ಬಿಜೆಪಿ ಅಧ್ಯಕ್ಷ ಈಶ್ವರಪ್ಪ ಮನೆಯಲ್ಲಿ ಏನೇನು ಸಿಕ್ತು?

ಇದು ಶಿವಮೊಗ್ಗದ ಮನೆಯಲ್ಲಿ ಮೂರು ಕಡೆಗಳಲ್ಲಿ ಮಾತ್ರ ದೊರೆತ ಚರಾಸ್ತಿಯಾಗಿದೆ. ಇನ್ನೂ 4 ಕಡೆ ದಾಳಿ ನಡೆದಿದೆ. ಅದರ ವಿವರ ಬರಬೇಕಿದೆ. ದಾಳಿ ಮುಂದುವರಿದಿದ್ದು, ದಾಳಿಯ ಸಂಪೂರ್ಣ ವಿವರ ಇನ್ನೂ ಬಹಿರಂಗವಾಗಿಲ್ಲ.
ಇನ್ನು, ಬೆಂಗಳೂರಿನಲ್ಲಿ ನಡೆದ ದಾಳಿಯ ವೇಳೆ ಏನೆಲ್ಲ ಸಿಕ್ಕಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಈ ಮಧ್ಯೆ, ಲೋಕಾಯುಕ್ತ ಪೊಲೀಸರು ಬೆಂಗಳೂರಿನ ವಸಂತನಗರದಲ್ಲಿರುವ ಈಶ್ವರಪ್ಪ ಅವರ ಮನೆಯಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಬೆಂಗಳೂರಿನ ಮನೆಯಲ್ಲಿ ಮೂರು ಲಾಕರುಗಳು ಪತ್ತೆಯಾಗಿವೆ. ಆದರೆ ಅವುಗಳ ಬೀಗ ಭದ್ರವಾಗಿದ್ದು, ಲೋಕಾ ಪೊಲೀಸರು ಇನ್ನಷ್ಟೇ ಅವುಗಳನ್ನು ಒಡೆದು ಒಳಗೇನಿದೆ ಎಂಬುದನ್ನು ಪರಿಶೀಲಿಸಬೇಕಾಗಿದೆ.












Click it and Unblock the Notifications