ಶೇಮ್ : ರೇಪ್ ಕೇಸಲ್ಲಿ 2 ಸಂಸದರು, 6 ಶಾಸಕರು

ನವದೆಹಲಿ, ಡಿ.21 : ಕಳೆದ ನಾಲ್ಕು ದಿನಗಳಿಂದ ಅತ್ಯಾಚಾರದ ವಿರುದ್ಧ ಇಡೀ ಭಾರತವೇ ತಿರುಗಿ ಬಿದ್ದಿದೆ. ನವದೆಹಲಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ರೇಪ್ ಪ್ರಕರಣದ ನಂತರ ಜನ ಪ್ರತಿನಿಧಿಗಳ ಹುಳುಕುಗಳನ್ನು ಎಡಿಆರ್ ಸಂಸ್ಥೆ ಹೊರ ಹಾಕಿದೆ.

ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಜನಪ್ರತಿನಿಧಿಗಳ ವಿವರಗಳನ್ನು ಪ್ರಜಾಪ್ರಭುತವ ಸುಧಾರಣಾ ಸಂಸ್ಥೆ(ಎಡಿಆರ್) ಬಹಿರಂಗಪಡಿಸಿದೆ.

Why only drivers, many MPs and MLAs face rape cases

ಎಡಿಆರ್ ಸಂಸ್ಥೆ ಮಾಹಿತಿಯಂತೆ ಇಬ್ಬರು ಹಾಲಿ ಸಂಸದರು, ವಿವಿಧ ರಾಜ್ಯಗಳ ಆರು ಶಾಸಕರು ಅತ್ಯಾಚಾರ ಆರೋಪದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಜೊತೆಗೆ 36 ಶಾಸಕರು ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪಗಳಿಗೆ ಗುರಿಯಾಗಿದ್ದಾರೆ.

ಆರೋಪಗಳ ವಿಷಯಕ್ಕೆ ಬಂದರೆ ಪಕ್ಷಾತೀತವಾಗಿ ಜನಪ್ರತಿನಿಧಿಗಳು ಲಿಸ್ಟ್ ನಲ್ಲಿ ಸೇರಿದ್ದಾರೆ. ವಿಶೇಷ ಎಂದರೆ, ಜನಪ್ರತಿನಿಧಿಗಳು ಚುನಾವಣಾ ಆಯೋಗಕ್ಕೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಇಷ್ಟೇ ಅಲ್ಲದೆ, ಭ್ರಷ್ಟಾಚಾರ ಮುಕ್ತ ದೌರ್ಜನ್ಯ ಮುಕ್ತ ಸಮಾಜದ ಭರವಸೆ ನೀಡುವ ಪಕ್ಷಗಳು ಈ ಎಲ್ಲಾ ಆರೋಪಿತ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಿದೆ.

ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಗಳು ಬಿ ಫಾರಂ ನೀಡಿದೆ.

ತಮಿಳುನಾಡಿನ ಸೇಲಂ ಕ್ಷೇತ್ರದಿಂದ ಎಐಎಡಿಎಂಕೆ ಸದಸ್ಯರಾಗಿ ಆಯ್ಕೆಯಾಗಿರುವ ಎಸ್ ಸೇಮಲೈ ಮತ್ತು ಪಶ್ಚಿಮ ಬಂಗಾಳದ ತಮಲುಕ್ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ನಿಂದ ಆಯ್ಕೆಯಾಗಿರುವ ಸುವೇಂದು ಹದಿಕ್ಕರಿ ಅತ್ಯಾಚಾರ ಆರೋಪಕ್ಕೆ ಗುರಿಯಾಗಿರುವ ಸಂಸದರಾಗಿದ್ದಾರೆ.

ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಶಾಸಕರಾದ ಭಗವಾನ್ ಶರ್ಮ, ಅನೂಪ್ ಸಂದಾ, ಮನೋಜ್ ಕುಮಾರ್ ಪಾರಸ್, ಉತ್ತರ ಪ್ರದೇಶದ ಬಿಜೆಪಿಯ ಮೋಹದ್ ಅಲಿಂಖಾನ್ ಗುಜರಾತಿನ ಬಿಜೆಪಿ ಶಾಸಕ ಜೀತಾ ಬಾಯ್ ಆಹೀರ್, ಆಂಧ್ರಪ್ರದೇಶದ ತೆಲುಗು ದೇಶಂನ ಕಂಡಿಕುಂಟಾ ವೆಂಕಟಪ್ರಸಾದ್ ಅವರುಗಳು ಅತ್ಯಾಚಾರ ಆರೋಪ ಎದುರಿಸುತ್ತಿರುವ ಶಾಸಕರಾಗಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ನಡೆದ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಆತ್ಯಾಚಾರ ಆರೋಪ ಎದುರಿಸುತ್ತಿರುವ 27 ಮಂದಿ ಆರೋಪಿಗಳಿಗೆ ಟಿಕೆಟ್ ನೀಡಿದ್ದು, ಅದೃಷ್ಟವಶಾತ್ ಅವರು ಚುನಾವಣೆಯಲ್ಲಿ ಸೋತಿದ್ದಾರೆ ಎಂದು ಎಡಿಆರ್ ಸಂಸ್ಥೆ ಪ್ರಕಟಣೆಯಲ್ಲಿ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+