ಪತ್ನಿಯನ್ನೇ ವೇಶ್ಯಾವಾಟಿಕೆಗೆ ತಳ್ಳಿದ ಪತಿಯ ಬಂಧನ

Husband pushes wife into prostitution, arrested
ಲಖನೌ, ಜ. 12 : ಹೆಂಡತಿಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದ ವಿಕೃತ ಮನಸ್ಸಿನ ಗಂಡನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಏರ್‌ಲೈನ್ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.

ಪೊಲೀಸರ ಪ್ರಕಾರ, ಏರ್‌ಲೈನ್ ಕಂಪನಿಯ ಉದ್ಯೋಗಿ ವಿಭೇಶ್ ಕುಮಾರ್ ತನ್ನ ಹೆಂಡತಿಯ ಅಶ್ಲೀಲ ಚಿತ್ರಗಳನ್ನು ತೆಗೆದು, ಎಮ್ಎಮ್ಎಸ್ ತಯಾರಿಸಿ ಆಕೆಯನ್ನು ಬ್ಲಾಕ್ ಮೇಲ್ ಮಾಡುತ್ತ ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದ್ದ. ಆತನ ಕಾಟ ತಾಳಲಾರದೆ ಕೊನೆಗೊಂದು ದಿನ ಹೆಂಡತಿಗೆ ಪೊಲೀಸರಿಗೆ ದೂರು ನೀಡಿದ್ದಾಳೆ.

ತ್ವರಿತವಾಗಿ ಹಣ ಗಳಿಸುವ ಉದ್ದೇಶದಿಂದ ಹೆಂಡತಿಯನ್ನು ವೇಶ್ಯಾವಾಟಿಕೆಗೆ ವಿಭೇಶ್ ತಳ್ಳಿದ್ದ. ಆಕೆಯ ಬೆತ್ತಲೆ ಚಿತ್ರಗಳನ್ನು ತೆಗೆದಿದ್ದಲ್ಲದೆ, ತನ್ನ ಸ್ನೇಹಿತರ ಕಾಮತೃಷೆ ತೀರಿಸದಿದ್ದರೆ ಆ ಚಿತ್ರಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸುತ್ತಿದ್ದ ಎಂದು ಹೆಂಡತಿ ಆರೋಪಿಸಿದ್ದಾಳೆ.

ಗಂಡನ ಆಘಾತಕಾರಿ ನಡೆಯನ್ನು ಪ್ರತಿರೋಧಿಸಿದಾಗ ಆಕೆಯನ್ನು ವಿಭೇಶ್ ಥಳಿಸಿದ್ದಾನೆ. ಈ ವ್ಯೂಹದಿಂದ ಪಾರಾಗಲು ಸಾಧ್ಯವಿಲ್ಲದೆ ಕೆಲ ದಿನಗಳ ಕಾಲ ಹೆಂಡತಿ ಬೆಲೆವೆಣ್ಣಾಗಿ ಗಂಡನ ಸ್ನೇಹಿತರು ಮತ್ತು ಕೆಲ ವಿಟಪುರುಷರ ಭೋಗದ ವಸ್ತುವಾಗಿದ್ದಾಳೆ. ಆತನ ಹಣದಾಸೆ ಮತ್ತು ವಿಕೃತಿ ವಿಪರೀತವಾದಾಗ ತಾಳಲಾರದೆ ಪೊಲೀಸರಿಗೆ ದೂರು ನೀಡಿದ್ದಾಳೆ. ಬಂಧಿತ ವಿಭೇಶ್‌ಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+