KFA ವಿಮಾನಗಳು ಸದ್ಯಕ್ಕೆ ಮೇಲೇಳುವುದಿಲ್ಲ

ಆರ್ಥಿಕವಾಗಿ ಚೇತರಿಸಿಕೊಳ್ಳಾಲಾಗದಷ್ಟು ಧರೆಗಿಳಿದಿರುವ KFAನಲ್ಲಿ ತಾನು ಹೂಡಿಕೆ ಮಾಡುವುದಿಲ್ಲ ಎಂದು ಅಬು ಧಾಬಿ ಏರ್ ಲೈನ್ಸ್ ಕಂಪನಿ ತಿಳಿಸಿದೆ. ಈ ಮಧ್ಯೆ, ವಿಜಯ್ ಮಲ್ಯಗೆ ಸಂಕಷ್ಟಗಳು ಕಾಡುವುದು ತಪ್ಪಿಲ್ಲ. ಮಲ್ಯರ ಖಾಸಗಿ ವಿಮಾನ, 450 ಕೋಟಿ ರೂ. ಮೌಲ್ಯದ ವೈಭವೋಪೇತ ವಿಮಾನ ಈಗ ಜಫ್ತಿಗೆ ಬಂದು ನಿಂತಿದೆ.
ಆದರೆ ಆ ವಿಮಾನವನ್ನೂ ಮಲ್ಯ ಸಾಹೇಬರು ಈಗಾಗಲೇ ಅಡ ಇಟ್ಟಿರುವುದರಿಂದ ತೆರಿಗೆ ಇಲಾಖೆಗೆ ಅದರಿಂದಲೂ ಏನೂ ಗಿಟ್ಟುವುದಿಲ್ಲ! ಈ ವಿಮಾನ ಕೇಮನ್ ದ್ವೀಪದ ಕಂಪನಿಯದ್ದಾಗಿದ್ದು. ಈಗಾಗಲೇ ಆ ವಿಮಾನವನ್ನು ಅಲ್ಲಿನ ಬ್ಯಾಂಕ್ ಒಂದರಲ್ಲಿ ಅಡ ಇಡಲಾಗಿದೆ ಎಂದು KFA ವಕ್ತಾರರು ಹೇಳಿದ್ದಾರೆ.
ಸುಮಾರು 70 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಉದ್ಯಮಿ ವಿಜಯ್ ಮಲ್ಯಗೆ ಸೇರಿದ ಬೆಲೆಬಾಳುವ ಖಾಸಗಿ ವಿಮಾನವನ್ನು ಸೇವಾ ತೆರಿಗೆ ಇಲಾಖೆ ತನ್ನ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಗಮನಾರ್ಹವೆಂದರೆ, ಈ ಹಿಂದೆ ಕೂಡಾ ಇದೇ ಕಾರಣಕ್ಕಾಗಿ ಮಲ್ಯ ಅವರ ಎರಡು ವಿಮಾನಗಳನ್ನು ಆದಾಯ ತೆರಿಗೆ ಇಲಾಖೆ ತನ್ನ ವಶಕ್ಕೆ ತೆಗೆದುಕೊಂಡಿತ್ತು.
KFA ವಿಮಾನಗಳು ಸದ್ಯಕ್ಕೆ ಮೇಲೇಳುವುದಿಲ್ಲ:
ಈ ಮಧ್ಯೆ, ಕಿಂಗ್ ಫಿಶರ್ ಏರ್‌ಲೈನ್ಸ್‌ಗೆ ಮತ್ತೊಂದು ಆಘಾತವುಂಟಾಗಿದೆ. KFA ಪುನರುಜ್ಜೀವನದ ಸಂಬಂಧ ವಿಜಯ್ ಮಲ್ಯ ಸಲ್ಲಿಸಿರುವ ವರದಿ ಸೂಕ್ತವಾಗಿಲ್ಲ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ಅಭಿಪ್ರಾಯಪಟ್ಟಿದೆ. ಮಲ್ಯ ಸಲ್ಲಿಸಿರುವ ವರದಿ ಅನ್ವಯ 'ಮೊದಲ ಹಂತದಲ್ಲಿ 650 ಕೋಟಿ ರೂ. ಹೂಡಿಕೆ ಮಾಡುವುದಾಗಿ ಹೇಳಿದ್ದಾರೆ. ಆದರೆ ಕಂಪನಿಯ ಸುಗಮ ಮತ್ತು ನಿಯಮಿತ ಹಾರಾಟಕ್ಕೆ ಈ ಹಣ ಯಾವುದಕ್ಕೂ ಸಾಲದು.
ಜತೆಗೆ ಏರ್‌ಪೋರ್ಟ್ ನಿರ್ವಾಹಕರ ಬಾಕಿ ಪಾವತಿ ಬಗ್ಗೆ ವರದಿಯಲ್ಲಿ ಯಾವುದೇ ಮಾಹಿತಿ ಇಲ್ಲ. ಇನ್ನು ಸಿಬ್ಬಂದಿಗೆ ನೀಡಬೇಕಿರುವ ಬಾಕಿ ಹಣದ ಬಗ್ಗೆಯೂ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲ. ಈ ಎಲ್ಲಾ ಸಂಗತಿಗಳು ಕಂಪನಿಯ ಸುಗಮ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡುವುದಿಲ್ಲ. ಹಾಗಾಗಿ, KFA ಪುನಶ್ಚೇತನ ಪ್ಲಾನ್ ಗೆ ಅಂಕಿತ ಹಾಗುವುದು ಸಾಧ್ಯವಿಲ್ಲ' ಎಂದು DGCA ಮೂಲಗಳುಬ ತಿಳಿಸಿವೆ
ಹಾಗಾಗಿ KFA ವಿಮಾನಗಳು ಸದ್ಯಕ್ಕೆ ನೆಲಬಿಟ್ಟು ಮೇಲೇಳುವುದು ಕಷ್ಟವೆನ್ನಿಸಿದೆ.












Click it and Unblock the Notifications