ಕೆಬಿಸಿ: ಆಗ ಸುಶೀಲ್ ಕುಮಾರ್, ಈಗ್ಯಾರು ಗೊತ್ತಾ?

ಬಾಲಿವುಡ್ ಮೇರುನಟ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿರುವ KBC 6ನೇ ಆವೃತ್ತಿಯಲ್ಲಿ 5 ಕೋಟಿ ರೂ. ಗೆದ್ದ ಮೊದಲ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಉತ್ತರ ಮುಂಬೈನ ಗೃಹಿಣಿ! ಈ ಎಪಿಸೋಡ್ ಪ್ರಸಾರವಾಗುವ ಸಮಯ, ಜಯಶಾಲಿ ಬಗೆಗಿನ ಹೆಚ್ಚಿನ ವಿವರ ಇನ್ನೂ ಬಹಿರಂಗವಾಗಿಲ್ಲ.
27 ವರ್ಷದ ಮುಂಬೈನ ಗೃಹಿಣಿ ಸುರಮೀತ್ ಕೌರ್ ಸಹಾನೆ ಈ ಬಾರಿ 5 ಕೋಟಿ ರೂಪಾಯಿ ಗೆದ್ದು, ಕೆಬಿಸಿ ಎಂಬ ಈ ಜನಪ್ರಿಯ ಕಾರ್ಯಕ್ರಮದಲ್ಲಿ ಅಗ್ರ ಬಹುಮಾನ ಗಳಿಸಿದ ಮೊದಲ ಮಹಿಳಾ ಸ್ಪರ್ಧಿ ಎಸಿಸಿಕೊಂಡಿದ್ದಾರೆ.
ಕಳೆದ ವರ್ಷ ಬಿಹಾರದ ಸುಶೀಲ್ ಕುಮಾರ್ 5 ಕೋಟಿ ರೂ. ಬಹುಮಾನ ಗೆದ್ದಿರುವುದು ಜನಮಾನಸದಲ್ಲಿ ಇನ್ನೂ ಹಸಿರಿರುವಾಗಲೇ ಮುಂಬೈನ ಸುರಮೀತ್ ಅವರು ಜಯಶಾಲಿಯಾಗಿರುವುದು ಗಮನಾರ್ಹವಾಗಿದೆ.












Click it and Unblock the Notifications