೈಂಗಿಕ ಕಿರುಕುಳವನ್ನು ನೀಡಿದ್ದಾರೆ ಎಂದು ಟೂರ್ನಿಯ ಸಂಘಟಕರಿಗೆ ಪಂಜಾಬ್‌ನ ಆಟಗಾರ್ತಿಯರು ದೂರು ನೀಡಿದ್ದರು.

ಈಗಾಗಲೆ ಟೂರ್ನಿಯಿಂದ ಹೊರ ನಡೆದಿರುವ ಜಮ್ಮು ತಂಡವನ್ನು ನಗರದಲ್ಲೇ ಬಿಟ್ಟು ದಿಲ್ಲಿಯತ್ತ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಿಂಗ್‌ರನ್ನು ಕೂಡಲೆ ಪತ್ತೆ ಹಚ್ಚಿದ ಹೈದರಾಬಾದ್ ಪೊಲೀಸರು, ರೈಲ್ವೆ ಪೊಲೀಸರ ನೆರವಿನಿಂದ ಕೋಚ್‌ರನ್ನು ಬಂಧಿಸಿದರು. ಪಂಜಾಬ್ ಆಟಗಾರ್ತಿಯರು ನೀಡಿದ ದೂರನ್ನು ಆಧರಿಸಿ ಚಂಡೀಗಢ ಪೊಲೀಸರು ಕೂಡ ಅಂಗದ್ ಸಿಂಗ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಆಂಧ್ರ ಅಂಗದ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 354 ಹಾಗೂ 506ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದೆಹಲಿ -ಆಂಧ್ರ ಏಕ್ಸ್ ಪ್ರೆಸ್ ನಲ್ಲಿ ಅಂಗದ್ ಪ್ರಯಾಣಿಸುತ್ತಿದ್ದರು. ಕರೀಂನಗರ ಜಿಲ್ಲೆಯ ರಾಮಗುಂಡಂ ಎಂಬಲ್ಲಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪೊಲೀಸರನ್ನು ಕಂಡ ಕೂಡಲೇ ತಪ್ಪಿಸಿಕೊಳ್ಳಲು ವಿಫಲ ಯತ್ನ ನಡೆಸಿದರು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ತೇಜ್‌ದೀಪ್ ಕೌರ್ ಮೆನನ್‌ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+