ತಂಬಾಕು, ಆಲ್ಕೊಹಾಲ್ ಮೇಲೆ 'ಪಾಪದ ತೆರಿಗೆ'

goi-introduction-of-sin-tax-to-curb-use-alcohol-tobacco
ನವದೆಹಲಿ, ಡಿ.24: ಮೇಲ್ತೆರಿಗೆಗಳು ಸಾಮಾನ್ಯವಾಗಿ ಸತ್ ಕಾರಣಕ್ಕಾಗಿ ಬಳಕೆಯಾಗುತ್ತವೆ. ಉದಾಹರಣೆಗೆ ಶೈಕ್ಷಣಿಕ ಸೆಸ್. ಅದು ಶಿಕ್ಷಣದ ಉನ್ನತಿಗಾಗಿ ಬಳಕೆಯಾಗುತ್ತದೆ.

ಅದನ್ನು 'ಪ್ರಾಯಶ್ಚಿತ್ತ ತೆರಿಗೆ' ಅಂತಾದರೂ ಅನ್ನಿ ಅಥವಾ 'ಪಾಪದ ತೆರಿಗೆ' (sin tax) ಅಂತಾದರೂ ಅನ್ನಿ. ಒಟ್ಟಿನಲ್ಲಿ ಅಂತಹ ಒಂದು ಮೇಲ್ತೆರಿಗೆಯನ್ನು ಕಡ್ಡಾಯವಾಗಿ ಹೇರಲು ಸರಕಾರ ಸತ್ ಚಿಂತನೆ ನಡೆಸಿದೆ.

ಏನಪ್ಪಾ ಈಗಾಗಲೇ ಹತ್ತಾರು ತೆರಿಗೆಗಳನ್ನು ತೆತ್ತೂತೆತ್ತು ಜರ್ಝರಿತರಾಗಿದ್ದೇವೆ. ಅಂಥಹುದರಲ್ಲಿ ಇದ್ಯಾವುದಿದು ಮೇಲ್ ತೆರಿಗೆ ಎಂದು ಘಾಸಿಗೊಳ್ಳಬೇಡಿ. ಇದು ಒಳ್ಳೆಯದಕ್ಕೇ ಬಂದಿದೆ. ಆದರೆ ಕುಡಿದು/ಸೇದಿ ಆರೋಗ್ಯ ಹಾಳು ಮಾಡಿಕೊಳ್ಳುವವರಿಗೆ ಮಾತ್ರ ಇದು ಅನ್ವಯವಾಗುತ್ತದೆ.

ಅಂದರೆ ಮದ್ಯ ಮತ್ತು ತಂಬಾಕು ಪದಾರ್ಥ ಸೇವಿಸುವವರು ಇನ್ಮುಂದೆ ಒಂದಷ್ಟು ತೆರಿಗೆಯನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಮುಖ್ಯವಾಗಿ ಈ ಮಾರಕ ಪದಾರ್ಥಗಳ ಸಹವಾಸ ಮಾಡುವವರನ್ನು ಅದರಿಂದ ದೂರವಿಡುವುದು ಇದರ ಉದ್ದೇಶ.

ಅಂದರೆ ಹೆಚ್ಚು ತೆರಿಗೆ ಪಾವತಿಸಿ, ದುಬಾರಿ ಸಹವಾಸಕ್ಕೆ ಬೀಳುವ ಬದಲು ಅದನ್ನು ವರ್ಜಿಸುವ ಆಲೋಚನೆ ಮಾಡಲಿ ಎಂಬ ಸದಾಶಯ. ಮತ್ತೊಂದು, ಹೀಗೆ ಹೆಚ್ಚುವರಿಯಾಗಿ ಕ್ರೋಡೀಕರಿಸುವ ತೆರಿಗೆಯನ್ನು ಅದರಿಂದ ಸಂತ್ರಸ್ತರಾಗುವವರಿಗೆ ಒಂದಷ್ಟು ಸಂಜೀವಿನಿಯಾಗಿ ಬಳಸಲು.

2012-2017 ಅವಧಿಯ 12ನೆಯ ಪಂಚವಾರ್ಷಿಕ ಯೋಜನೆಯಲ್ಲಿ ಇದನ್ನು ಕಡ್ಡಾಯವಾಗಿ ಜಾರಿಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇದೇ ವಾರ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯಲ್ಲಿ ಇದು ಪ್ರಸ್ತಾಪಕ್ಕೆ ಬರುವ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+