ಸೋನಿಯಾ ಗಾಂಧಿ ಮಾಟಗಾತಿ ಎಂದು ಹೇಳಿಲ್ಲಪ್ಪ

ಬೆಂಗಳೂರು, ಜ.7: ಫೇಸ್ ಬುಕ್ ನಲ್ಲಿ ಸೋನಿಯಾ ಗಾಂಧಿ ಅವರಿಗೆ ಅಪಮಾನವಾಗುವ ರೀತಿ ಏನ್ನನ್ನು ನಾನು ಹಾಕಿಲ್ಲ. ಸೋನಿಯಾ ಗಾಂಧಿ ಮಾಟಗಾತಿ ಎಂದಿಲ್ಲ ಎಂದು ಬಿಜೆಪಿ ಯುವ ಘಟಕದ ಮುಖ್ಯಸ್ಥ ಅನುರಾಗ್ ಠಾಕೂರ್ ಅವರು ಸ್ಪಷ್ಟಪಡಿಸಿದ್ದಾರೆ.

ಅಸಲಿಗೆ ಅದು ನನ್ನ ನೈಜ ಫೇಸ್ ಬುಕ್ ಅಕೌಂಟ್ ಅಲ್ಲವೇ ಅಲ್ಲ. ಯಾವುದೋ ನಕಲಿ ಅಕೌಂಟ್ ನಲ್ಲಿ ಏನೋ ಕಾಮೆಂಟ್ ಬಂದರೆ ಅದನ್ನು ತೆಗೆದುಕೊಂಡು ದೊಡ್ಡದಾಗಿ ಪ್ರಚಾರ ಮಾಡಿದ ದಿನಪತ್ರಿಕೆಗೆ ಬುದ್ಧಿ ಇಲ್ಲ. ಪ್ರಕಟಿಸುವ ಮೊದಲು ನನ್ನನ್ನು ಒಮ್ಮೆ ಕೇಳಬಹುದು. ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಎಂದಿಗೂ ಆಡಿಲ್ಲ. ಸೋನಿಯಾ ಗಾಂಧಿ ಅವರ ಮೇಲೆ ನನಗೇನು ವೈಯಕ್ತಿಕ ದ್ವೇಷವಿಲ್ಲ ಎಂದು ಅನುರಾಗ್ ಸ್ಪಷ್ಟಪಡಿಸಿದ್ದಾರೆ.

Anurag Thakur disowns controversial FB post

ನಾನು ಈ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮ ಮಿತ್ರರನ್ನು ಕೇಳಿಕೊಳ್ಳುತ್ತೇನೆ. ನಾನು ಸೋನಿಯಾ ಅವರ ಬಗ್ಗೆ ಕೆಟ್ಟದಾಗಿ ಏನ್ನನ್ನೂ ಹೇಳಿಲ್ಲ. ಫೇಸ್ ಬುಕ್ ನಲ್ಲಿ ಕಾಮೆಂಟ್, ಪೋಸ್ಟ್ ಹಾಕಿಲ್ಲ. ಈ ಹಿಂದೆ ಕೂಡಾ ಕಾಮೆಂಟ್ ಮಾಡಿಲ್ಲ ಮುಂದೆ ಕೂಡಾ ಮಾಡುವುದಿಲ್ಲ. ದಯವಿಟ್ಟು ಅಪಪ್ರಚಾರ ಮಾಡುವುದನ್ನು ನಿಲ್ಲಿಸಿ ಎಂದು ಅನುರಾಗ್ ಕೇಳಿಕೊಂಡಿದ್ದಾರೆ.

ಇತ್ತೀಚೆಗೆ ಬಿಜೆಪಿ ಯುವ ಘಟಕದ ಮುಖ್ಯಸ್ಥ ಅನುರಾಗ್ ಮೇಲೆ ಟಿವಿ ಮಾಧ್ಯಮಗಳ ಟಾರ್ಗೆಟ್ ಆಗಿದ್ದರು. ಅನುರಾಗ್ ಠಾಕೂರ್ ಅವರು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಸೋನಿಯಾ ಗಾಂಧಿ ಅಷ್ಟೇ ಅಲ್ಲದೆ, ಮಹೇಶ್ ಭಟ್, ಶರ್ಲಿನ್ ಛೋಪ್ರಾ, ಸನ್ನಿ ಲಿಯೋನ್ ಹಾಗೂ ಪೂನಂ ಪಾಂಡೆ ಅವರಿಗೂ ಚುರುಕು ಮುಟ್ಟಿಸುವಂಥ ಕಾಮೆಂಟ್ ಗಳನ್ನು ಹಾಕಿದ್ದರು ಎಂಬ ಆರೋಪವಿದೆ.

ಸೋನಿಯಾ ಗಾಂಧಿ ಅವರ ಬಗ್ಗೆ ಬಂದ "India is the place where the top leaders of the country are puppets in the hands of a (dayan) witch," ಕಾಮೆಂಟ್ ಕಾಂಗ್ರೆಸ್ಸಿಗರನ್ನು ಕೆರಳಿಸಿತ್ತು.

ಇದಕ್ಕೂ ಮುನ್ನ ಇಂಡಿಯಾದಲ್ಲಿ ಡರ್ಟಿ ಪಿಕ್ಚರ್ ಗೆ ರಾಷ್ಟ್ರೀಯ ಪುರಸ್ಕಾರ ಸಿಗುತ್ತದೆ. ಮಹೇಶ್ ಭಟ್ ಎಂಬುವನು ಮಗಳ ಜೊತೆ ಸೆಕ್ಸ್ ಜೊತೆ ಮಾತುಕತೆ ಮಾಡುತ್ತಾನೆ. ಶರ್ಲಿನ್ ಛೋಪ್ರಾ ಪ್ಲೇಬಾಯ್ ಗಾಗಿ ಬೆತ್ತಲಾಗುತ್ತಾಳೆ. ವಿದೇಶಿ ಪೋರ್ನ್ ಸ್ಟಾರ್ ಹುಟ್ಟುಹಬ್ಬವನ್ನು ಇಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಬೆತ್ತಲಾಗುತ್ತೇನೆ ಎಂದು ಪೂನಂ ಪಾಂಡೆ ಆಗಾಗ್ಗೆ ಹೇಳುತ್ತಾ ಮಜಾ ತೆಗೆದುಕೊಳ್ಳುತ್ತಾಳೆ ಎಂದು ಅನುರಾಗ್ ಇನ್ನೊಂದು ಪೋಸ್ಟ್ ಹೇಳುತ್ತದೆ ಎಂದು ಪತ್ರಿಕೆ ವರದಿ ಮಾಡಿತ್ತು.

ಒಂದೆಡೆ ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಅವರು 'ಸೆಕ್ಸಿ' ಹೇಳಿಕೆಗಳ ಮೂಲಕ ಟೀಕೆಗೆ ಗುರಿಯಾಗುತ್ತಿದ್ದರೆ, ಬಿಜೆಪಿ ಯುವ ನಾಯಕ ಅನುರಾಗ್ ಗೂ ಕೂಡಾ ಇಂಥದ್ದೇ ಕಾಟ ಆರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+