ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ : ಮಹಿಳೆಯ ಮೇಲೆ ಅತ್ಯಾಚಾರ

ದೆಹಲಿಯ ವೆಲ್ಕಮ್ ನಗರದಲ್ಲಿ 40 ವರ್ಷದ ಮಹಿಳೆಯ ಮೇಲೆ ಮೂರು ಜನರ ಗುಂಪು ಸಾಮೂಹಿಕ ಅತ್ಯಾಚಾರ ನಡೆಸಿ ಪರಾರಿಯಾಗಿದ್ದಾರೆ. ಮೂವರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು ಇನ್ನೊಬ್ಬನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಐದು ದಿನಗಳ ಹಿಂದೆ ಚಲಿಸುತ್ತಿರುವ ಬಸ್ಸಿನಲ್ಲಿ 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಇನ್ನೂ ಜನಮನದಲ್ಲಿ ಮಾಸುವ ಮುನ್ನವೇ ಮತ್ತೊಂದು ಅತ್ಯಾಚಾರ ಪ್ರಕರಣ ರಾಜಧಾನಿಯ ನಾಗರಿಕರನ್ನು ಅಕ್ಷರಸಃ ಬೆಚ್ಚಿ ಬೀಳಿಸಿದೆ.
ಈ ಮಧ್ಯೆ ರಾಜಧಾನಿ ದೆಹಲಿಯಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಐದನೇ ದಿನವೂ ಪ್ರತಿಭಟನೆ ಮುಂದುವರಿದಿದ್ದು, ಇಂದು ಶನಿವಾರ (ಡಿ 22) ಸಾವಿರಾರು ಮಂದಿ ಪ್ರತಿಭಟನೆಕಾರರು ಇಂಡಿಯಾ ಗೇಟಿನ ಮೂಲಕ ರಾಷ್ಟ್ರಪತಿ ಭವನಕ್ಕೆ ತೆರಳುತ್ತಿದ್ದಾರೆ.
ಪ್ರತಿಭಟನಾಕಾರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಜಲಫಿರಂಗಿ ಪ್ರಯೋಗಿಸುತ್ತಿದ್ದಾರೆ. ಮಹಿಳೆಯರು,ಯುವತಿಯರು, ವಿದ್ಯಾರ್ಥಿಗಳ ' we want justice ' ಎನ್ನುವ ಕೂಗು, ಆಕ್ರೋಶ ಮುಗಿಲು ಮುಟ್ಟಿದೆ.
2012ರಲ್ಲಿ ದೆಹಲಿಯಲ್ಲಿ ಒಟ್ಟು 635 ಅತ್ಯಾಚಾರ ಪ್ರಕರಣ ದಾಖಲಾಗಿದ್ದು ಇದರಲ್ಲಿ 754 ಮಂದಿಯನ್ನು ಬಂಧಿಸಲಾಗಿದೆ ಗೃಹ ರಾಜ್ಯ ಸಚಿವ ರಾಮಚಂದ್ರನ್ ರಾಜ್ಯಸಭೆಗೆ ವರದಿ ನೀಡಿದ್ದಾರೆ.












Click it and Unblock the Notifications