ಪಾಕ್ ಕ್ರಿಕೆಟ್ ಮಂಡಳಿಯಿಂದ ಭಾರತದ ಧ್ವಜಕ್ಕೆ ಅಗೌರವ

ಬೆಂಗಳೂರು, ಡಿ.27: ಪಾಕ್ ಕ್ರಿಕೆಟ್ ಮಂಡಳಿಯ ಅಧಿಕೃತ ವೆಬ್ ಸೈಟಿನಲ್ಲಿ ಭಾರತದ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಲಾಗಿದೆ. ಭಾರತದ ಬಾವುಟದಲ್ಲಿ ಕೇಸರಿ ಬಣ್ಣ ಕೆಳಗಿದೆ. ಅಂದರೆ ಬಾವುಟವನ್ನು ತಲೆಕೆಳಗೆ ಮಾಡಲಾಗಿದೆ.

ಉಭಯ ರಾಷ್ಟ್ರಗಳ ಸಂಬಂಧ ಸುಧಾರಣೆಗಾಗಿ ಕ್ರಿಕೆಟ್ ಬಾಂಧ್ಯವಕ್ಕೆ ಮರುಜೀವ ನೀಡಲಾಗಿದೆ. ಐದು ವರ್ಷಗಳ ಬಳಿಕ ನೆರೆಹೊರೆಯ ರಾಷ್ಟ್ರಗಳ ನಡುವೆ ಕ್ರಿಕೆಟ್ ಬಾಂಧವ್ಯ ಪುನರ್ ಸ್ಥಾಪಿತವಾಗಿರುವ ಈ ಘಳಿಗೆಯಲ್ಲಿ ಭಾರತದ ರಾಷ್ಟ್ರ ಧ್ವಜಕ್ಕೆ ಹೀಗೆ ಅವಮಾನ ಮಾಡಿರುವುದು ಅನಪೇಕ್ಷಣೀಯವಾಗಿದೆ.

pcb-website-disrespects-indian-tri-colour-national-flag

ಭಾರತದ ರಾಷ್ಟ್ರ ಧ್ವಜ ನೀತಿ ಸಂಹಿತೆ ಪ್ರಕಾರ ಕೇಸರಿ ಬಣ್ಣವನ್ನು ಕೆಳಗಿನ ಭಾಗದಲ್ಲಿ ತೋರಿಸಿದರೆ ಅದು ಪ್ರತಿಭಟನೆಯ ಸಂಕೇತವಾಗುತ್ತದೆ. ಅಪಾಯ/ಸಂಕಟದ ಸೂಚನೆಯಾಗಿರುತ್ತದೆ.

ಪಾಕಿಸ್ತಾನ ಉದ್ದೇಶಪೂರ್ವಕವಾಗಿಯೇ ಈ ಕೃತ್ಯವೆಸಗಿದೆ. ಇಲ್ಲವಾದಲ್ಲಿ ಪಾಕ್ ಕ್ರಿಕೆಟ್ ಮಂಡಳಿಯ ಅಧಿಕೃತ ವೆಬ್ ಸೈಟಿನಲ್ಲಿ ಇಂತಹ ಅಚಾತುರ್ಯ ನಡೆಯುವುದಾದರೂ ಹೇಗೆ? ಎಂಬ ಪ್ರಶ್ನೆ ಕಾಡುತ್ತಿದೆ.

ಭಾರತದ ರಾಷ್ಟ್ರ ಧ್ವಜ ಶಿಷ್ಟಾಚಾರದ ಪ್ರಕಾರ ಹೀಗೆ ಬಾವುಟಕ್ಕೆ ಅವಮಾನ ಮಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಸಾರ್ವಜನಿಕವಾಗಿ ಹೀಗೆ ಬಾವುಟಕ್ಕೆ ಅಪಮಾನ ಮಾಡಿದರೆ ಅದಕ್ಕೆ ಕಠಿಣ ಶಿಕ್ಷೆಯನ್ನು ನಿಗದಿಪಡಿಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+